ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ನೀವಿಲ್ಲದ ನಂತರ’ ಗೂಗಲ್ ಖಾತೆ ಏನಾಗುತ್ತದೆ?

Last Updated 23 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಇಂಟರ್ನೆಟ್ ಯುಗದಲ್ಲಿ ಡೇಟಾ ಎಂಬುದು ತುಂಬಾ ಅಮೂಲ್ಯ. ನೀವು ಬಳಸುವ ಸ್ಮಾರ್ಟ್‌ಫೋನ್‌ನಲ್ಲಿಯೇ ನಿಮ್ಮ ಎಲ್ಲ ಮಾಹಿತಿಗಳು ಅಡಗಿರುತ್ತವೆ.

ನಿಮ್ಮ ಜೀವನ ಮುಗಿದ ನಂತರ ಈ ಮಾಹಿತಿ ಅಥವಾ ಡೇಟಾಗಳ ಕತೆಯೇನು? ನಮ್ಮ ಲೈಫ್‌ನಲ್ಲಿ ನಾಳೆ ಏನಾಗುತ್ತದೆ ಎಂದು ಗೊತ್ತಿಲ್ಲ. ನಾಳೆ ನಡೆಯುವುದನ್ನು ನಮ್ಮಿಂದ ನಿಯಂತ್ರಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಡಿಜಿಟಲ್ ಲೈಫ್‌? ಅದನ್ನು ನಿಯಂತ್ರಿಸುವುದು ನಮ್ಮಿಂದ ಸಾಧ್ಯ.

ನಾವು ಬಳಸುತ್ತಿರುವ ಸ್ಮಾರ್ಟ್‌ಫೋನ್‌ಗಳು ಗೂಗಲ್ ಖಾತೆಯೊಂದಿಗೆ ಲಿಂಕ್ ಹೊಂದಿರುತ್ತದೆ. ಇಲ್ಲಿ ನಮ್ಮ ಇಮೇಲ್ ಮಾತ್ರ ಅಲ್ಲ ಮ್ಯಾಪ್, ಕ್ಯಾಲೆಂಡರ್, ಫೋಟೊ, ಡ್ರೈವ್, ಯುಟ್ಯೂಬ್ ಹೀಗೆ ಎಲ್ಲ ಆ್ಯಪ್‌ಗಳೂ ಲಿಂಕ್ ಆಗಿರುತ್ತವೆ. ಒಂದು ವೇಳೆ ನೀವು ಮರಣ ಹೊಂದಿದರೆ, ನಿಮ್ಮ ಖಾತೆ ನಿರ್ದಿಷ್ಟ ಸಮಯದವವರೆಗೆ ಚಾಲ್ತಿಯಲ್ಲಿ ಇಲ್ಲದೇ ಇದ್ದರೆ ಗೂಗಲ್ ನಿಮ್ಮ ಡೇಟಾವನ್ನು ಡಿಲೀಟ್ ಮಾಡಬಹುದು. ಅದಕ್ಕಾಗಿ ನೀವು ಗೂಗಲ್ ಖಾತೆಗೆ ಆ ಅಧಿಕಾರವನ್ನು ನೀಡಬೇಕಾಗುತ್ತದೆ.

ಹೀಗೆ ಮಾಡಿ

ಗೂಗಲ್ ಖಾತೆಗೆ ಲಾಗಿನ್ ಆಗಿ myaccount.google.com ಓಪನ್ ಮಾಡಿ

ಅಲ್ಲಿ data and personalization ಕ್ಲಿಕ್ ಮಾಡಿ

ಕೆಳಗಡೆ ಸ್ಕ್ರಾಲ್ ಮಾಡಿದಾಗ Make a plan for your account ಎಂಬ ಆಪ್ಶನ್ ಕಾಣಿಸುತ್ತದೆ. ಕ್ಲಿಕ್ ಮಾಡಿ Start ಬಟನ್ ಒತ್ತಿ.

ನಿಮ್ಮ ಖಾತೆ ಎಷ್ಟು ತಿಂಗಳು ನಿಷ್ಕ್ರಿಯವಾದರೆ ಡೇಟಾ ಡಿಲೀಟ್ ಮಾಡಬಹುದು ಎಂಬ ಅನುಮತಿಯನ್ನು ಗೂಗಲ್ ಖಾತೆಗೆ ನೀಡುವುದಕ್ಕಾಗಿ ನೀವು ಅಲ್ಲಿ ಕೆಲವೊಂದು ಮಾಹಿತಿಗಳನ್ನು ಭರ್ತಿ ಮಾಡಬೇಕಾಗುತ್ತದೆ.

ಮೊದಲಿಗೆ ಎಷ್ಟು ತಿಂಗಳು ನಿಷ್ಕ್ರಿಯವಾದರೆ ಎಂಬ ಆಪ್ಶನ್‌ನಲ್ಲಿ ಎಷ್ಟು ತಿಂಗಳು ಎಂಬುದನ್ನು ಸೆಲೆಕ್ಟ್ ಮಾಡಿ.

ಈ ರೀತಿ ಮಾಹಿತಿ ಡಿಲೀಟ್ ಮಾಡುವ ಮುನ್ನ ಗೂಗಲ್ ಒಂದಕ್ಕಿಂತ ಹೆಚ್ಚು ಬಾರಿ ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ನಿಮಗೆ ತಿಳಿಸುತ್ತದೆ. ಅದಕ್ಕಾಗಿ ಫೋನ್ ಸಂಖ್ಯೆ, ನಿಮ್ಮ ಇಮೇಲ್ ಮತ್ತು ರಿಕವರಿ ಇಮೇಲ್ ನಮೂದಿಸಿ. ನೆಕ್ಸ್ಟ್ ಕ್ಲಿಕ್ ಮಾಡಿ.

ನೀವು 3 ಅಥವಾ 6 ತಿಂಗಳು (ನೀವು ನಮೂದಿಸಿದ ತಿಂಗಳು) ಗೂಗಲ್ ಖಾತೆ ಬಳಸದೇ ಇದ್ದರೆ ನಿಮ್ಮ ಖಾತೆ ನಿಷ್ಕ್ರಿಯ ಎಂದು ಪರಿಗಣಿಸಲಾಗುವುದು ಎಂದು ಸಾಲನ್ನು ನೀವು ಇಲ್ಲಿ ಕಾಣಬಹುದು.

ನಿಮ್ಮ ಖಾತೆ ನಿಷ್ಕ್ರಿಯವಾದ ವಿಷಯವನ್ನು 10 ಮಂದಿಗೆ ತಿಳಿಸಬಹುದು ಮತ್ತು ಕೆಲವರಿಗೆ ನಿಮ್ಮ ಮಾಹಿತಿಯನ್ನು ಪಡೆಯುವ ಅನುಮತಿಯನ್ನೂ ನೀಡಬಹುದು. ಅದಕ್ಕಾಗಿ ನಿಮ್ಮ ವಿಶ್ವಾಸರ್ಹ ಮಿತ್ರರ ಅಥವಾ ಕುಟುಂಬದವರ ಇಮೇಲ್ ಐಡಿ ನಮೂದಿಸಿ.

ನಿಮ್ಮ ಗೂಗಲ್ ಖಾತೆ ನಿಷ್ಕ್ರಿಯ ಆದ ಮೇಲೆ ಅಲ್ಲಿರುವ ಡೇಟಾಗಳನ್ನು ಡಿಲೀಟ್ ಮಾಡಲು ಗೂಗಲ್‌ಗೆ ನೀವು ಅನುಮತಿ ನೀಡುವುದಾದರೆ Yes, Delete my inactive Google Account ಎಂಬ ಆಪ್ಶನ್ ಎನೇಬಲ್ ಮಾಡಿ.

ರಶ್ಮಿ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT