ಶನಿವಾರ, ಮೇ 15, 2021
26 °C

ಟ್ವಿಟರ್ ಲೋಡಿಂಗ್ ಸಮಸ್ಯೆ ಎದುರಿಸಿದ ಸಾವಿರಾರು ಬಳಕೆದಾರರು

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಲೋಡಿಂಗ್ ಸಮಸ್ಯೆಯಿಂದ ಶುಕ್ರವಾರ ಸಂಜೆ ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ. ಸಾವಿರಾರು ಬಳಕೆದಾರರು ಟ್ವಿಟ್ಟರ್ ಪ್ಲಾಟ್‌ಫಾರ್ಮ್‌ನಲ್ಲಿ ವರದಿ ಮಾಡಿದ ನಂತರ ಸಮಸ್ಯೆ ಸರಿಪಡಿಸುವತ್ತ ಹೆಜ್ಜೆ ಇಟ್ಟಿದ್ದೇವೆ ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ.

‘ನಿಮ್ಮಲ್ಲಿ ಕೆಲವರಿಗೆ ಟ್ವೀಟ್‌ಗಳು ಲೋಡ್ ಆಗದಿರಬಹುದು. ನಾವು ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆ ಮತ್ತು ನೀವು ಶೀಘ್ರದಲ್ಲೇ ಟೈಮ್‌ಲೈನ್‌ಗೆ ಹಿಂದಿರುಗುತ್ತೀರಿ’ ಎಂದು ಕಂಪನಿ ಟ್ವೀಟ್‌ನಲ್ಲಿ ತಿಳಿಸಿದೆ.

ನಿಲುಗಡೆ ಮೇಲ್ವಿಚಾರಣೆ ವೆಬ್‌ಸೈಟ್ ಡೌನ್‌ಡೆಟೆಕ್ಟರ್.ಕಾಮ್ ಪ್ರಕಾರ, ಸುಮಾರು 40,000 ಬಳಕೆದಾರರು ಟ್ವಿಟ್ಟರ್ ಡೌನ್ ಆದ ಬಗ್ಗೆ ವರದಿ ಮಾಡಿದ್ದಾರೆ.

ಬಳಕೆದಾರರು ಸಲ್ಲಿಸಿದ ದೋಷಗಳ ಕುರಿತಾದ ವರದಿ ಒಳಗೊಂಡಂತೆ ಮೂಲಗಳ ಸರಣಿಯಿಂದ ಸ್ಥಿತಿ ವರದಿಗಳನ್ನು ಪಡೆಯುವ ಮೂಲಕ ಡೌನ್‌ಡೆಟೆಕ್ಟರ್ ವೆಬ್ ಸೈಟ್ ನಿಲುಗಡೆಗಳನ್ನು ಪತ್ತೆ ಮಾಡುತ್ತದೆ. ಟ್ವಿಟ್ಟರ್ ನಿಲುಗಡೆ ಸಮಸ್ಯೆ ಮತ್ತಷ್ಟು ಬಳಕೆದಾರರ ಮೇಲೆ ಪರಿಣಾಮ ಬೀರಿರಬಹುದು ಎಂದು ಅದು ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು