ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯರ ಔಷಧ ಚೀಟಿ ಓದಿ ಹೇಳಲಿದೆ ಗೂಗಲ್: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ

ಗೂಗಲ್ ಲೆನ್ಸ್ ಮೂಲಕ ವೈದ್ಯರ ಚೀಟಿ ಓದಲು ಸುಲಭ
Last Updated 21 ಡಿಸೆಂಬರ್ 2022, 12:55 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯರು ಬರೆದು ಕೊಡುವ ಔಷಧ ಚೀಟಿಯನ್ನು ಓದುವುದೆಂದರೆ ಅದೊಂದು ಕಷ್ಟದ ಕೆಲಸವೇ ಸರಿ. ಆದರೆ, ಅದನ್ನು ಸುಲಭವಾಗಿಸಲು ಗೂಗಲ್ ನೆರವಾಗಲಿದೆ.

ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಅಪ್ಲಿಕೇಶನ್ ಸಹಾಯದಿಂದ ಗೂಗಲ್ ಲೆನ್ಸ್ ಬಳಸಿಕೊಂಡು ವೈದ್ಯರ ಚೀಟಿಯನ್ನು ಓದುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಗೂಗಲ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ಎಐ ಫಾರ್ ಇಂಡಿಯಾ ಮೂಲಕ, ನೂತನ ತಂತ್ರಜ್ಞಾನದ ಮೂಲಕ, ಕ್ಲಿಷ್ಟವಾದ ಮಾಹಿತಿಯನ್ನು ಡಿಕೋಡ್ ಮಾಡಿ, ವಿವರಿಸಲು ಗೂಗಲ್ ನೆರವಾಗಲಿದೆ.

ಗೂಗಲ್ ಈವೆಂಟ್‌ನಲ್ಲಿ ನೂತನ ತಂತ್ರಜ್ಞಾನವನ್ನು ಪ್ರಸ್ತುತಪಡಿಸಲಾಗಿದೆ. ಈಗಾಗಲೇ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಪರೀಕ್ಷೆಗೆ ಒಳಪಡಿಸಿದ ಬಳಿಕ, ಸಾರ್ವಜನಿಕರಿಗೆ ಬಳಕೆಗೆ ಒದಗಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT