ಮಂಗಳವಾರ, ಮಾರ್ಚ್ 28, 2023
31 °C

ವಾಟ್ಸ್ಆ್ಯಪ್ ಪರಿಚಯಿಸಲಿದೆ ಹೊಸ ಅಪ್‌ಡೇಟ್: ಲಾಸ್ಟ್ ಸೀನ್, ಸ್ಟೇಟಸ್ ಸೆಟ್ಟಿಂಗ್ಸ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

 Credit: Reuters File Photo

ಬೆಂಗಳೂರು: ಮೆಸೇಜಿಂಗ್ ಸೇವೆ ಒದಗಿಸುವ ವಾಟ್ಸ್‌ಆ್ಯಪ್, ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ನೂತನ ಅಪ್‌ಡೇಟ್ ಬಿಡುಗಡೆ ಮಾಡಲು ಮುಂದಾಗಿದೆ.

ಈಗಾಗಲೇ ಸೆಟ್ಟಿಂಗ್ಸ್ ಆಯ್ಕೆ ಇರುವಲ್ಲಿ, ಲಾಸ್ಟ್ ಸೀನ್, ಪ್ರೊಫೈಲ್ ಫೋಟೊ, ಅಬೌಟ್ ಮತ್ತು ಸ್ಟೇಟಸ್ ಇವುಗಳನ್ನು ಬಳಕೆದಾರರು ಎವರಿಒನ್, ಮೈ ಕಾಂಟ್ಯಾಕ್ಟ್ ಅಥವಾ ನೋಬಡಿ ಎಂಬ ಆಯ್ಕೆ ನೀಡಬಹುದು.

ಆದರೆ, ಮುಂದಿನ ಅಪ್‌ಡೇಟ್‌ನಲ್ಲಿ, ಈ ಎಲ್ಲ ಸೆಟ್ಟಿಂಗ್ಸ್‌ನಲ್ಲಿ, ಮೈ ಕಾಂಟ್ಯಾಕ್ಟ್ ಎಕ್ಸೆಪ್ಟ್ ಎನ್ನುವ ಆಯ್ಕೆ ಒದಗಿಸಲಿದೆ. ಇದರ ಪ್ರಕಾರ, ಬಳಕೆದಾರರು ಕೆಲವೊಂದು ಕಾಂಟ್ಯಾಕ್ಟ್‌ಗಳನ್ನು ಉಳಿಸಿಕೊಂಡರೂ ಕೂಡ, ಅವರು ನಿಮ್ಮ ಲಾಸ್ಟ್ ಸೀನ್, ಪ್ರೊಫೈಲ್ ಫೋಟೊ, ಅಬೌಟ್ ಮತ್ತು ಸ್ಟೇಟಸ್ ವೀಕ್ಷಿಸುವುದನ್ನು ನಿರ್ಬಂಧಿಸಬಹುದು.

ಈ ಫೀಚರ್ ಬಿಡುಗಡೆ ಮಾಡುತ್ತಿರುವ ಕುರಿತು ವಾಟ್ಸ್ಆ್ಯಪ್ ಬೀಟಾ ಟ್ರ್ಯಾಕರ್ ‘ವಾಬೀಟಾ ಇನ್ಫೋ’ ವರದಿ ಬಿಡುಗಡೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು