ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಸ್ಟೋರ್‌ನಿಂದ ಸಾವಿರಾರು ಆ್ಯಪ್‌ಗಳ ತೆಗೆದುಹಾಕಿದ ಆ್ಯಪಲ್: ಸಂಶೋಧನಾ ಸಂಸ್ಥೆ

Last Updated 2 ಆಗಸ್ಟ್ 2020, 9:40 IST
ಅಕ್ಷರ ಗಾತ್ರ

ಸಂಶೋಧನಾ ಸಂಸ್ಥೆ ಕಿಮೈನ ಮಾಹಿತಿಯ ಪ್ರಕಾರ ಆ್ಯಪಲ್ ತನ್ನ ಚೀನೀ ಆಪ್ ಸ್ಟೋರ್‌ನಿಂದ 26,000 ಕ್ಕೂ ಹೆಚ್ಚಿನ ಗೇಮ್ ಆ್ಯಪ್‌ ಸೇರಿದಂತೆ 29,800 ಆ್ಯಪ್‌ಗಳನ್ನು ಶನಿವಾರ ತೆಗೆದುಹಾಕಿದೆ. ಚೀನಾದ ಅಧಿಕಾರಿಗಳ ಪರವಾನಗಿ ಪಡೆಯದ ಗೇಮಿಂಗ್ ಆ್ಯಪ್‌ಗಳು ಇವಾಗಿದ್ದು, ಈ ಕುರಿತ ಪ್ರತಿಕ್ರಿಯೆಗೆ ಆ್ಯಪ್ ತಕ್ಷಣ ಪ್ರತಿಕ್ರಿಯಿಸಿಲ್ಲ.

ಈ ವರ್ಷದ ಆರಂಭದಲ್ಲಿ, ಬಳಕೆದಾರರಿಗೆ ಅಪ್ಲಿಕೇಷನ್‌ನಲ್ಲಿ ಖರೀದಿಗೆ ಅನುವು ಮಾಡಿಕೊಡುವ ಸರ್ಕಾರ ನೀಡಿರುವ ಪರವಾನಗಿಯ ಸಂಖ್ಯೆಯನ್ನು ಸಲ್ಲಿಸುವಂತೆ ಆ್ಯಪಲ್, ಗೇಮಿಂಗ್ ಆ್ಯಪ್ ಪ್ರಕಾಶಕರಿಗೆ ಜೂನ್ ಅಂತ್ಯದವರೆಗೆ ಗಡುವನ್ನು ನೀಡಿತ್ತು.

ಚೀನಾದ ಆಂಡ್ರಾಯ್ಡ್ ಅಪ್ಲಿಕೇಶನ್ ಸ್ಟೋರ್‌ಗಳು ಆ ನಿಯಮಗಳನ್ನು ಬಹಳ ಹಿಂದಿನಿಂದಲೇ ಪಾಲಿಸುತ್ತಾ ಬಂದಿವೆ. ಆದರೆ ಈ ವರ್ಷ ಆ್ಯಪಲ್ಅವುಗಳನ್ನು ಏಕೆ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ.

ಸ್ಮಾರ್ಟ್‌ ಫೋನ್ ತಯಾರಕ ಸಂಸ್ಥೆ ಜುಲೈ ಮೊದಲ ವಾರದಲ್ಲಿ 2,500ಕ್ಕೂ ಹೆಚ್ಚು ಶೀರ್ಷಿಕೆಗಳನ್ನು ತನ್ನ ಆಪ್ ಸ್ಟೋರ್‌ನಿಂದ ತೆಗೆದುಹಾಕಿದೆ. ಜಿಂಗಾ ಮತ್ತು ಸೂಪರ್‌ಸೆಲ್ ಗೇಮಿಂಗ್ ಆ್ಯಪ್‌ಗಳು ಕೂಡ ಇದರಲ್ಲಿ ಸೇರಿವೆ ಎಂದು ಸಂಶೋಧನಾ ಸಂಸ್ಥೆ ಸೆನ್ಸಾರ್ ಟವರ್ ಈ ವೇಳೆ ವರದಿ ಮಾಡಿದೆ. ಸೂಕ್ಷ್ಮ ವಿಷಯವನ್ನು ತೆಗೆದುಹಾಕುವ ಸಲುವಾಗಿ ಚೀನಾ ಸರ್ಕಾರ ತನ್ನ ಗೇಮಿಂಗ್ ಉದ್ಯಮದ ಮೇಲೆ ಕಠಿಣ ನಿಯಮಗಳನ್ನು ಜಾರಿಗೆ ತರಲು ಬಹುಕಾಲದಿಂದಲೂ ಪ್ರಯತ್ನಿಸುತ್ತಿದೆ.

ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಡೆವಲಪರ್ಸ್‌ಗಳ ಆದಾಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದರೆ ವ್ಯಾಪಾರ ಪರವಾನಗಿ ಪಡೆಯುವಲ್ಲಿನ ತೊಂದರೆಗಳಿಂದಾಗಿ ಚೀನಾದ ಇಡೀ ಐಒಎಸ್ ಗೇಮಿಂಗ್ ಉದ್ಯಮಕ್ಕೆ ವಿನಾಶಕಾರಿಯಾಗಿದೆ ಎಂದು ಆ್ಯಪ್ಇನ್ ಚೀನಾ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಟಾಡ್ ಕುಹ್ನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT