ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಳುಹಿಸಿದ ಮೆಸೇಜ್‌ ಎಡಿಟ್ ಆಯ್ಕೆ ಪರಿಶೀಲಿಸುತ್ತಿರುವ ವಾಟ್ಸ್‌ಆ್ಯಪ್

Published : 1 ಜೂನ್ 2022, 10:31 IST
ಫಾಲೋ ಮಾಡಿ
Comments

ಬೆಂಗಳೂರು: ಬಳಕೆದಾರರಿಗೆ ಹೊಸ ಹೊಸ ಫೀಚರ್‌ಗಳನ್ನು ವಾಟ್ಸ್‌ಆ್ಯಪ್ ಅಪ್‌ಡೇಟ್ ಮೂಲಕ ನೀಡುತ್ತಾ ಬರುತ್ತಿದೆ.

ಈ ಬಾರಿ ವಾಟ್ಸ್‌ಆ್ಯಪ್, ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿದ್ದು, ನೂತನ ಆಯ್ಕೆಯನ್ನು ಪರಿಶೀಲಿಸುತ್ತಿದೆ.

ಮೆಟಾ ಒಡೆತನದ ವಾಟ್ಸ್‌ಆ್ಯಪ್, ಹೊಸ ಫೀಚರ್ ಪರಿಶೀಲನೆ ನಡೆಸುತ್ತಿರುವ ಕುರಿತು ವಾಬೀಟಾಇನ್ಫೋ ವರದಿ ಮಾಡಿದೆ.

ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುವ ಮೆಸೇಜ್‌ಗಳಲ್ಲಿ ಕೆಲವೊಮ್ಮೆ ಅಕ್ಷರ ದೋಷ, ತಪ್ಪುಗಳು ಅಥವಾ ಏನಾದರೂ ಮಾಹಿತಿ ಬಿಟ್ಟುಹೋಗಿದ್ದರೆ, ಅದನ್ನು ಮತ್ತೆ ಎಡಿಟ್ ಮಾಡುವ ಅವಕಾಶ ಇದರಿಂದ ಲಭ್ಯವಾಗಲಿದೆ.

ಹೀಗಾಗಿ ಹೊಸ ಫೀಚರ್, ಬಳಕೆದಾರರಿಗೆ ಅತಿ ಅಗತ್ಯವಾಗಿದೆ.

ಟ್ವಿಟರ್ ಕೂಡ ಟ್ವೀಟ್ ಎಡಿಟ್ ಫೀಚರ್ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ವಾಟ್ಸ್‌ಆ್ಯಪ್ ಹೊಸ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಲು ಉತ್ಸುಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT