ಬೆಂಗಳೂರು: ಟ್ವಿಟರ್‌ನಲ್ಲಿ ಇರುವಂತೆಯೇ ಕಿರು ಸಮೀಕ್ಷೆಯ ಆಯ್ಕೆಯನ್ನು ವಾಟ್ಸ್‌ಆ್ಯಪ್ ಶೀಘ್ರದಲ್ಲೇ ಬಳಕೆದಾರರಿಗೆ ಗ್ರೂಪ್‌ಗಳಲ್ಲಿ ಒದಗಿಸಲಿದೆ.
ಆ್ಯಂಡ್ರಾಯ್ಡ್ ಬೀಟಾ v2.22.21.16 ಆವೃತ್ತಿಯಲ್ಲಿ ಈ ಆಯ್ಕೆಯನ್ನು ವಾಟ್ಸ್‌ಆ್ಯಪ್ ಪರಿಶೀಲಿಸುತ್ತಿದೆ.
ಅದರಲ್ಲಿ ಟ್ವಿಟರ್‌ನಲ್ಲಿ ಇರುವಂತೆಯೇ, ಜನಮತ ಸಂಗ್ರಹಿಸುವ ಆಯ್ಕೆಯನ್ನು ಒದಗಿಸಲು ವಾಟ್ಸ್‌ಆ್ಯಪ್ ಮುಂದಾಗಿದೆ.
ಗ್ರೂಪ್‌ಗಳಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಿಸಲು ಇದರಿಂದ ಅನುಕೂಲವಾಗಲಿದೆ. ಹೊಸ ಫೀಚರ್‌ಗಳನ್ನು ಕಾಲಕಾಲಕ್ಕೆ ಒದಗಿಸುವ ಮೂಲಕ ವಾಟ್ಸ್‌ಆ್ಯಪ್ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದೆ.