ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝೂಮ್‌ ಕಂಪನಿಯಲ್ಲಿ 1,300 ಉದ್ಯೋಗ ಕಡಿತ

Last Updated 8 ಫೆಬ್ರುವರಿ 2023, 3:16 IST
ಅಕ್ಷರ ಗಾತ್ರ

ನವದೆಹಲಿ: ವಿಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆಯಲ್ಲಿ ಸದ್ದು ಮಾಡಿದ್ದ ಝೂಮ್ ಈಗ 1,300 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ಹೇಳಿದೆ.

ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಹೆಚ್ಚಿನ ಬೇಡಿಕೆ ಗಳಿಸಿದ್ದ ಝೂಮ್ ಬಳಿಕ ಆದಾಯದಲ್ಲಿ ಕುಸಿತ ಕಂಡಿದೆ ಎಂದು ಝೂಮ್ ವಿಡಿಯೊ ಕಮ್ಯೂನಿಕೇಷನ್ಸ್ ಕಂಪನಿ ಹೇಳಿದೆ.

ಈ ಹೆಜ್ಜೆಯು ಜಾಗತಿಕವಾಗಿ ಕಂಪನಿಯ ಶೇ 15ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಿಇಒ ಎರಿಕ್ ಯುವಾನ್ ತಿಳಿಸಿದ್ದಾರೆ.

ಕಳೆದ ವರ್ಷ ಸಂಸ್ಥೆಯ ಷೇರುಗಳು ಶೇ 63ರಷ್ಟು ಕುಸಿತ ಕಂಡಿವೆ.

ಕೋವಿಡ್ ಲಾಕ್‌ಡೌನ್ ಕಾಲಘಟ್ಟದಲ್ಲಿ ಮನೆ ಮಾತಾಗಿದ್ದ ಜನಪ್ರಿಯ ಝೂಮ್ ಆ್ಯಪ್‌ನ ಬೆಳವಣಿಗೆ ಆ ನಂತರ ಕುಂಠಿತಗೊಂಡಿದೆ.

2021ರ ಹಣಕಾಸಿನ ಸಾಲಿನಲ್ಲಿ ಝೂಮ್ ಆದಾಯ ಒಂಬತ್ತು ಪಟ್ಟು ಹೆಚ್ಚಾಗಿತ್ತು. 2022ರಲ್ಲಿ ನಾಲ್ಕು ಪಟ್ಟು (ಶೇ 6.7) ಮಾತ್ರ ಹೆಚ್ಚಳಗೊಂಡಿತ್ತು. ಅಲ್ಲದೆ 2022ರಲ್ಲಿ ಲಾಭ ಶೇ 38ರಷ್ಟು ಕುಸಿದಿದೆ ಎಂದು ವಿಶ್ಲೇಷಕರು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT