ವಾಟ್ಸ್ಆ್ಯಪ್‍ನಲ್ಲಿ ವದಂತಿ ಹರಡಬೇಡಿ: ಟಿವಿಯಲ್ಲಿ ಜಾಹೀರಾತು ಅಭಿಯಾನ

7

ವಾಟ್ಸ್ಆ್ಯಪ್‍ನಲ್ಲಿ ವದಂತಿ ಹರಡಬೇಡಿ: ಟಿವಿಯಲ್ಲಿ ಜಾಹೀರಾತು ಅಭಿಯಾನ

Published:
Updated:

ಬೆಂಗಳೂರು: ಸಾಮಾಜಿಕ ಮಾಧ್ಯಮ ವಾಟ್ಸ್ಆ್ಯಪ್‌‍ನಲ್ಲಿ ಸುಳ್ಳು ಸುದ್ದಿ, ವದಂತಿ ಹರಡಬೇಡಿ ಎಂಬ ಸಂದೇಶದೊಂದಿಗೆ ಇದೇ ಮೊದಲ ಬಾರಿ ಟೆಲಿವಿಷನ್‍ನಲ್ಲಿ ಜಾಹೀರಾತು ಅಭಿಯಾನ ಆರಂಭವಾಗಿದೆ.

ಭಾರತದಲ್ಲಿ ಸುಳ್ಳು ಸುದ್ದಿಗೆ ಕಡಿವಾಣ ಹಾಕಲು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದ ಕಾರಣ ಇದೀಗ ವಾಟ್ಸ್ಆ್ಯಪ್ ಟಿವಿಯಲ್ಲಿ ಜಾಹೀರಾತು ಅಭಿಯಾನ ಆರಂಭಿಸಿದೆ. Share Joy, Not Rumors ಎಂಬ ಅಭಿಯಾನ ಘೋಷವಾಕ್ಯದೊಂದಿಗೆ ಮೂರು ಜಾಹೀರಾತುಗಳು ಈಗ ಟಿವಿ, ಫೇಸ್‍ಬುಕ್ ಮತ್ತು ಯೂಟ್ಯೂಬ್ ನಲ್ಲಿ ಪ್ರಸಾರವಾಗುತ್ತಿವೆ.

ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುನ್ನ ಈ ಜಾಹೀರಾತುಗಳು ತೆರೆಕಂಡಿರುವುದು ವಿಶೇಷ. 

ಮುಂಬೈಯ ತಪ್ರೂಟ್ ಎಂಬ ಏಜೆನ್ಸಿ ಸಹಯೋಗದೊಂದಿಗೆ ಸಿನಿಮಾ ನಿರ್ದೇಶಕಿ ಶ್ರೀಶಾ ಗುಹಾ ಥಕುರ್ತಾ ಈ ವಿಡಿಯೊ ತಯಾರಿಸಿದ್ದಾರೆ ಎಂದು ದಿ ನೆಕ್ಸ್ಟ್ ವೆಬ್ ವರದಿ ಮಾಡಿದೆ.
ಜನರೊಂದಿಗೆ ಸಂಪರ್ಕ ಹೊಂದಲು ಸಹಾಯ ಮಾಡುವ ಈ  ಮಾಧ್ಯಮಗಳು ತಪ್ಪು ಮಾಹಿತಿಯನ್ನೂ ಹಬ್ಬಿಸುತ್ತವೆ. ಈ ವಿಡಿಯೊಗಳು ವಾಟ್ಸ್ಆ್ಯಪ್ ನಲ್ಲಿ  ಹೇಗೆ ಸುರಕ್ಷಿತವಾಗಿರಬಹುದು ಮತ್ತು ಸುಳ್ಳು ಸುದ್ದಿ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಸಹಕಾರಿ ಆಗುತ್ತದೆ ಎಂಬುದು ನಮ್ಮ ನಂಬಿಕೆ ಎಂದು ಈ ಜಾಹೀರಾತುಗಳಿಗೆ ನೇತೃತ್ವ ನೀಡಿದ ಬೋಸ್ಕೊ ಜುಬೈಗಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !