‘ಮೊಬೈಲ್‌ನಲ್ಲಿ ಗೇಮ್ ಆಡುವುದು ಬಿಟ್ಟು ಓದಿಕೊ’ ಎಂದಿದ್ದಕ್ಕೆ 12 ವರ್ಷದ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ.ವಾಟ್ಸ್‌ಆ್ಯಪ್ ಗ್ರೂಪಿನಿಂದ ಹೊರಹಾಕಿದ್ದರಿಂದ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ.ದೆಹಲಿಯಲ್ಲಿ ಸಿ.ಎಸ್. ಮಾಡುತ್ತಿದ್ದ ವಿದ್ಯಾರ್ಥಿನಿ ತನ್ನ ಗೆಳೆಯನೊಂದಿಗೆ ವಾಟ್ಸ್‌ಆ್ಯಪ್ ವಿಡಿಯೊ ಚಾಟ್ ಮಾಡುತ್ತಲೇ ಆತ್ಮಹತ್ಯೆಗೆ ಶರಣು.

ಇಂತಹ ಸುದ್ದಿಗಳು ಇಂದು ಮೇಲಿಂದ ಮೇಲೆ ಕೇಳಿಬರುತ್ತಿವೆ. ಈ ಆತ್ಮಹತ್ಯೆಗಳಿಗೆ ಇತರ ಕಾರಣಗಳಿದ್ದರೂ ತಂತ್ರಜ್ಞಾನದ ದುರ್ಬಳಕೆಯಿಂದಾಗುತ್ತಿರುವ ದುರಂತಗಳನ್ನು ಮಾತ್ರ ಈ ಲೇಖನದಲ್ಲಿ ಪರಿಗಣಿಸಲಾಗಿದೆ.

ಶಾಲಾವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರು ಮೊಬೈಲ್, ಕಂಪ್ಯೂಟರ್, ಇಂಟರ್‌ನೆಟ್‌ನಂತಹ ತಂತ್ರಜ್ಞಾನದ ಮೋಡಿಗೆ ಒಳಗಾಗಿರುವುದು ಅಷ್ಟಿಷ್ಟಲ್ಲ. ಸ್ಮಾರ್ಟ್‌ಫೋನ್‌ಗಳು ಒಂದು ವರ್ಷದ ಮಗುವಿನಿಂದ ಹಿಡಿದು ವಯೋವೃದ್ಧರನ್ನು ಸಹ ಆಕರ್ಷಿಸಿರುವುದು ಸುಳ್ಳಲ್ಲ. ಈ ಪಟ್ಟಿಗೆ ಒಂದು ವರ್ಷದ ಕೆಳಗಿನ ಮಕ್ಕಳನ್ನು ಸೇರಿಸದಿದ್ದರೆ ತಪ್ಪಾಗುತ್ತದೆ. ಏಕೆಂದರೆ ಬಹುತೇಕ ತಾಯಂದಿರು ತಮ್ಮ ಏಳೆಂಟು ತಿಂಗಳ ಮಕ್ಕಳಿಗೆ ಊಟ ಮಾಡಿಸುವಾಗ, ಆಡಿಸುವಾಗ, ಮಕ್ಕಳನ್ನು ಓಲೈಸಲು ಮೊಬೈಲ್ ತೋರಿಸುವುದನ್ನು ನೋಡಬಹುದು. ಒಂದು–ಒಂದೂವರೆ ವರ್ಷದ ನನ್ನ ಮಗ/ಮಗಳು ಸ್ಮಾರ್ಟ್‌ಫೋನ್ ಅನ್ನು ಆಪರೇಟ್ ಮಾಡುತ್ತಾರೆ ಎಂಬುದೇ ಪೋಷಕರ ಖುಷಿಯ ವಿಷಯವಾಗಿದೆ.

