ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬರ್‌ಗಳಿಂದ ದೇಶದ ಆರ್ಥಿಕತೆಗೆ ₹6,800 ಕೋಟಿ ಕೊಡುಗೆ!

Last Updated 3 ಮಾರ್ಚ್ 2022, 8:31 IST
ಅಕ್ಷರ ಗಾತ್ರ

ಮುಂಬೈ:ಯೂಟ್ಯೂಬ್ ವಿಡಿಯೊ ಸೃಷ್ಟಿಕರ್ತರ ಜಾಲವು ಭಾರತದ ಅರ್ಥ ವ್ಯವಸ್ಥೆಯಲ್ಲಿ ಗಣನೀಯ ಆರ್ಥಿಕ ಮೌಲ್ಯವನ್ನು ಸಾಧಿಸುತ್ತಿದ್ದು, 2020ರಲ್ಲಿ ದೇಶದ ಜಿಡಿಪಿಗೆ ₹6,800 ಕೋಟಿ ಕೊಡುಗೆ ನೀಡಿದೆ ಎಂದು ವರದಿಯಾಗಿದೆ.

ಇದು 6.83 ಲಕ್ಷ ಪೂರ್ಣ ಪ್ರಮಾಣದ ಉದ್ಯೋಗಗಳಿಗೆ ಸಮಾನವಾಗಿದೆ ಎಂದು ಗೂಗಲ್ ಒಡೆತನದ ಸಂಸ್ಥೆಯು ತಿಳಿಸಿದೆ.

ದೇಶದಲ್ಲಿ 40,000ಕ್ಕೂ ಹೆಚ್ಚು ಚಾನೆಲ್‌ಗಳು ಒಂದು ಲಕ್ಷಕ್ಕಿಂತ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಶೇ 45ಕ್ಕಿಂತಲೂ ಹೆಚ್ಚು ಪ್ರಗತಿಯನ್ನು ಸಾಧಿಸಿದೆ.

ಭಾರತೀಯ ವಿಡಿಯೊ ಸೃಷ್ಟಿಕರ್ತರು ಯೂಟ್ಯೂಬ್‌ನಲ್ಲಿ ಹೆಚ್ಚೆಚ್ಚು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದು, ವೀಕ್ಷಕರ ಸಂಖ್ಯೆಯು ವರ್ಧಿಸುತ್ತಿದೆ ಎಂದು ಆಕ್ಸ್‌ಫರ್ಡ್ ಎಕನಾಮಿಕ್ಸ್ ವರದಿಯು ತಿಳಿಸಿದೆ. ಅದು ದೇಶದಲ್ಲಿ ಯೂಟ್ಯೂಬರ್‌ಗಳು ಬೀರುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವದ ಮೌಲ್ಯಮಾಪನ ಮಾಡಿದೆ.

ಯೂಟ್ಯೂಬರ್‌ಗಳು ದೇಶದ ಅರ್ಥ ವ್ಯವಸ್ಥೆಯಲ್ಲಿ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸಾಂಸ್ಕೃತಿಕ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಎಪಿಎಸಿ, ಯೂಟ್ಯೂಬ್ ಪಾಲುದಾರಿಕೆಯ ಪ್ರಾದೇಶಿಕ ನಿರ್ದೇಶಕ ಅಜಯ್ ವಿದ್ಯಾಸಾಗರ್ ತಿಳಿಸಿದ್ದಾರೆ.

ಭಾರತದಲ್ಲಿ ಶೇ 80ಕ್ಕಿಂತ ಹೆಚ್ಚು ಸೃಜನಶೀಲ ಉದ್ಯಮಿಗಳು ತಮ್ಮ ವೃತ್ತಿಪರ ಗುರಿಗಳ ಮೇಲೆ ಯೂಟ್ಯೂಬ್ ಸಕಾರಾತ್ಮಕ ಪರಿಣಾಮವನ್ನು ಬೀರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಯೂಟ್ಯೂಬ್ ಸೃಷ್ಟಿಕರ್ತರಿಗೆ ತಮ್ಮ ವೃತ್ತಿಪರ ಗುರಿಗಳನ್ನು ಸಾಧಿಸಲು ಮತ್ತು ವ್ಯವಹಾರಕುದುರಿಸಿಕೊಳ್ಳಲುಯೂಟ್ಯೂಬ್ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಆಕ್ಸ್‌ಫರ್ಡ್ ಎಕನಾಮಿಕ್ಸ್ ಸಿಇಒ ಆಡ್ರಿಯನ್ ಕೂಪರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT