ಶುಕ್ರವಾರ, ಫೆಬ್ರವರಿ 28, 2020
19 °C

ಬಳಸದೆಯೇ ಬಿಟ್ಟಿರುವ ಟ್ವಿಟರ್ ಖಾತೆ; ಡಿ.11ರಿಂದ ಶಾಶ್ವತ ಡಿಲೀಟ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಟ್ವಿಟರ್‌

ಬೆಂಗಳೂರು: ಟ್ವಿಟರ್‌ನಲ್ಲಿ ಖಾತೆ ತೆರೆದು ಅದನ್ನು ಬಳಸದೆ ಬಿಟ್ಟಿದ್ದರೆ, ಅಂತಹ ಖಾತೆಗಳು ಇನ್ನು ಕೆಲವೇ ದಿನಗಳಲ್ಲಿ ಶಾಶ್ವತವಾಗಿ ಅಳಿಸಿ ಹೋಗಲಿವೆ. ಆರು ತಿಂಗಳಿಂದ ನಿಷ್ಕ್ರಿಯ ಸ್ಥಿತಿಯಲ್ಲಿರುವ ಖಾತೆಗಳು ಡಿಸೆಂಬರ್‌ 11ರಿಂದ ಕಾಣಸಿಗುವುದಿಲ್ಲ. 

ಪ್ರಸ್ತುತ ಪ್ರಮುಖ ಸಾಮಾಜಿಕ ಸಂಪರ್ಕ ಮಾಧ್ಯಮವಾಗಿ ಜನರಿಂದ ಹೆಚ್ಚು ಬಳಕೆಗೆ ಬರುತ್ತಿರುವ ಟ್ವಿಟರ್‌, ವಿಶ್ವಾಸಾರ್ಹತೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಟ್ವಿಟರ್‌ನ್ನು ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಖಾತೆ ತೆರೆದು ಸುಮ್ಮನೆ ಬಿಟ್ಟಿರುವ, ಬೇರೆ ಬೇರೆ ಖಾತೆಗಳನ್ನು ಹೊಂದಿದ್ದು 6 ತಿಂಗಳಿಗೂ ಹೆಚ್ಚು ಸಮಯದಿಂದ ನಿಷ್ಕ್ರಿಯವಾಗಿದ್ದರೆ ಆ ಎಲ್ಲ ಖಾತೆಗಳನ್ನು ಟ್ವಿಟರ್‌ ಶಾಶ್ವತವಾಗಿ ಅಳಿಸಿ ಹಾಕಲಿದೆ. 

ಟ್ವಿಟರ್‌ನಲ್ಲಿ ನೋಂದಾಯಿಸಿಕೊಂಡವರು ಬಳಕೆ ಮಾಡುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದಕ್ಕೂ ಸಹಕಾರಿಯಾಗುವಂತೆ ಈ ಕ್ರಮವನ್ನು ತನ್ನ 'ನಿಷ್ಕ್ರಿಯ ಖಾತೆಗಳ ನಿಯಮ'ಗಳಲ್ಲಿ ಒಳಪಡಿಸಿದೆ. 

ಟ್ವಿಟರ್‌ ಖಾತೆಯಲ್ಲಿ ಯಾವುದೇ ಪೋಸ್ಟ್‌ ಮಾಡಿರದಿದ್ದರೆ ಅಥವಾ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ ಖಾತೆ ಬಂದ್‌ ಆಗುವುದಿಲ್ಲ. ಖಾತೆಗೆ ಲಾಗಿನ್‌ ಆಗದೆಯೇ ಆರು ತಿಂಗಳು ಕಳೆದಿದ್ದರೆ ಅಂತಹ ಖಾತೆಗಳು ಡಿಸೆಂಬರ್‌ 11ರಿಂದ ಶಾಶ್ವತವಾಗಿ ಡಿಲೀಟ್‌ ಆಗಲಿವೆ ಎಂದು ಟ್ವಿಟರ್ ಹೇಳಿದೆ. 

ಖಾತೆಗೆಯನ್ನು ಅಳಿಸಿ ಹಾಕುವುದಕ್ಕೂ ಮುನ್ನ ಟ್ವಿಟರ್‌ ಎಚ್ಚರಿಕೆ ಸಂದೇಶ ರವಾನಿಸಲಿದೆ. ನಿಧನರಾಗಿರುವ ವ್ಯಕ್ತಿಗಳ ಖಾತೆಗಳನ್ನು ಬಳಸದೆಯೇ ನಿಷ್ಕ್ರಿಯಗೊಂಡಿದ್ದರೆ, ಅವುಗಳೂ ಸಹ ಇಲ್ಲವಾಗಲಿವೆ. ಅಂತಹ ಖಾತೆಗಳನ್ನು ಕಾಪಾಡುವ ವ್ಯವಸ್ಥೆಯನ್ನು ಸದ್ಯ ಟ್ವಿಟರ್‌ ಹೊಂದಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು