ಭಾನುವಾರ, ನವೆಂಬರ್ 27, 2022
27 °C

ಗುಂಪು ಕರೆ ಸೌಲಭ್ಯ: ಪರೀಕ್ಷೆ ಆರಂಭಿಸಿದ ವಾಟ್ಸ್‌ಆ್ಯಪ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಒಂದೇ ಬಾರಿಗೆ ಒಟ್ಟು 32 ಜನರಿಗೆ ವಿಡಿಯೊ ಕರೆ ಮಾಡುವ ಸೌಲಭ್ಯದ ಪರೀಕ್ಷಾರ್ಥ ಬಳಕೆಯನ್ನು ವಾಟ್ಸ್‌ಆ್ಯಪ್ ಕಂಪನಿ ಆರಂಭಿಸಿದೆ.

ಅಲ್ಲದೆ, ವಿಡಿಯೊ ಅಥವಾ ಧ್ವನಿ ಕರೆಯನ್ನು ಸೇರಿಕೊಳ್ಳಲು ಅವಕಾಶ ಕಲ್ಪಿಸುವ ಕೊಂಡಿಯನ್ನು (ಲಿಂಕ್‌) ವಾಟ್ಸ್‌ಆ್ಯಪ್‌ ಇನ್ನು ಮುಂದೆ ನೀಡಲಿದೆ ಎಂದು ಮೆಟಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮಾರ್ಕ್‌ ಝಕರ್‌ಬರ್ಗ್‌ ಹೇಳಿದ್ದಾರೆ.

‘ಧ್ವನಿ ಹಾಗೂ ವಿಡಿಯೊ ಕರೆ ಲಿಂಕ್‌ ಸೌಲಭ್ಯವು ಈ ವಾರದಿಂದ ಸಿಗಲಿದೆ. ಆಗ ನೀವು ಲಿಂಕ್‌ಅನ್ನು ಇತರರ ಜೊತೆ ಹಂಚಿಕೊಂಡಾಗ, ಅವರು ಆ ಲಿಂಕ್ ಬಳಸಿ ಕರೆ ಮಾಡಬಹುದು. ಇನ್ನೂ ಹೆಚ್ಚಿನ ಸೌಲಭ್ಯಗಳು ಶೀಘ್ರದಲ್ಲಿಯೇ ಬರಲಿವೆ’ ಎಂದು ಝಕರ್‌ಬರ್ಗ್‌ ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್‌ಗೆ ಭಾರತ ಅತಿದೊಡ್ಡ ಮಾರುಕಟ್ಟೆ. ಜೂನ್‌ವರೆಗಿನ ಮಾಹಿತಿ ಪ್ರಕಾರ ದೇಶದಲ್ಲಿ ಸರಿಸುಮಾರು 48.75 ಕೋಟಿ ಜನ ವಾಟ್ಸ್ಆ್ಯಪ್‌ ಬಳಸುತ್ತಾರೆ.

ವಾಟ್ಸ್‌ಆ್ಯಪ್‌ ಬಳಕೆದಾರರು ಹೊಸ ಸೌಲಭ್ಯವನ್ನು ಬಳಸಲು ತಮ್ಮ ಆ್ಯಪ್‌ ಅಪ್ಡೇಟ್ ಮಾಡಿಕೊಳ್ಳಬೇಕು. ವಾಟ್ಸ್‌ಆ್ಯಪ್‌ ಹೊಸ ಸೌಲಭ್ಯವನ್ನು ಬಳಕೆದಾರರಿಗೆ ಮುಕ್ತವಾಗಿಸಿದ ನಂತರದಲ್ಲಿ, ಗುಂಪು ಕರೆ ಹಾಗೂ ವಿಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ಗಳ ನಡುವೆ ಸ್ಪರ್ಧೆ ಹೆಚ್ಚುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು