ಭಾನುವಾರ, ಜುಲೈ 3, 2022
27 °C

'ಎಣಿಕೆ ನಿಲ್ಲಿಸಿ': ಬಿಹಾರ ಚುನಾವಣೆಯ ತಮಾಷೆ ಟ್ವೀಟ್‌ಗಳು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬಿಹಾರ ಚುನಾವಣೆ ಕುತೂಹಲಕಾರಿಘಟ್ಟ ಮುಟ್ಟಿರುವಂತೆ ಟ್ವೀಟ್‌ ಲೋಕದಲ್ಲಿ ಕಾಮಿಡಿ ಗರಿಗೆದರಿದೆ. ಕೆಲವರು ಮತಯಂತ್ರಗಳನ್ನು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು 'ಮತ ಎಣಿಕೆ ನಿಲ್ಲಿಸಿ' ಎಂದು ಟ್ರಂಪ್ ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಚೀರುತ್ತಿದ್ದಾರೆ. ಕೆಲವರನ್ನು ಎಕ್ಸಿಟ್‌ ಪೋಲ್ ಸಮೀಕ್ಷೆಗಳು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ.

ಮಂಗಳವಾರ ಮುಂಜಾನೆಯಿಂದಲೂ #BiharElectionResults ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಬಿಹಾರ ಚುನಾವಣೆಗೆ ಸಂಬಂಧಿಸಿದ ಒಂದಿಷ್ಟು ತಮಾಷೆ ಟ್ವೀಟ್‌ಗಳು ಇಲ್ಲಿವೆ ನೋಡಿ...

'ನಾನು ದೊಡ್ಡ ಅಂತರದಿಂದ ಗೆದ್ದಾಗಿದೆ. ಮತ ಎಣಿಕೆ ನಿಲ್ಲಿಸಿ' ಎಂದು ಬಾಬು ರಾವಲ್ ಎಂಬುವವರು ತಮಾಷೆ ಮಾಡಿದ್ದಾರೆ.

'ಮತಗಟ್ಟೆ ಸಮೀಕ್ಷೆಗಳಿಗಿಂತಲೂ ಫಲಿತಾಂಶ ಉತ್ತಮವಾಗಿ ಬಂದಿದೆ. ಹೀಗಾಗಿ ಎನ್‌ಡಿಎಗೆ ಇದು ಸಂಭ್ರಮದ ಸಮಯ'.

ತೇಜಸ್ವಿಯನ್ನು ಮತಗಟ್ಟೆ ಸಮೀಕ್ಷೆಗಳು ಪ್ರಾಂಕ್ (ಕ್ಯಾಮೆರಾ ಮುಚ್ಚಿಟ್ಟು ಆಡುವ ಹುಡುಗಾಟ) ಆಗಿ ಬಳಸಿಕೊಂಡವು.

ಕಮಲಾ ಹ್ಯಾರಿಸ್ ಅವತಾರದಲ್ಲಿ ನಿತೀಶ್‌ ಕುಮಾರ್‌.

ಬಿಹಾರದ ಮುಂದಿನ ಮುಖ್ಯಮಂತ್ರಿಯನ್ನು ಭಾರತ ಕಾತರದಿಂದ ಎದುರು ನೋಡುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು