ಬ್ಲೂ ಟಿಕ್ ವಿರುದ್ಧ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಯಿತು‘ತಿರಂಗಾ‘ ಟಿಕ್...

ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ವಿವಾದಾತ್ಮಕವಾಗಿ ನಡೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
‘ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಒಪ‍್ಪಿಕೊಳ್ಳಲು ಸಿದ್ದವಿಲ್ಲ‘ ಎಂದು ಟ್ವಿಟರ್ ಇತ್ತೀಚೆಗೆ ಹೇಳಿ ವಿವಾದ ಸೃಷ್ಟಿಸಿತ್ತು. ಆ ನಂತರ, ನಿನ್ನೆಯಷ್ಟೇ ಖ್ಯಾತನಾಮರಾದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಖಾತೆಗಳಿಗೆ ನೀಡಿದ್ದ ಬ್ಲೂಟಿಕ್ (Verified Accounts) ರದ್ದು ಮಾಡಿ ಮತ್ತೆ ಪುನರ್‌ಸ್ಥಾಪಿಸಿತ್ತು.
ಟ್ವಿಟರ್‌ನ ಈ ನಿರ್ಧಾರ ನೆಟ್ಟಿಗರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ‘ಟ್ವಿಟರ್ ಭಾರತೀಯರ ವಿಷಯದಲ್ಲಿ ಮನಬಂದಂತೆ ನಡೆದುಕೊಳ್ಳುತ್ತಿದೆ‘ ಎಂದು ನೆಟ್ಟಿಗರು ಆರೋಪಿಸಿದ್ದರು.
ಇದಕ್ಕೆ ವಿರುದ್ಧವಾಗಿ ಇಂದು ಟ್ವಿಟರ್‌ನಲ್ಲಿ #TirangaTick ಮತ್ತು #TirangaVerified ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್ ಆಗಿವೆ. ಅನೇಕ ಟ್ವಿಟರ್ ಬಳಕೆದಾರರು ತಮ್ಮ ಖಾತೆ ಬಳಕೆದಾರನ ಹೆಸರಿನ ಮುಂದೆ ಭಾರತದ ತಿರಂಗಾ ಬಾವುಟದ ಚಿತ್ರವನ್ನು (ಎಮೋಜಿ) ಇಟ್ಟು, ಬ್ಲೂ ಟಿಕ್ ವಿರುದ್ಧ ಪ್ರತಿಭಟಿಸಿದ್ದಾರೆ.
Who need Twitter Blue Tick when you can be #TirangaVerified ❤️.#TirangaTick 🇮🇳 pic.twitter.com/mtV01Pgguo
— Sachin Gadekar 🇮🇳 (@A1_Sach) June 5, 2021
ಅಲ್ಲದೇ ನಮಗೆ ಬ್ಲೂ ಟಿಕ್ ಮುಖ್ಯ ಅಲ್ಲ. ನಮ್ಮದು ತಿರಂಗಾ ಟಿಕ್ ಎಂದು ಹಾಕಿಕೊಂಡಿದ್ದಾರೆ. ನೀವು ಸಹ ತಿರಂಗಾ ಟಿಕ್ ಹಾಕಿಕೊಳ್ಳಿ ಎಂದು ಅನೇಕರು ತಮ್ಮ ಸ್ನೇಹಿತರಿಗೆ ಕರೆ ನೀಡಿದ್ದಾರೆ.
ತನ್ನ ನೀತಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಟ್ವಿಟರ್ ಇತ್ತೀಚೆಗೆ ಮುಲಾಜಿಲ್ಲದೇ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೆಚ್ಚು ಸದ್ದು ಮಾಡುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.