ಇನ್ನು ಶಿಕ್ಷಕರು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ನೀಡುವ ಪ್ರಾಜೆಕ್ಟ್ ಮತ್ತು ನಿಯೋಜಿತ ಕಾರ್ಯಗಳನ್ನು ಇಂಟರ್‌ನೆಟ್‌ನಿಂದ ಮಾಹಿತಿಯನ್ನು ಹುಡುಕಿ, ತಯಾರಿಸಿ ಎಂಬ ಉಚಿತ ಸಲಹೆಯನ್ನು ನೀಡುತ್ತಿರುವುದು ಸತ್ಯ. ಇವೆಲ್ಲದರಿಂದ ಪಾಲಕರು ಮತ್ತು ಶಿಕ್ಷಕರು ಸಹ ಮಕ್ಕಳು ತಂತ್ರಜ್ಞಾನ ಬಳಸುವುದಕ್ಕೆ ಪರೋಕ್ಷವಾಗಿ, ಕೆಲವೊಮ್ಮೆ ಪ್ರತ್ಯಕ್ಷವಾಗಿ ಕಾರಣರಾಗಿಬಿಡುತ್ತಾರೆ. ಆವಶ್ಯಕತೆಗಾಗಿ ಅವಲಂಬಿಸುವ ತಂತ್ರಜ್ಞಾನವು ಕ್ರಮೇಣ ಮನೋರಂಜನೆಗೂ ದಾರಿ ಮಾಡಿಕೊಡುತ್ತ, ಕ್ರಮೇಣ ಅದೇ ಚಟವಾಗುತ್ತದೆ.

ಆನ್‌ಲೈನ್ ಗೇಮ್‌ಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುವ ಮಕ್ಕಳು ಕೂತಕಡೆಯಿಂದ ಅಲುಗಾಡದೇ ಅವುಗಳಲ್ಲಿ ತಲ್ಲೀನರಾಗಿರುತ್ತಾರೆ. ಇನ್ನೂ ಪ್ರಾಥಮಿಕ ಹಾಗೂ ಹೈಸ್ಕೂಲಿನ ವಿದ್ಯಾರ್ಥಿಗಳು ಕೆಲವು ಆನ್‌ಲೈನ್ ಗೇಮ್‌ಗಳ ಸೂಚನೆಗಳನ್ನು ಪಾಲಿಸಲು/ಅನುಕರಿಸಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡ ಅನೇಕ ದುರಂತಗಳು ನಮ್ಮ ಮುಂದಿವೆ. ಮಕ್ಕಳ ಮತ್ತು ಹದಿಹರೆಯದವರ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೂ ಇವುಗಳ ಬಳಕೆ ಕಾರಣವಾಗಿವೆ.

ಒಂದು ದಿನಕ್ಕೆ ಎರಡು ಗಂಟೆಗಳಿಗಿಂತಲೂ ಹೆಚ್ಚು ಕಾಲ ಮೊಬೈಲ್, ಇಂಟರ್‌ನೆಟ್ ಬಳಸುವ ಯಾವುದೇ ಮಕ್ಕಳಲ್ಲಿ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳು ಕಂಡುಬರುತ್ತಿವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಮಕ್ಕಳಲ್ಲಿನ ಅತಿಯಾದ ಬೊಜ್ಜು, ಚರ್ಮ ಸಂಬಂಧಿ ಕಾಯಿಲೆಗಳು, ದೃಷ್ಟಿದೋಷಗಳು, ಸ್ನಾಯುಸಂಬಂಧಿ ತೊಂದರೆಗಳು, ನಿದ್ರಾಸಂಬಂಧಿ ತೊಂದರೆಗಳು, ಆಹಾರಸೇವಿಸಲು (ಈಟಿಂಗ್ ಡಿಸಾರ್ಡರ್) ತೊಂದರೆಗಳು, ಆತಂಕ, ಆಕ್ರಮಣಕಾರಿ ವರ್ತನೆ, ಕೆಟ್ಟ ಆಲೋಚನೆ, ಆತ್ಮಹತ್ಯೆ, ಬೆನ್ನು–ಕುತ್ತಿಗೆಯ ನೋವು, ಭಾವವಿಕಾರಗಳು, ಸಂವೇದನಾ ರಹಿತತೆ, ಸಂವಹನ ಸಾಮರ್ಥ್ಯದ ಕೊರತೆ, ಖಿನ್ನತೆ, ಮಾಂಸಖಂಡಗಳ ಅಸಮರ್ಪಕ ಬೆಳವಣಿಗೆ, ಒಂಟಿತನ, ಹತೋಟಿಯಿಲ್ಲದ ಆವೇಗಗಳು, ಮಾದಕವ್ಯಸನ – ಮುಂತಾದ ಸಮಸ್ಯೆಗಳಿಗೆ ತಂತ್ರಜ್ಞಾನದ ಉಪಕರಣಗಳ ಅತಿಯಾದ ಬಳಕೆಯೆ ಕಾರಣ. ಒಂದು ಸಂಶೋಧನೆಯ ಪ್ರಕಾರ ಅಪಸ್ಮಾರವುಳ್ಳ ಮಕ್ಕಳು ಅತಿಯಾಗಿ ವಿಡಿಯೊ ಗೇಮ್ ಆಡುವುದು ಸೆಳವನ್ನು ಪ್ರಚೋದಿಸುತ್ತದೆ. ಎ.ಡಿ.ಎಚ್.ಡಿ ಲಕ್ಷಣಗಳುಳ್ಳ ಮಕ್ಕಳು ಇತರೆ ಮಕ್ಕಳಿಗಿಂತ ದೃಶ್ಯಮಾಧ್ಯಮಗಳ ಬಳಕೆಯ ಚಟಕ್ಕೆ ಒಳಗಾಗಿರುತ್ತಾರೆ.ಇದನ್ನು ಶಿಕ್ಷಕರು, ಅವರಿಗಿಂತಲೂ ಹೆಚ್ಚಾಗಿ ಪೋಷಕರು ಅರ್ಥಮಾಡಿಕೊಂಡು ಮಕ್ಕಳನ್ನು ಈ ಚಟದಿಂದ ಪಾರು ಮಾಡಬೇಕಾಗಿದೆ.

ಪರಿಹಾರಗಳು

* ಮಕ್ಕಳಿಗೆ ತಂತ್ರಜ್ಞಾನವನ್ನು ಬಳಸಬೇಡಿ ಎಂದು ಹೇಳುವುದಕ್ಕಿಂತ ಎಷ್ಟು ಪರಿಣಾಮಕಾರಿಯಾಗಿ/ ಪರಿಮಿತಿಯಲ್ಲಿ ಬಳಸಿದರೆ ಉತ್ತಮ ಎಂಬುದನ್ನು ಅರ್ಥ ಮಾಡಿಸಿ.

* ಮಕ್ಕಳನ್ನು (ಹದಿನೆಂಟು ವಯೋಮಿತಿವರೆಗೂ) ರಚನಾತ್ಮಕ ಆಟ ಮತ್ತು ಕ್ರೀಡೆಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ. ಇದರಿಂದ ಮಕ್ಕಳಿಗೆ ಇತರರ ಪ್ರಾಮುಖ್ಯ ತಿಳಿಯುತ್ತದೆ. ಸಹಯೋಗ–ಸಹಕಾರಗಳ ಅಗತ್ಯವೂ ತಿಳಿಯುತ್ತದೆ. ಆರೋಗ್ಯಕರ ಸ್ಫರ್ಧಾ ಮನೋಭಾವವೂ ಬೆಳೆಯುತ್ತದೆ.

* ಹೈಸ್ಕೂಲ್ ಮತ್ತು ಪಿಯು ವಿದ್ಯಾರ್ಥಿಗಳಿಗೆ ಮೊಬೈಲ್ ಕೊಡಿಸುವುದನ್ನು ಸಾಧ್ಯವಾದಷ್ಟು (ನಯವಾಗಿ ತಿರಸ್ಕರಿಸಿ) ನಿಯಂತ್ರಿಸಿ. ಅವಶ್ಯಕವಿದ್ದಲ್ಲಿ ಪಾಲಕರ ಮೊಬೈಲ್ ಅಥವಾ ಇಂಟರ್‌ನೆಟ್ ಬಳಕೆಗೆ ಅನುಮತಿ ನೀಡಿ.

* ಶಿಕ್ಷಕರು ನೀಡುವ ನಿಯೋಜಿತ ಕಾರ್ಯಗಳನ್ನು ಕಾಪಿ/ಕಟ್/ಪೇಸ್ಟ್ ಮಾಡದಂತೆ ಸೂಚನೆ ನೀಡಿ. ಮಕ್ಕಳಲ್ಲಿನ ಸ್ವಯಂ ಅಭಿವ್ಯಕ್ತಿ ಮತ್ತು ಸೃಜನಶೀಲ ಸಾಮರ್ಥ್ಯಗಳನ್ನು ಬೆಳೆಸಲು ನೆರವಾಗಿ.

* ಸರ್ಚ್ ಎಂಜಿನ್‌ನ ಮೊರೆ ಹೋಗದೆ ತಾನೇ ಸ್ವತಃ ನಿಯೋಜಿತ ಕಾರ್ಯ, ಪ್ರಾಜೆಕ್ಟ್ ವರ್ಕ್ ಮಾಡಿದ ವಿದ್ಯಾರ್ಥಿಗಳಿಗೆ (ಸಾಧಾರಣ ಮಟ್ಟದ ಕಾರ್ಯ ನಿರ್ವಹಣೆಯಿದ್ದರೂ) ಹೆಚ್ಚು ಪ್ರೋತ್ಸಾಹ ಮತ್ತು ಮೆಚ್ಚುಗೆಗಳನ್ನು ಶಿಕ್ಷಕರು ನೀಡಲಿ.

* ಶಾಲಾ–ಕಾಲೇಜುಗಳಲ್ಲಿ ಮೊಬೈಲ್‌ನ ದುರ್ಬಳಕೆಯ ಕುರಿತು ಚರ್ಚಾಕೂಟಗಳನ್ನು ಏರ್ಪಡಿಸಿ.

* ಮಕ್ಕಳು ಹೈಸ್ಕೂಲ್ ಮತ್ತು ಕಾಲೇಜು ಮೆಟ್ಟಿಲೇರುತ್ತಿದ್ದಂತೆ ಅವರ ಮನೋರಂಜನೆಯ ಅಭಿರುಚಿಗಳು ಬದಲಾಗುತ್ತವೆ. ಆನ್‌ಲೈನ್‌ನ ಹೊಸ ಹಾಗೂ ಹೆಚ್ಚು ಸ್ನೇಹ ಸಂಬಂಧಗಳು ಮಕ್ಕಳನ್ನು ಆಕರ್ಷಿಸುತ್ತವೆ. ಮಕ್ಕಳಿಗೆ ನಮ್ಮ ಸುತ್ತಮುತ್ತಲಿನ ಸಂಬಂಧಗಳ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಅದರ ಅನಿವಾರ್ಯತೆ–ವಿಶೇಷತೆಗಳು ಏನು ಎಂಬುದನ್ನು ತಿಳಿಸಿಕೊಡಿ.

* ಮಕ್ಕಳ ಖಾಸಗಿತನಕ್ಕೆ ಧಕ್ಕೆ ತರಬಾರದು ಎಂಬುದಕ್ಕೆ ಜೋತುಬಿದ್ದು ಅವರ ಸ್ವೇಚ್ಛಚಾರಕ್ಕೆ ದಾರಿಯನ್ನು ಕಲ್ಪಿಸಿ ಕೊಡಬೇಡಿ. ಮಕ್ಕಳ ತಂತ್ರಜ್ಞಾನದ ಬಳಕೆಯ ಬಗ್ಗೆ ನಿಗಾ ಇರಲಿ.

* ಮಕ್ಕಳಲ್ಲಿ ನೈತಿಕ ಮೌಲ್ಯಗಳು ಬುದ್ಧಿಶಕ್ತಿಯೊಡನೆ ಬೆಳೆಯುತ್ತವೆ. ಕಾವ್ಯ–ನಾಟಕ, ವಿಜ್ಞಾನ, ಆತ್ಮಚರಿತ್ರೆ – ಹೀಗೆ ವಿಭಿನ್ನ ಪ್ರಕಾರದ ಸಾಹಿತ್ಯವನ್ನು ಜೊತೆಗೆ ಕೂತು ಓದಿ, ಓದಿಸಿ. ವಿವಿಧ ಪತ್ರಿಕೆ-ಮ್ಯಾಗ್‌ಜೀನ್‌ಗಳನ್ನು ಪರಿಚಯಿಸಿ ಹಂತ ಹಂತವಾಗಿ ಅವುಗಳನ್ನು ಓದುವ ಅಭ್ಯಾಸ ಮೂಡಿಸಿ.

* ಮೊಬೈಲ್ ಬಳಕೆ ಮತ್ತು ಸೆಲ್ಫೀ ತೆಗೆದುಕೊಳ್ಳುವುದು ಕೂಡ ಚಟ ಎಂಬುದು ಸಾಬೀತಾಗಿದೆ. ಇದು ಒಂದು ಎಚ್ಚರಿಕೆಯ ಗಂಟೆಯಾಗಬೇಕಿದೆ. ನಿಮ್ಮ ಮಕ್ಕಳು ಇಂತಹುದಕ್ಕೆ ಸಿಲುಕಿದ್ದಾರೆ ಎಂಬ ಸಂಶಯ ಬಂದಲ್ಲಿ ತಜ್ಞರ ಸಹಾಯ ಪಡೆಯಲು ಹಿಂಜರಿಯಬೇಡಿ. ತಡೆಗಟ್ಟುವುದು, ಚಿಕಿತ್ಸೆಗಿಂತ ಲಾಭದಾಯಕ ಎಂಬುದು ಇಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ತಂತ್ರಜ್ಞಾನದ ಸದ್ಬಳಕೆಯತ್ತೆ ನಮ್ಮ ಗಮನವಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.