ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮನ್ನು ಬದುಕೋಕೆ ಬಿಡ್ರಪ್ಪ..ಯಾಕ್ ಇಷ್ಟು ಟಾರ್ಚರ್ ಕೊಡ್ತೀರಿ? ಕಿರಿಕ್ ಕೀರ್ತಿ

Last Updated 11 ಮಾರ್ಚ್ 2023, 10:26 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಕಿರಿಕ್ ಕೀರ್ತಿ (ಕೀರ್ತಿ ಶಂಕರಘಟ್ಟ) ಅವರು ತಮ್ಮ ಬಗ್ಗೆ ಅಪಪ್ರಚಾರ ಮಾಡುವ ನೆಟ್ಟಿಗರ ಮೇಲೆ ಗರಂ ಆಗಿದ್ದಾರೆ.

ಈ ಕುರಿತು ಅವರು ಶುಕ್ರವಾರ ವಿಡಿಯೊ ಒಂದನ್ನು ಹಂಚಿಕೊಂಡಿದ್ದು ‘ನಮ್ಮನ್ನು ಬದುಕೋಕೆ ಬಿಡ್ರಪ್ಪ..ಯಾಕ್ ಇಷ್ಟು ಟಾರ್ಚರ್ ಕೊಡ್ತೀರಿ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ಎಲ್ಲರಿಗೂ ವೈಯಕ್ತಿಕ ಜೀವನ ಇರುತ್ತೆ. ಅದನ್ನು ಗೌರವಿಸಿ. ಸೋಶಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿ ಹಬ್ಬಿಸುವುದು, ಅಪಪ್ರಚಾರ ಮಾಡುವುದು, ಕೀಳಾಗಿ ನಿಂದಿಸುವುದು ಮಾಡಬೇಡಿ. ನಿಮಗೂ ವೈಯಕ್ತಿಕ ಜೀವನ ಇರುತ್ತೆ, ಮೊದಲು ಅದನ್ನು ಸರಿಯಾಗಿ ನೋಡಿಕೊಳ್ಳಿ" ಎಂದು ಮನವಿ ಮಾಡಿದ್ದಾರೆ.

ಕೀರ್ತಿ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿದ್ದಕ್ಕೆ ಕೀರ್ತಿ ಅವರು ಈ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT