ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

WhatsApp: ಹೊಸ ಅಪ್‌ಡೇಟ್, ಒನ್‌ ವ್ಯೂ ಸ್ಕ್ರೀನ್‌ಶಾಟ್, ರೆಕಾರ್ಡಿಂಗ್ ನಿರ್ಬಂಧ

ವಾಟ್ಸ್‌ಆ್ಯಪ್ ಹೊಸ ಅಪ್‌ಡೇಟ್‌ನಲ್ಲಿ ಒನ್ ವ್ಯೂ ಫೋಟೊ–ವಿಡಿಯೊ ಸ್ಕ್ರೀನ್‌ ಶಾಟ್‌ಗೆ ನಿರ್ಬಂಧ ಹೇರಿದೆ.
Last Updated 2 ಡಿಸೆಂಬರ್ 2022, 7:17 IST
ಅಕ್ಷರ ಗಾತ್ರ

ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್, ನೂತನ ಅಪ್‌ಡೇಟ್ ಒಂದನ್ನು ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಬಿಡುಗಡೆ ಮಾಡಿದೆ.

ವಾಟ್ಸ್‌ಆ್ಯಪ್‌ ಮೂಲಕ ಬಳಕೆದಾರರು ಕಳುಹಿಸುವ ಫೋಟೊಗಳಿಗೆ ಒನ್‌ ವ್ಯೂ ಆಯ್ಕೆ ಮಾಡಿದ್ದರೆ, ಅವುಗಳನ್ನು ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಾಗುವುದಿಲ್ಲ. ಬಳಕೆದಾರರ ಖಾಸಗಿತನ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಕಂಪನಿ ಹೇಳಿದ್ದು, ಒನ್ ವ್ಯೂ ಫೋಟೊವನ್ನು ಸ್ಕ್ರೀನ್ ಶಾಟ್ ತೆಗೆಯಲು ಯತ್ನಿಸಿದರೆ, ತಕ್ಷಣವೇ ಅಲ್ಲಿ ನಿರ್ಬಂಧದ ಸಂದೇಶ ಕಾಣಿಸಿಕೊಳ್ಳುತ್ತದೆ.

ಇದೇ ವೈಶಿಷ್ಟ್ಯವನ್ನು ಒನ್‌ ವ್ಯೂ ವಿಡಿಯೊಗಳಿಗೂ ವಾಟ್ಸ್‌ಆ್ಯಪ್ ಪರಿಚಯಿಸಿದೆ. ಬಳಕೆದಾರರು, ವಿಡಿಯೊಗಳನ್ನು ಒನ್‌ ವ್ಯೂ ಮೂಲಕ ಕಳುಹಿಸಿದರೆ, ಅದನ್ನು ಸ್ಕ್ರೀನ್ ರೆಕಾರ್ಡಿಂಗ್ ಮೂಲಕ ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ.

ಹೊಸ ಫೀಚರ್‌ನಿಂದ ಹೆಚ್ಚಿನ ಖಾಸಗಿತನ ಮತ್ತು ಸುರಕ್ಷತೆ ಸಾಧ್ಯವಾಗಲಿದೆ ಎಂದು ವಾಟ್ಸ್‌ಆ್ಯಪ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT