ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನಿಯಮಗಳ ಪಾಲನೆ ವರದಿ ನೀಡಿ: ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರದ ಸೂಚನೆ

Last Updated 27 ಮೇ 2021, 12:01 IST
ಅಕ್ಷರ ಗಾತ್ರ

ನವದೆಹಲಿ: ಹೊಸ ಡಿಜಿಟಲ್ ನಿಯಮಗಳ ಅನುಸರಣೆಯ ಸ್ಥಿತಿಯ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚಿಸಿದೆ.

ದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಈ ಮಾಹಿತಿ ಅತ್ಯಂತ ಅಗತ್ಯವಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯು ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ.

ಪಿಟಿಐಗೆ ಲಭ್ಯವಿರುವ ಟಿಪ್ಪಣಿಯ ಪ್ರಕಾರ, ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಪ್ರಕಾರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ನೇಮಕಗೊಂಡಿರುವ ಮುಖ್ಯ ನಿಯಮ ಪಾಲನೆಅಧಿಕಾರಿ (Chief Compliance Officer), ಕುಂದುಕೊರತೆ ಅಧಿಕಾರಿ ಮತ್ತು ನೋಡಲ್ ಸಂಪರ್ಕ ವ್ಯಕ್ತಿಯ ವಿವರಗಳನ್ನು ಮತ್ತು ಸಂಪರ್ಕ ಮಾಹಿತಿಯನ್ನು ಸಚಿವಾಲಯ ಕೋರಿದೆ.

‘ನಿಮ್ಮ ಮೂಲ ಕಂಪನಿ ಅಥವಾ ಇನ್ನಾವುದೇ ಅಂಗಸಂಸ್ಥೆ ಒಳಗೊಂಡಂತೆ, ಭಾರತದಲ್ಲಿ ವಿವಿಧ ಸೇವೆಗಳನ್ನು ಒದಗಿಸುವ ಕಂಪನಿಗಳಲ್ಲಿ ಕೆಲವು ಐಟಿ ಕಾಯ್ದೆ ಮತ್ತು ಮೇಲಿನ ನಿಯಮಗಳ ಸಂದರ್ಭದಲ್ಲಿ ಎಸ್‌ಎಸ್‌ಎಂಐಗಳ (ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು) ವ್ಯಾಖ್ಯಾನಕ್ಕೆ ಒಳಪಟ್ಟಿವೆ. ಅದರಂತೆ, ಈ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ಈ ಕೆಳಗಿನ ಮಾಹಿತಿಯನ್ನು ಒದಗಿಸಲು ನಿಮ್ಮನ್ನು ಕೋರಲಾಗಿದೆ ... ’ ಎಂದು ಸಚಿವಾಲಯ ಹೇಳಿದೆ.

ಸಾಮಾಜಿಕ ಮಾಧ್ಯಮ ವ್ಯಾಪ್ತಿಯಲ್ಲಿ ಬರುವ ಅಪ್ಲಿಕೇಶನ್‌ನ ಹೆಸರು, ವೆಬ್‌ಸೈಟ್ ಮತ್ತು ಸೇವೆಯಂತಹ ವಿವರಗಳ ಹೊರತಾಗಿ, ಸಚಿವಾಲಯವು ಮೂವರು ಪ್ರಮುಖ ಸಿಬ್ಬಂದಿಯ ವಿವರಗಳನ್ನು ಮತ್ತು ಭಾರತದ ವೇದಿಕೆಯ ಭೌತಿಕ ಸಂಪರ್ಕ ವಿಳಾಸವನ್ನು ಕೋರಿದೆ.

ಹೊಸ ನಿಯಮಗಳನ್ನು ಅನುಸರಿಸುವ ಸ್ಥಿತಿಗತಿಗಳ ಬಗ್ಗೆ ವರದಿ ಮಾಡಲು ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಕೇಳಿದೆ.

‘ನಿಮ್ಮನ್ನು ಎಸ್‌ಎಸ್‌ಎಂಐ ಎಂದು ಪರಿಗಣಿಸದಿದ್ದರೆ, ದಯವಿಟ್ಟು ನೀವು ಒದಗಿಸಿದ ಪ್ರತಿಯೊಂದು ಸೇವೆಗಳಲ್ಲಿ ನೋಂದಾಯಿತ ಬಳಕೆದಾರರ ಮಾಹಿತಿ ಒಳಗೊಂಡಂತೆ ಕಾರಣಗಳನ್ನು ಒದಗಿಸಿ. ಈ ನಿಯಮಗಳು ಮತ್ತು ಐಟಿ ಕಾಯ್ದೆ ಅನ್ವಯ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಪಡೆಯುವ ಹಕ್ಕನ್ನು ಸರ್ಕಾರ ಹೊಂದಿದೆ’ ಎಂದು ಸಚಿವಾಲಯ ತಿಳಿಸಿದೆ.

ಹೊಸ ನಿಯಮಗಳ ಅನ್ವಯ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್‌ನಂತಹ ದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳು ಮುಖ್ಯ ನಿಯಮ ಪಾಲನೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಕುಂದುಕೊರತೆ ಅಧಿಕಾರಿಗಳ ನೇಮಕ ಸೇರಿದಂತೆ ಹೆಚ್ಚುವರಿ ಮಾಹಿತಿಯನ್ನು ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT