ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹನ್ ಭಾಗವತ್ ಖಾತೆಯ ಬ್ಲೂ ಟಿಕ್ ಪುನರ್‌ಸ್ಥಾಪಿಸಿದ ಟ್ವಿಟರ್

ಇಂದು ಬೆಳಿಗ್ಗೆ ಟ್ವಿಟರ್, ಭಾಗವತ್ ಅವರಿಗೆ ನೀಡಿದ್ದ ಬ್ಲೂ ಟಿಕ್‌ನ್ನು ತೆಗೆದು ಹಾಕಿತ್ತು
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಅವರ ಖಾತೆಯ ಬ್ಲೂ ಟಿಕ್‌ನ್ನು ಟ್ವಿಟರ್ ಪುನರ್‌ಸ್ಥಾಪಿಸಿದೆ.

ಇಂದು ಬೆಳಿಗ್ಗೆ ಟ್ವಿಟರ್, ಭಾಗವತ್ ಅವರಿಗೆ ನೀಡಿದ್ದ ಬ್ಲೂ ಟಿಕ್‌ನ್ನು ತೆಗೆದು ಹಾಕಿತ್ತು. ಅದಕ್ಕೂ ಮೊದಲು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯ ಬ್ಲೂ ಟಿಕ್‌ ಇದೇ ರೀತಿ ಮಾಡಿ ಪುನರ್ ಸ್ಥಾಪಿಸಲಾಗಿತ್ತು.

ಈ ವಿಚಾರ ಭಾರತೀಯ ಟ್ವಿಟರ್ ಬಳಕೆದಾರರನ್ನು ಕೆರಳಿಸಿತ್ತು. ಭಾರತೀಯರ ಬಗ್ಗೆ ಟ್ವಿಟರ್ ಮನಬಂದಂತೆ ನಡೆದುಕೊಳ್ಳುತ್ತಿದೆ ಎಂದು #TwitterBanInIndia ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟರ್ ಯಾವ ಖಾತೆ ಆರು ತಿಂಗಳಿನಿಂದ ನಿಷ್ಕ್ರೀಯವಾಗಿರುತ್ತದೆಯೋ ಅಂತಹ ಖಾತೆಗೆ ಬ್ಲೂ ಟಿಕ್ ತೆಗೆದು ಹಾಕಲಾಗುತ್ತದೆ. ಇದು ಸ್ವಯಂಚಾಲಿತವಾಗಿರುತ್ತದೆ. ಕನಿಷ್ಠ ಆರು ತಿಂಗಳಿಗೊಮ್ಮೆಯಾದರೂ ಲಾಗಿನ್ ಆಗಬೇಕು ಎಂದು ಹೇಳಿದೆ.

ಬ್ಲೂ ಟಿಕ್‌ ಹೊಂದಿರುವವರು ತಮ್ಮ ಖಾತೆ ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಯಮಗಳ ಪ್ರಕಾರ, ಖಾತೆಗಳು ಇಮೇಲ್ ವಿಳಾಸ, ಮೊಬೈಲ್‌ ಸಂಖ್ಯೆ, ಪ್ರೊಫೈಲ್ ಇಮೇಜ್ ಮತ್ತು ಖಾತೆ ಹೆಸರನ್ನು ಒಳಗೊಂಡಿರಬೇಕು. ಇದೆಲ್ಲವೂ ಇದ್ದರಷ್ಟೇ ಖಾತೆ ಪರಿಪೂರ್ಣ ಆಗಲಿದೆ.

ಟ್ವಿಟರ್‌ ತನ್ನ ಈ ನೀತಿಯ ಆಧಾರದಲ್ಲಿ ಎಷ್ಟು ಖಾತೆಗಳ ಬ್ಲೂ ಟಿಕ್‌ ಅನ್ನು ತೆಗೆದು ಹಾಕಿದೆ ಎಂಬುದರ ಕುರಿತು ಮಾಹಿತಿ ನೀಡಿಲ್ಲ.ಸಾರ್ವಜನಿಕ ಹಿತಾಸಕ್ತಿಯ ಖಾತೆಗಳನ್ನುನೀಲಿ ಬ್ಯಾಡ್ಜ್ ಖಚಿತಪಡಿಸುತ್ತದೆ. ಇದನ್ನು ಪಡೆಯಲು ಖಾತೆದಾರರು ದೃಢೀಕೃತ ಮಾಹಿತಿ ಪೂರೈಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT