ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಕದ್ಮನೆ ನಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ 'ಪೊಮೇರಿಯನ್' ನಾಯಿ ಮನೆಯಿಂದ ಔಟ್

Last Updated 23 ಜುಲೈ 2019, 14:05 IST
ಅಕ್ಷರ ಗಾತ್ರ

ತಿರುವನಂತಪುರಂ: ಇಲ್ಲಿನ ಚಾಕ್ಕ ವರ್ಲ್ಡ್ ಮಾರ್ಕೆಟ್ ಹೊರಗೆ 3 ವರ್ಷದ ಪೊಮೇರಿಯನ್ ಹೆಣ್ಣು ನಾಯಿಯೊಂದನ್ನು ಯಾರೋ ಬಿಟ್ಟು ಹೋಗಿದ್ದರು.ಈ ನಾಯಿಯನ್ನು ಬಿಟ್ಟು ಹೋದ ಕಾರಣ- ಪಕ್ಕದ್ಮನೆ ನಾಯಿ ಜತೆ ಇದು ಅನೈತಿಕ ಸಂಬಂಧ ಹೊಂದಿದೆಯಂತೆ!.

ಅಂದಹಾಗೆ ಇದೇನೂ ತಮಾಷೆ ಪ್ರಸಂಗವಲ್ಲ.ತುಂಬಾ ಕಾಳಜಿಯಿಂದ ಮುದ್ದಾಗಿ ಬೆಳೆಸಿದ್ದ ನಾಯಿ ಸದಾಚಾರಕ್ಕೆ ಬದ್ಧವಾಗಿಲ್ಲ ಎಂಬ ಕಾರಣದಿಂದ ನಾಯಿಯ ಮಾಲೀಕರು ಅದನ್ನು ಮನೆಯಿಂದ ಹೊರಗಟ್ಟಿದ್ದಾರೆ.

ಮಾರ್ಕೆಟ್ ಹೊರಗೆ ನಾಯಿಯನ್ನು ಕಂಡ ದಾರಿಹೋಕರೊಬ್ಬರು ಪ್ರಾಣಿ ದಯಾಸಂಘ ಪೀಪಲ್ ಫಾರ್ ಅನಿಮಲ್ಸ್ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ.ಪೊಮೇರಿಯನ್ ನಾಯಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಪೀಪಲ್ ಫಾರ್ ಅನಿಮಲ್ಸ್ಸದಸ್ಯ ಶಮೀಮ್, ನಾನು ಆ ನಾಯಿಯನ್ನು ಮನೆಗೆ ಕರೆತಂದಿದ್ದೇನೆ.ಆಕೆ ತುಂಬಾ ಮುದ್ದಾಗಿದ್ದಾಳೆ.ಯಾರಾದರೂ ಅವಳನ್ನು ಶೀಘ್ರದಲ್ಲೇ ದತ್ತು ಪಡೆಯಲಿದ್ದಾರೆ.ತನ್ನ ಮನೆಯ ಮಾಲೀಕ ಕರೆದುಕೊಂಡು ಹೋಗಲು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಆಕೆ ಇದ್ದಾಳೆ ಎಂದು ಶಮೀಮ್ ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಯಾರೋ ಬಿಟ್ಟು ಹೋದ ಈ ಮುದ್ದಾದ ಬಿಳಿ ಬಣ್ಣದ ನಾಯಿಯ ಕೊರಳಪಟ್ಟಿಯಲ್ಲಿಪತ್ರವೊಂದುಸಿಕ್ಕಿದ್ದು, ಅದನ್ನು ಓದಿ ಶಮೀಮ್ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

ಪತ್ರದಲ್ಲಿ ಏನಿದೆ?
ಇದು ತುಂಬಾ ಒಳ್ಳೆ ನಾಯಿ. ಉತ್ತಮ ಹವ್ಯಾಸವೂ ಇದೆ.ಇದಕ್ಕೆ ತುಂಬಾ ಆಹಾರವೇನೂ ಬೇಡ. ಯಾವುದೇ ರೋಗಗಳಿಲ್ಲ, ಪ್ರತಿ ಐದು ದಿನಕ್ಕೊಮ್ಮೆ ಈಕೆಗೆ ಸ್ನಾನ ಮಾಡಿಸಲಾಗುತ್ತಿತ್ತು.ಈಕೆ ಬೊಗಳುತ್ತಾಳೆ ಅಷ್ಟೇ, ಮೂರು ವರ್ಷಗಳಲ್ಲಿ ಯಾರಿಗೂ ಕಚ್ಚಿಲ್ಲ. ಈಕೆಗೆ ತಿನ್ನಲು ಹಾಲು, ಮೊಟ್ಟೆ, ಬಿಸ್ಕತ್ತು ನೀಡಲಾಗುತ್ತದೆ.ಇಷ್ಟೆಲ್ಲಾ ವಿವರಣೆ ಆದ ನಂತರ ಕೊನೆಯ ಸಾಲು ಹೀಗಿದೆ.

ಈ ನಾಯಿ ಪಕ್ಕದ್ಮನೆ ನಾಯಿ ಜತೆ ಅನೈತಿಕ ಸಂಬಂಧ ಹೊಂದಿರುವ ಕಾರಣ ಇದನ್ನು ಬಿಟ್ಟು ಹೋಗುತ್ತಿದ್ದೇವೆ!

ನಾಯಿಗೆ ಬೆದೆ ಬಂದಿದೆ.ಹೀಗಿರುವಾಗ ಅದು ಸಮ್ಮನಿರುತ್ತದೆಯೇ? ಆ ಮನೆ ಮಾಲೀಕರು ತನ್ನ ನಾಯಿ ಮರಿ ಹಾಕುವುದು ಬೇಡ ಅಂತಿದ್ದರೆ ಅದನ್ನು ಕೋಣೆಯೊಳಗೆ ಕೂಡಿ ಹಾಕಬಹುದಿತ್ತು ಎಂದು ಶಮೀಮ್ ಪ್ರತಿಕ್ರಿಯಿಸಿದ್ದಾರೆ.

ಗಾಯಗೊಂಡ ನಾಯಿಗಳನ್ನು, ರೋಗವಿರುವ ನಾಯಿಗಳನ್ನು ಮಾಲೀಕರು ಬಿಟ್ಟು ಹೋಗಿದ್ದನ್ನು ನೋಡಿದ್ದೇನೆ.ಆದರೆ ಇಂತದೊಂದು ಪ್ರಕರಣ ಇದೇ ಮೊದಲು ಅಂತಾರೆ ಶಮೀಮ್.

ನಾಯಿಯ ಫೋಟೊ ಮತ್ತು ಅದರ ಕೊರಳಿನಲ್ಲಿ ಸಿಕ್ಕಿದ ಚೀಟಿ ಬಗ್ಗೆ ಪಿಎಫ್‌ಎ ಫೇಸ್‌ಬುಕ್ ಗ್ರೂಪ್‌ನಲ್ಲಿ ಶ್ರೀದೇವಿ.ಎಸ್.ಕರ್ಥಾ ಎಂಬವರು ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT