ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಬದಲಿಸಿದ ವಾಟ್ಸ್‌ಆ್ಯಪ್‌: ಬಳಕೆದಾರರಿಂದ ವ್ಯಕ್ತವಾದ ಭಿನ್ನ ಅಭಿಪ್ರಾಯ

Published 27 ಏಪ್ರಿಲ್ 2024, 16:11 IST
Last Updated 27 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಮೆಸೆಂಜರ್ ಸೇವೆ ನೀಡುವ ವಾಟ್ಸ್‌ಆ್ಯಪ್‌, ಚಿಕ್ಕಪುಟ್ಟ ಬದಲಾವಣೆಗಳೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೀಗ ಹಸಿರು ಬಣ್ಣದ ಅನುಭೂತಿ ನೀಡುವ ಮೂಲಕ ವಾಟ್ಸ್ಯ್‌ಆ್ಯಪ್ ತನ್ನ ಬಳಕೆದಾರರಿಗೆ ಹೊಸತನ್ನು ಪರಿಚಯಿಸಿದೆ.

ಈ ಹಿಂದೆ ನೀಲಿ ಬಣ್ಣದ ಥೀಂ ಹೊಂದಿದ್ದ ವಾಟ್ಸ್‌ಆ್ಯಪ್‌, ಹೊಸ ಅಪ್‌ಡೇಟ್‌ ಪರಿಚಯಿಸಿದ್ದು, ಹಸಿರಾಗಿ ತನ್ನ ಬಣ್ಣ ಬದಲಿಸಿದೆ. ಇದಕ್ಕೆ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಾಗಿದ್ದರೆ ವಾಟ್ಸ್‌ಆ್ಯಪ್ ಬಣ್ಣ ಬದಲಿಸಿದ್ದು ಏಕೆ?

ವಾಟ್ಸ್‌ಆ್ಯಪ್ ಬಣ್ಣ ಬದಲಾವಣೆ ಈಗಾಗಲೇ ಹಲವರು ಗಮನಿಸಿದ್ದಾರೆ. ವಾಟ್ಸ್‌ಆ್ಯಪ್‌ನ ಮಾಲೀಕತ್ವ ಹೊಂದಿರುವ ಮೆಟಾ, ಆಧುನಿಕ ಮತ್ತು ಹೊಸ ಬಗೆಯ ಅನುಭೂತಿ ನೀಡುವ ಉದ್ದೇಶದಿಂದ ಕೆಲವೊಂದು ಹೊಸ ಬದಲಾವಣೆಗಳನ್ನು ಮಾಡಿದೆ. ಅದರಲ್ಲಿ ಈ ಬಣ್ಣ ಬದಲಾವಣೆಯೂ ಒಂದು.

ಹಸಿರು ಬಣ್ಣ ಸಹಿತ, ಆ್ಯಪಲ್‌ನ ಐಒಎಸ್ ಮತ್ತು ಆ್ಯಂಡ್ರಾಯ್ಡ್‌ ಫೋನ್ ಬಳಕೆದಾರರಿಗೆ ಹೊಸ ಅಪ್‌ಡೇಟ್ ಲಭ್ಯವಾಗಿದೆ. ಐಫೋನ್‌ನಲ್ಲಿ ಸ್ಟೇಟಸ್‌ ಬಾರ್‌ನಿಂದ ಹಿಡಿದು ಚಾಟ್‌ ಲಿಸ್ಟ್‌ ವಿಂಡೊವರೆಗೂ ಎಲ್ಲವೂ ಬದಲಾಗಿದೆ. ಲಿಂಕ್‌ಗಳೂ ಸಹ ಹಿಂದಿನ ನೀಲಿ ಬಣ್ಣದಿಂದ ಈಗ ಹಸಿರು ಬಣ್ಣಕ್ಕೆ ಬದಲಾಗಿದೆ.

ಆ್ಯಂಡ್ರಾಯ್ಡ್ ಬಳಕೆದಾರರು ಡಾರ್ಕ್‌ ಮೋಡ್ ಆಯ್ಕೆ ಮಾಡಿಕೊಂಡಿದ್ದರೆ, ಅದು ಇನ್ನಷ್ಟು ಗಾಢವಾಗಿದೆ. ಇದಕ್ಕೆ ಕೆಲ ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲೈಟ್‌ ಮೋಡ್‌ನಲ್ಲಿ ಪರದೆ ಮೇಲೆ ಮೂಡುವ ಅಕ್ಷರ ಇನ್ನಷ್ಟು ಸ್ಪಷ್ಟವಾಗಿದೆ. ಬಣ್ಣ ಬದಲಾವಣೆಯ ಜತೆಗೆ, ಮೆಸೇಜ್ ಇಂಡಿಕೇಟರ್‌ನಲ್ಲಿ ಕೆಲವೊಂದೆಡೆ ಕ್ಯಾಪಿಟಲ್ ಅಕ್ಷರಗಳ ಬಳಕೆ ಆರಂಭಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT