ಶನಿವಾರ, ಸೆಪ್ಟೆಂಬರ್ 26, 2020
22 °C

ರಾಮ ಮಂದಿರ ಶಿಲಾನ್ಯಾಸದ ದಿನವೇ ಟ್ರೆಂಡ್ ಆಗ್ತಿದೆ #LandOfRavanan

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುವ ದಿನವೇ ಟ್ವಿಟರ್‌ನಲ್ಲಿ #LandOfRavanan (ರಾವಣನ ಭೂಮಿ), #TamilsPrideRavanaa (ತಮಿಳರ ಹೆಮ್ಮೆ ರಾವಣ) ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ.

ಟ್ರೆಂಡಿಂಗ್ ಶುರುವಾದ ಆರಂಭದಲ್ಲಿ 'ತಮಿಳುನಾಡಿನಲ್ಲಿ ಶೀಘ್ರ ರಾವಣನ ದೇಗುಲ ನಿರ್ಮಿಸಲಾಗುವುದು. ರಾವಣ ಕೇವಲ ತಮಿಳುನಾಡಿನ ಹೆಮ್ಮೆಯಷ್ಟೇ ಅಲ್ಲ, ಅಖಂಡ ಭೂಮಂಡಲದ ಹೆಮ್ಮೆ' ಎಂದು ಕೆಲವರು ಟ್ವೀಟ್ ಮಾಡಿದ್ದರು.

'ನಾವು ತಮಿಳರು, ರಾವಣ ನಮ್ಮ ಪೂರ್ವಜ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ' ಎಂದೂ ಕೆಲವರು ಟ್ವೀಟ್ ಮಾಡಿದ್ದರು.

ಸಾಕಷ್ಟು ಮಂದಿ ತಮಿಳಿನ ಅಕ್ಷರಗಳಿರುವ ಪೋಸ್ಟರ್‌ನೊಂದಿಗೆ ಈ ಧಾಟಿಯ ಒಕ್ಕಣೆ ಟ್ವೀಟ್ ಮಾಡಲು ಆರಂಭಿಸಿದ ನಂತರ ಅದೇ ಹ್ಯಾಷ್‌ಟ್ಯಾಗ್ ಬಳಸಿಕೊಂಡು 'ರಾಮಾಯಣವನ್ನು ಸುಳ್ಳು ಎನ್ನುವವರೇ ರಾವಣ ತಮ್ಮ ಪೂರ್ವಜ ಎಂದು ಹೇಳಿಕೊಳ್ಳುತ್ತಿದ್ದಾರೆ' ಎಂಬ ಟ್ವೀಟ್‌ಗಳು ಹರಿದುಬಂದವು.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು