ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಪರಿಷ್ಕರಣೆಯಿಂದ ಗೋಪ್ಯತೆಗೆ ಧಕ್ಕೆಯಿಲ್ಲ: ವಾಟ್ಸ್‌ಆ್ಯಪ್

Last Updated 12 ಜನವರಿ 2021, 16:29 IST
ಅಕ್ಷರ ಗಾತ್ರ

ನವದೆಹಲಿ: ತನ್ನ ವೇದಿಕೆಯಲ್ಲಿ ಬಳಕೆದಾರರ ದತ್ತಾಂಶ ಸುರಕ್ಷತೆಯ ಬಗೆಗಿನ ಕಳವಳ ಪರಿಹರಿಸಲು ಯತ್ನಿಸಿರುವ ವಾಟ್ಸ್‌ಆ್ಯಪ್, ಇತ್ತೀಚಿನ ನೀತಿ ಪರಿಷ್ಕರಣೆಯು ಸಂದೇಶಗಳ ಗೋಪ್ಯತೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮಂಗಳವಾರ ಹೇಳಿದೆ.

‘ಜಾಹೀರಾತು ಉದ್ದೇಶಗಳಿಗಾಗಿ ಬಳಕೆದಾರರ ಸಂಪರ್ಕ ಸಂಖ್ಯೆಗಳನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವುದಿಲ್ಲ. ವಾಟ್ಸ್‌ಆ್ಯಪ್ ಅಥವಾ ಫೇಸ್‌ಬುಕ್‌ಗಳು ಬಳಕೆದಾರರ ಸಂದೇಶಗಳನ್ನು ಓದಲು ಅಥವಾ ಬಳಕೆದಾರರ ನಡುವಿನ ಕರೆಗಳನ್ನು ಕೇಳಲು ಸಾಧ್ಯವಿಲ್ಲ’ ಎಂದು ಸಂಸ್ಥೆ ಒತ್ತಿಹೇಳಿದೆ.

ತನ್ನ ಸೇವಾ ನಿಯಮಗಳು ಮತ್ತು ಗೋಪ್ಯತೆ ನೀತಿ ನವೀಕರಣದಲ್ಲಿ ಬಳಕೆದಾರರ ಡೇಟಾವನ್ನು ಸಂಸ್ಕರಣೆ ಮಾಡುವ ಬಗ್ಗೆ ವಾಟ್‌ಆ್ಯಪ್ ಕಳೆದ ವಾರ ತನ್ನ ಬಳಕೆದಾರರಿಗೆ ಮಾಹಿತಿ ನೀಡಿತ್ತು. ಅದರನ್ವಯ ವಾಟ್ಸ್‌ಆ್ಯಪ್ ಸೇವೆ ಬಳಸುವುದನ್ನು ಮುಂದುವರಿಸಲು ಬಳಕೆದಾರರು 2021ರಫೆಬ್ರುವರಿ 8ರೊಳಗೆ ಹೊಸ ನಿಯಮಗಳು ಮತ್ತು ನೀತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಅದು ತಿಳಿಸಿತ್ತು.

ವಾಟ್ಸ್‌ಆ್ಯಪ್ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ಹರಿದಾಡುತ್ತಿವೆ. ಈ ಮಧ್ಯೆ ಅನೇಕ ಬಳಕೆದಾರರು ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಪ್ರತಿಸ್ಪರ್ಧಿ ಪ್ಲಾಟ್‌ಫಾರ್ಮ್‌ಗಳಿಗೆ ಸ್ಥಳಾಂತರಗೊಳ್ಳಲು ಪ್ರಾರಂಭಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಾಟ್ಸ್‌ಆ್ಯಪ್, ‘ಬಳಕೆದಾರರ ಸ್ನೇಹಿತರು ಹಾಗೂ ಕುಟುಂಬದವರ ಗೋಪ್ಯತೆಗೆ ಯಾವುದೇ ರೀತಿಯಲ್ಲಿ ಹೊಸ ನೀತಿಯು ಪರಿಣಾಮ ಬೀರುವುದಿಲ್ಲ ಎಂದು ನಾವು ಸ್ಪಷ್ಟವಾಗಿ ತಿಳಿಸ ಬಯಸುತ್ತೇವೆ’ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT