ಬೆಂಗಳೂರು: ದೇಶದಲ್ಲಿ ಟಿಕ್‌ಟಾಕ್‌ಗೆ ನಿರ್ಬಂಧ ವಿಧಿಸಿದ ಬಳಿಕ ಕಿರು ವಿಡಿಯೊ ಆ್ಯಪ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಗೂಗಲ್ ಒಡೆತನದ ಶಾರ್ಟ್ಸ್ ಹೆಚ್ಚಿನ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ನೂತನ ಅಪ್‌ಡೇಟ್‌ನಲ್ಲಿ ಯೂಟ್ಯೂಬ್ ಶಾರ್ಟ್ಸ್ ವಿಡಿಯೊಗಳು ಸ್ಮಾರ್ಟ್ ಟಿವಿಯಲ್ಲೂ ದೊರೆಯುತ್ತಿದೆ. ಅದರ ಮೂಲಕ ದೊಡ್ಡ ಪರದೆಯಲ್ಲಿ ಶಾರ್ಟ್ಸ್ ವಿಡಿಯೊ ವೀಕ್ಷಿಸಲು ಅನುಕೂಲವಾಗಲಿದೆ.
ಯೂಟ್ಯೂಬ್ ಶಾರ್ಟ್ಸ್ ಹೆಚ್ಚಿನ ಸಂಖ್ಯೆಯ ಕ್ರಿಯೇಟರ್‌ಗಳನ್ನು ಸೆಳೆಯುವ ಸಲುವಾಗಿ ಜಾಹೀರಾತು ಆದಾಯದಲ್ಲಿ ವಿಡಿಯೊ ರಚನೆಕಾರರಿಗೆ ಶೇ 45ರಷ್ಟು ಆದಾಯದ ಪಾಲು ನೀಡುತ್ತಿದೆ.