ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಬಳಕೆದಾರರಿಗೆ ಲೈಕ್ ಕೌಂಟ್ ಅಡಗಿಸುವ ಆಯ್ಕೆ

Last Updated 28 ಮೇ 2021, 5:41 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಬಳಕೆದಾರರಿಗೆ ಹೊಸ ಹಾಗೂ ಹಿಂದೆ ಪೋಸ್ಟ್ ಮಾಡಿದ ಫೋಟೊಗಳು ಮತ್ತು ವಿಡಿಯೊಗಳ ಲೈಕ್ ಕೌಂಟ್‌ಗಳನ್ನು ಅಡಗಿಸುವ ಆಯ್ಕೆಯನ್ನು ಪರಿಚಯಿಸಲಾಗಿದೆ. ಈ ಫೀಚರ್ ಸದ್ಯದಲ್ಲೇ ಭಾರತದಲ್ಲೂ ಲಭ್ಯವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

'ದಿ ವರ್ಜ್' ಮಾಹಿತಿ ಪ್ರಕಾರ ಹಲವಾರು ವರ್ಷಗಳ ಪ್ರಯೋಗದ ನಂತರ ಎಲ್ಲ ಪೋಸ್ಟ್‌ಗಳಲ್ಲಿ ಲೈಕ್ ಕೌಂಟ್‌ಗಳನ್ನು ಬಳಕೆದಾರರು ನೋಡುವುದನ್ನು ಅಡಗಿಸುವ ಫೀಚರ್ ಹೊರತರಲಾಗಿದೆ. ಹಳೆಯ ಹಾಗೂ ಹೊಸ ಪೋಸ್ಟ್‌ಗಳಲ್ಲಿ ಈ ಆಯ್ಕೆ ನೀಡಲಾಗಿದೆ.

ಎರಡೂ ಸಾಮಾಜಿಕ ಫ್ಲಾಟ್‌ಫಾರ್ಮ್‌ಗಳು ಕಳೆದ ಕೆಲವು ಸಮಯದಿಂದ ಈ ಕುರಿತು ಪ್ರಯೋಗ ನಡೆಸಿದ್ದು, ಹೇಗೆ ಪರಿಣಾಮಕಾರಿಯಾಗಿರಲಿದೆ ಎಂಬುದನ್ನು ಪರಿಶೀಲಿಸಿದೆ.

ಇನ್‌ಸ್ಟಾಗ್ರಾಂನಲ್ಲಿ ಜನರ ಆಸಕ್ತಿಯನ್ನು ಕುಗ್ಗಿಸಬಹುದೇ ಎಂಬುದನ್ನು ನೋಡಲು ಲೈಕ್ ಕೌಂಟ್‌ಗಳನ್ನು ಅಡಗಿಸಿಕೊಳ್ಳುವುದನ್ನು ಪರೀಕ್ಷಿಸಿದ್ದೇವೆ ಎಂದು ಇನ್‌ಸ್ಟಾಗ್ರಾಂ ವಕ್ತಾರರು ತಿಳಿಸಿದ್ದಾರೆ.

ಲೈಕ್ ಕೌಂಟ್‌ಗಳನ್ನು ಅಡಗಿಸುವುದರ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಮೂಡಿಬಂದಿವೆ. ಕೆಲವರು ಪ್ರಯೋಜನಕಾರಿ ಮತ್ತು ಇನ್ನು ಕೆಲವರು ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಟ್ರೆಂಡಿಂಗ್ ಅಥವಾ ಜನಪ್ರಿಯ ಪೋಸ್ಟ್‌ಗಳನ್ನು ಅರ್ಥಮಾಡಿಕೊಳ್ಳಲು ಬಳಕೆದಾರರು ಲೈಕ್ ಕೌಂಟ್‌ಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಆದರೆ ಒಬ್ಬ ಬಳಕೆದಾರನ ಅನುಭವವು ಇನ್ನೊಬ್ಬನಿಗಿಂತ ಭಿನ್ನವಾಗಿರುತ್ತದೆ. ಅವರ ಅಗತ್ಯತೆಗಳು ಬದಲಾಗುತ್ತವೆ. ಹಾಗಾಗಿ ಬಳಕೆದಾರರಿಗೆ ಆಯ್ಕೆಯನ್ನು ನೀಡುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ.

ಬ್ರಿಟನ್‌ನ ರಾಯಲ್ ಸೊಸೈಟಿ ಫಾರ್ ಪಬ್ಲಿಕ್ ಹೆಲ್ತ್ 2017ರಲ್ಲಿ ನಡೆಸಿದ ಅಧ್ಯಯನದಲ್ಲಿ ಯುವ ಜನಾಂಗದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪರಗಣಿಸಲಾಗಿತ್ತು. ಹಾಗಾಗಿ ಲೈಕ್ ಬಟನ್‌ಗಳನ್ನು ತೆಗೆದು ಹಾಕುವುದರಿಂದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಸಾಮಾಜಿಕ ಒತ್ತಡಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT