ಸೋಮವಾರ, ಡಿಸೆಂಬರ್ 6, 2021
23 °C

Whatsapp: ಶೀಘ್ರದಲ್ಲಿ ಸ್ಟಿಕರ್ ರಚನೆ ಮಾಡುವ ಆಯ್ಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Whatsapp Message

ಬೆಂಗಳೂರು: ಬಳಕೆದಾರರು ಕಳುಹಿಸುವ ಫೋಟೊಗಳನ್ನು ಸ್ಟಿಕರ್‌ಗಳಾಗಿ ಪರಿವರ್ತಿಸುವ ಆಯ್ಕೆಯನ್ನು ವಾಟ್ಸ್‌ಆ್ಯಪ್ ಶೀಘ್ರದಲ್ಲಿಯೇ ಒದಗಿಸಲಿದೆ.

ಬೀಟಾ ಆವೃತ್ತಿಯಲ್ಲಿ ನೂತನ ಆಯ್ಕೆಯನ್ನು ವಾಟ್ಸ್‌ಆ್ಯಪ್ ಪರಿಶೀಲಿಸುತ್ತಿದೆ.

ವಾಟ್ಸ್‌ಆ್ಯಪ್ ಮೂಲಕ ಈಗ ಬಳಕೆದಾರರು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿ ಸ್ಟಿಕರ್ ರಚಿಸಿ ಕಳುಹಿಸುತ್ತಿದ್ದಾರೆ.

ಮುಂದೆ ವಾಟ್ಸ್‌ಆ್ಯಪ್ ತನ್ನದೇ ಆದ ಸ್ಟಿಕರ್ಸ್ ರಚಿಸುವ ಆಯ್ಕೆಯನ್ನು ಒದಗಿಸಲಿದೆ.

ಹಲವು ಥರ್ಡ್ ಪಾರ್ಟಿ ಆ್ಯಪ್ ಬಳಕೆಯಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯ ಆತಂಕವಿದೆ. ಅಲ್ಲದೆ, ಸ್ಟಿಕರ್ ರಚನೆಗಾಗಿ ಪ್ರತ್ಯೇಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಬಳಸಬೇಕಿದೆ. ಅದಕ್ಕಾಗಿ ವಾಟ್ಸ್‌ಆ್ಯಪ್ ತನ್ನದೇ ಆದ ಹೊಸ ವ್ಯವಸ್ಥೆಯನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು