ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾನ್ ಮಸ್ಕ್ ಟ್ವಿಟರ್ ಖರೀದಿ ಒಪ್ಪಂದಕ್ಕೆ ಷೇರುದಾರರ ಅನುಮೋದನೆ

Last Updated 14 ಸೆಪ್ಟೆಂಬರ್ 2022, 4:15 IST
ಅಕ್ಷರ ಗಾತ್ರ

ನ್ಯೂಯಾರ್ಕ್: 44 ಬಿಲಿಯನ್ ಡಾಲರ್‌ಗೆ ಟ್ವಿಟರ್ ಅನ್ನು ಖರೀದಿಸುವ ಟೆಸ್ಲಾ ಸಿಇಒ ಇಲಾನ್ ಮಸ್ಕ್ ಅವರ ಒಪ್ಪಂದವನ್ನು ಟ್ವಿಟರ್ ಷೇರುದಾರರು ಅನುಮೋದಿಸಿದ್ದಾರೆ ಎಂದು ವರದಿಯಾಗಿದೆ.

'ದಿ ವರ್ಜ್' ವರದಿ ಪ್ರಕಾರ, ಪ್ರಾಥಮಿಕ ಹಂತದಲ್ಲಿ ಟ್ವಿಟರ್ ಖರೀದಿ ಒಪ್ಪಂದವನ್ನು ಅನುಮೋದಿಸಲು ಬೇಕಾದಷ್ಟು ಮತಗಳನ್ನು ಗಿಟ್ಟಿಸಿವೆ ಎಂಬುದನ್ನು ಟ್ವಿಟರ್ ದೃಢಪಡಿಸಿದೆ.

ಟ್ವಿಟರ್ ಖರೀದಿ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಇಲಾನ್ ಮಸ್ಕ್ ವಿರುದ್ಧ ಟ್ವಿಟರ್ ದಾವೆ ಹೂಡಿತ್ತು. ಸದ್ಯ ಈ ಪ್ರಕರಣ ಕೋರ್ಟ್ ಹಂತದಲ್ಲಿದೆ.

ಇಲಾನ್ ಮಸ್ಕ್-ಟ್ವಿಟರ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದಿದೆ. ಅಕ್ಟೋಬರ್ ಮಧ್ಯಂತರ ಅವಧಿಯಲ್ಲಿ ಕಾನೂನು ಸಮರ ಆರಂಭವಾಗುವ ನಿರೀಕ್ಷೆಯಿದೆ.

ಪ್ರತಿಷೇರಿಗೆ 54.20 ಡಾಲರ್ ನೀಡುವ ಮೂಲಕ ಟ್ವಿಟರ್ ಖರೀದಿಗೆ ಮುಂದಾಗಿದ್ದ ಮಸ್ಕ್, ಬಳಿಕ ಮೈಕ್ರೋ ಬ್ಲಾಗಿಂಗ್ ಸಂಸ್ಥೆ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿ ಖರೀದಿ ಒಪ್ಪಂದವನ್ನು ಕೈಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT