ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗವಾಗಿ ಚಾರ್ಜ್‌ ಆಗುವ, ಬೆಂಕಿ ಹತ್ತಿಕೊಳ್ಳದ ಬ್ಯಾಟರಿ ತಂತ್ರಜ್ಞಾನ ಅಭಿವೃದ್ಧಿ

‘ನೋರ್ಡಿಶ್ಚೇ ಟೆಕ್ನಾಲಜೀಸ್‌‘ ಕಂಪನಿ
Last Updated 28 ಮೇ 2022, 8:42 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಸ್ಟಾರ್ಟ್‌ಅಪ್‌ ‘ನೋರ್ಡಿಶ್ಚೇ ಟೆಕ್ನಾಲಜೀಸ್‌‘ ಕಂಪನಿ ವಿಶ್ವದಲ್ಲೇ ಅತಿ ವೇಗವಾಗಿ ಚಾರ್ಜ್‌ ಆಗುವ ಹಾಗೂ ಬೆಂಕಿ ಹತ್ತಿಕೊಳ್ಳದ ತಂತ್ರಜ್ಞಾನವನ್ನು ಸಿದ್ದಪಡಿಸಿದೆ.

ಲಿಥೀಯಂ ಇಯಾನ್‌ ಸೆಲ್ಸ್‌ ಬ್ಯಾಟರಿಗಿಂತಲೂ 50 ಪಟ್ಟು ಹೆಚ್ಚು ವೇಗದಲ್ಲಿ ಚಾರ್ಜ್‌ ಆಗುವ, ಲಿಥೀಯಂ ಗುಣಮಟ್ಟದ ಸಾಮರ್ಥ್ಯ ಹೊಂದಿರುವ, ನಾನ್‌ ಟಾಕ್ಸಿಕ್‌ ಮತ್ತು ಅಗ್ನಿ ನಿರೋಧಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಟರೀ ಕ್ಷೇತ್ರದಲ್ಲಿನ ವಿನೂತನ ಹಾಗೂ ಕ್ರಾಂತಿಕಾರಿ ತಂತ್ರಜ್ಞಾನವನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಮುಖ್ಯಸ್ಥರಾದ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

ಎಲ್ಲ ಮಾದರಿಯ ಎಲೆಕ್ಟ್ರಾನಿಕ್‌ ಹಾಗೂ ಇವಿ ವೆಹಿಕಲ್‌ಗಳಲ್ಲಿ ಬಳಸಲಾಗುತ್ತಿರುವ ಲೀಥಿಯಂ ಬ್ಯಾಟರಿ ತಂತ್ರಜ್ಞಾನದಿಂದ ಬಹಳಷ್ಟು ಸಮಸ್ಯೆಗಳು ಕಂಡುಬರುತ್ತಿವೆ. ವಾಹನಗಳಲ್ಲಿ ಬಳಸಲಾಗಿರುವ ಬ್ಯಾಟರಿಗಳು ಬೆಂಕಿ ಹತ್ತಿಕೊಳ್ಳುವುದು, ಸರಿಯಾದ ಸಾಮರ್ಥ್ಯ ತೋರದಿರುವುದು, ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರವೆಂಬಂತೆ ‘ಅಲ್ಯೂಮಿನಿಯಂ ಇಯಾನ್‌ ಗ್ರಾಫೇನ್‌ ಪೌಚ್‌ ಸೆಲ್‌‘ ತಂತ್ರಜ್ಞಾನವನ್ನ ನೋರ್ಡಿಶ್ಚೇ ಟೆಕ್ನಾಲಜೀಸ್‌ ಕಂಪನಿಯು ಸಿಪಿಟ್‌ ಸಂಸ್ಥೆಯ ಜೊತೆಗೂಡಿ ಸಂಶೋಧಿಸಿದೆ. ರಫ್ತು ಅವಲಂಭಿತ ಲೀಥಿಯಂ ಬ್ಯಾಟರಿ ತಂತ್ರಜ್ಞಾನದಷ್ಟೇ ಸಾಮರ್ಥ್ಯ ಹೊಂದಿರುವ ಈ ತಂತ್ರಜ್ಞಾನ ನಮ್ಮ ದೇಶದ ಆವಿಷ್ಕಾರಗಳಲ್ಲಿ ಬಹಳ ಮಹತ್ವದ್ದು ಎಂದುನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನೋರ್ಡಿಶ್ಚೇ ಟೆಕ್ನಾಲಜೀಸ್‌ ನ ಮುಖ್ಯ ತಾಂತ್ರಿಕ ಅಧಿಕಾರಿ ಸಬ್ಯಸಾಚಿ ದಾಸ್‌ ಮಾತನಾಡಿ, ಕಳೆದ 5 ವರ್ಷಗಳಿಂದ ನಮ್ಮ ಸಂಸ್ಥೆ ನಡೆಸಿದ ಸಂಶೋಧನೆಯ ಫಲವಾಗಿ ಈ ವಿನೂತನ ಅಲ್ಯೂಮಿನಿಯಂ-ಗ್ರಾಫೇನ್‌ ಪೌಚ್‌ ಸೆಲ್‌ ಮತ್ತು ಭವಿಷ್ಯದ ಇಲೆಕ್ಟ್ರಿಕಲ್‌ ವೆಹಿಕಲ್‌ ಬ್ಯಾಟರಿ ತಂತ್ರಜ್ಞಾನವನ್ನು ಸಂಶೋಧಿಸಲಾಗಿದೆ. ಈ ಬ್ಯಾಟರಿಗಳು ಬಹಳಷ್ಟು ಹಗುರ, ವಿಶ್ವದಲ್ಲೇ ಅತಿ ವೇಗವಾಗಿ ಚಾರ್ಜ್‌ ಆಗುತ್ತವೆ. ಅಲ್ಲದೇ, ಈ ಬ್ಯಾಟರಿ ಕೆಲಸ ಮಾಢುವಾಗ ಬೆಂಕಿ ಹತ್ತಿಕೊಳ್ಳುವುದಿಲ್ಲ. ಹೆಚ್ಚಿನ ಸಾಮರ್ಥ್ಯ ಹೊಂದಿರುವ ಮತ್ತು 5 ರಿಂದ 7 ವರ್ಷಗಳ ಶೆಲ್ಪ್‌ ಲೈಪ್‌ ಹೊಂದಿವೆ ಎಂದು ಅವರು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಪುದುಚೇರಿ ಸಚಿವ ಕೆ. ಲಕ್ಷ್ಮಿನಾರಾಯಣ, ಕಾಂಗ್ರೆಸ್‌ನ ಪ್ರಕಾಶ್‌ ಕೆ. ರಾಥೋಡ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಲ್ಯೂಮಿನಿಯಂ – ಗ್ರಾಫೇನ್‌ ಪೌಚ್‌ ಸೆಲ್‌ ಬ್ಯಾಟರಿ ತಂತ್ರಜ್ಞಾನದ ವಿಶಿಷ್ಟತೆಗಳು:

• ಹಗುರ ಮತ್ತು ಅತಿವೇಗವಾಗಿ ಚಾರ್ಜ್‌ ಅಗುವ ಸಾಮರ್ಥ್ಯ
• ಹೈ ಎನರ್ಜಿ ಡೆನ್ಸಿಟಿ 150 ವ್ಯಾಟ್‌/ಕೆಜಿ
• ಕೈಗೆಟಕುವ ದರ
• ಫ್ಲೇಕ್ಸಿಬಲ್‌ ಸೋರ್ಸ್‌ ಆಫ್‌ ಎನರ್ಜಿ ಸ್ಟೋರೇಜ್‌
• ಲಾರ್ಜ್‌ ರೇಂಜ್‌ ಆಫ್‌ ಟೆಂಪರೇಚರ್‌ನಲ್ಲಿ ಕಾರ್ಯನಿರ್ವಹಣೆ (From -25C to 60C)
• 5 ರಿಂದ 7 ವರ್ಷಗಳ ಶೆಲ್ಫ್‌ ಲೈಪ್‌
• ಸುಮಾರು 3000 ಬಾರಿ ರಿಚಾರ್ಜ್‌ ಮಾಡಬಹುದು
• ಎಕೋ ಫ್ರೇಂಡ್ಲಿ – ನಾನ್‌ ಟಾಕ್ಸಿಕ್‌ ಮತ್ತು ಬೆಂಕಿ ಹತ್ತಿಕೊಳ್ಳದೇ ಇರುವುದು
• ಹೈ ಟೆನ್ಸಿಲ್‌ ಸ್ಟ್ರೇಂಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT