ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕ್ ವಿರುದ್ಧ ಟ್ವಿಟರ್ ಕಾನೂನು ಸಮರ

Last Updated 13 ಜುಲೈ 2022, 17:18 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ (ಎಎಫ್‌ಪಿ): ಖರೀದಿ ಒಪ್ಪಂದದಿಂದ ಹಿಂದಕ್ಕೆ ಸರಿದಿರುವ ಉದ್ಯಮಿ, ಟೆಸ್ಲಾ ಕಂಪನಿಯ ಮುಖ್ಯ ಕಾರ್ಯ
ನಿರ್ವಹಣಾ ಅಧಿಕಾರಿ (ಸಿಇಒ) ಇಲಾನ್ ಮಸ್ಕ್ ವಿರುದ್ಧ ಟ್ವಿಟರ್ ಕಂಪನಿಯು ಕಾನೂನು ಸಮರಕ್ಕೆ ಮುಂದಾಗಿದೆ.

‘ಟ್ವಿಟರ್ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸುವಂತೆ ಮಸ್ಕ್ ಅವರಿಗೆ ಆದೇಶಿಸಬೇಕು’ ಎಂದು ಟ್ವಿಟರ್ ಕಂಪನಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ. ಮಸ್ಕ್ ಅವರಿಗೆ ಎಷ್ಟೇ ದಂಡ ವಿಧಿಸಿದರೂ, ಆಗಿರುವ ನಷ್ಟವನ್ನು ಸರಿಪಡಿಸಲು ಆಗುವುದಿಲ್ಲ ಎಂದು ಅದು ಹೇಳಿದೆ.

‘ಖರೀದಿ ಒಪ್ಪಂದದಿಂದ ನುಣುಚಿಕೊಳ್ಳಲು ಮಸ್ಕ್ ಬಯಸುತ್ತಿದ್ದಾರೆ ಎಂಬುದನ್ನು ಅವರ ವರ್ತನೆಯು ಸ್ಪಷ್ಟಪಡಿಸುತ್ತಿದೆ. ಆ ಮೂಲಕ ಅವರು ಟ್ವಿಟರ್‌ಗೆ ಹಾನಿ ಉಂಟುಮಾಡುತ್ತಿದ್ದಾರೆ. ಮಸ್ಕ್ ಅವರ ನಡೆಯಿಂದಾಗಿ ಟ್ವಿಟರ್‌ಗೆ ನಷ್ಟವಾಗಿದೆ, ಮುಂದೆಯೂ ನಷ್ಟವಾಗಲಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ನಕಲಿ ಖಾತೆಗಳ ಸಂಖ್ಯೆಯ ವಿಚಾರದಲ್ಲಿ ತಪ್ಪು ಹೇಳಿಕೆಗಳನ್ನು ಟ್ವಿಟರ್ ನೀಡುತ್ತಿದೆ ಎಂದು ಆರೋಪಿಸಿದ್ದ ಮಸ್ಕ್, ಟ್ವಿಟರ್ ಖರೀದಿ ಒಪ್ಪಂದದಿಂದ ತಾವು ಹೊರನಡೆಯುತ್ತಿರುವುದಾಗಿ ಕಳೆದ ವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT