ಬುಧವಾರ, ಏಪ್ರಿಲ್ 8, 2020
19 °C

ನಿರ್ಭಯಾ ಪ್ರಕರಣ: ‘ತಡವಾಗಿಯಾದರೂ ನ್ಯಾಯ ಸಿಕ್ತು’, ನೆಟ್ಟಿಗರಿಂದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಿರ್ಭಯಾ ಹಂತಕರಿಗೆ ಮರಣದಂಡನೆ ಜಾರಿ ಮಾಡಿದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಮಂದಿ ಸಂಭ್ರಮ ವ್ಯಕ್ತಪಡಿಸಿ ಸಂದೇಶಗಳನ್ನು ಪ್ರಕಟಿಸಿದ್ದಾರೆ.

‘ಗಲ್ಲು ಶಿಕ್ಷೆ ಜಾರಿಯಿಂದ ಸಂತ್ರಸ್ತೆಗೆ ನ್ಯಾಯ ದೊರೆತಂತಾಗಿದೆ’, ವಿಳಂಬವಾಗಿಯಾದರೂ ನ್ಯಾಯ ದೊರೆತಿದೆ’, ಇತ್ಯಾದಿ ಸಂದೇಶಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. #NirbhayaVerdict, #NirbhayaCaseConvicts, #NirbhayaNyayDivas, #Justice ಹ್ಯಾಷ್‌ಟ್ಯಾಗ್‌ಗಳು ಮುಂಜಾನೆಯೇ ಟ್ರೆಂಡ್ ಆಗಿವೆ.

ಇದನ್ನೂ ಓದಿ: 'ನಿರ್ಭಯಾ' ಪ್ರಕರಣ: ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಜಾರಿ

‘ಅಪರಾಧದ ಕ್ರೂರತೆಯು ಮಾನವೀಯತೆಯನ್ನು ಬೆಚ್ಚಿಬೀಳಿಸಿದೆ. ನ್ಯಾಯವು ಮಾನವರಲ್ಲಿನ ಅಪರಾಧ ಪ್ರವೃತ್ತಿಯನ್ನು ನಡುಗಿಸಬೇಕು’ ಎಂದು ಉದಯ್ ದೇರೆ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಮಾರ್ಚ್-20 ನಿರ್ಭಯಾ ದಿವಸ, ನಾಲ್ಕು ಕಾಮಪಿಶಾಚಿಗಳನ್ನು ಇಂದು ಗಲ್ಲಿಗೇರಿಸಲಾಯಿತು..!!’ ಎಂದು ಲಕ್ಷ್ಮಣ್ ಮಾನೆ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಈ ಕ್ಷಣದ ಬಗ್ಗೆ ಬಣ್ಣಿಸಲು ಪದಗಳೇ ಸಾಲುತ್ತಿಲ್ಲ. ಈ ಐತಿಹಾಸಿಕ ದಿನವನ್ನು ಕುಟುಂಬದವರ ಜತೆ ಮನೆಯಲ್ಲೇ ಆಚರಿಸುತ್ತೇನೆ’ ಎಂದು ಪೂಜಾ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಸುರಕ್ಷಿತ ಕೈಗಳಲ್ಲಿದೆ ಎಂಬ ಜನಸಾಮಾನ್ಯರ ನಂಬಿಕೆ ಉಳಿಸಿಕೊಂಡಿದ್ದಕ್ಕಾಗಿ ನ್ಯಾಯಾಂಗಕ್ಕೆ ಕೃತಜ್ಞತೆಗಳು. ಪ್ರಕರಣವನ್ನು ಧೈರ್ಯದಿಂದ ಎದುರಿಸಿದ ನಿರ್ಭಯಾ ತಂದೆ ತಾಯಿಗಳಿಗೆ ಪ್ರಣಾಮಗಳು. ಸೀಮಾ ಕುಶ್ವಾಹ ಅವರಿಗೂ ಪ್ರಣಾಮಗಳು’ ಎಂದು ರಂಜನಾ ವೊಹ್ರಾ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಇಂದಿನ ಬೆಳಗು ಶುಭ ಸುದ್ದಿಯೊಂದಿಗೆ ಆರಂಭವಾಗಿದೆ’ ಎಂದು ವರ್ಷಾ ಚೌಹಾಣ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇಂತಹ ಅನೇಕ ಸಂದೇಶಗಳು ಟ್ವಿಟರ್‌ನಲ್ಲಿ ಪ್ರಕಟವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು