ಶನಿವಾರ, ಜೂನ್ 19, 2021
28 °C

ಭಾರತಕ್ಕೆ ಟ್ವಿಟರ್‌ನಿಂದ ₹ 110 ಕೋಟಿ ಕೋವಿಡ್‌ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ಎರಡನೇ ಅಲೆಗೆ ತತ್ತರಿಸಿರುವ ಭಾರತಕ್ಕೆ ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್‌ ಇಂಕ್‌ ಸುಮಾರು ₹ 110 (15 ಮಿಲಿಯನ್‌ ಡಾಲರ್‌) ಕೋಟಿ ರೂಪಾಯಿ ಆರ್ಥಿಕ ನೆರವು ಪ್ರಕಟಿಸಿದೆ.

ಭಾರತದಲ್ಲಿ ವೈದ್ಯಕೀಯ ನೆರವು ನೀಡಲು ಮೂರು ಸರ್ಕಾರೇತರ ಸಂಸ್ಥೆಗಳಿಗೆ ಈ ದೇಣಿಗೆ ನೀಡಿಲಾಗಿದೆ ಎಂದು ಟ್ವಿಟರ್‌ ಇಂಕ್‌ನ ಸಿಇಒ ಜಾಕ್‌ ಪ್ಯಾಟ್ರಿಕ್‌ ಟ್ವೀಟ್‌ ಮಾಡಿದ್ದಾರೆ.

ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕೇರ್, ಏಡ್‌ ಇಂಡಿಯಾ ಹಾಗೂ ಸೇವಾ ಸರ್ಕಾರೇತರ ಸಂಸ್ಥೆಗಳಿಗೆ ಈ ನೆರವು ಸಿಗಲಿದೆ.

ಕೇರ್‌ ಸಂಸ್ಥೆಗೆ ಸುಮಾರು ₹ 73 ಕೋಟಿ, ಏಡ್‌ ಇಂಡಿಯಾ ಹಾಗೂ ಸೇವಾ ಸಂಸ್ಥೆಗಳಿಗೆ ತಲಾ ₹ 17 ಕೋಟಿ ದೊರೆಯಲಿದೆ. ಮೂರು ಸಂಸ್ಥೆಗಳು ಲಸಿಕೆ, ಆಮ್ಲಜನಕ ಸೇರಿದಂತೆ ತುರ್ತು ವೈದ್ಯಕೀಯ ನೆರವಿಗೆ ಈ ದೇಣಿಗೆಯನ್ನು ಬಳಕೆ ಮಾಡಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು