ಆಂಡ್ರಾಯ್ಡ್ ಟಿವಿ !

7

ಆಂಡ್ರಾಯ್ಡ್ ಟಿವಿ !

Published:
Updated:
Deccan Herald

ಆಂಡ್ರಾಯ್ಡ್ ಟಿವಿ

ಪ್ರಸ್ತುತ ಆಂಡ್ರಾಯ್ಡ್ ಟಿವಿಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಈ ಟಿವಿಗಳಿಗೆ ವೈಫೈ ಅಥವಾ ಇಂಟರ್ನೆಟ್ ಕೇಬಲ್ ಬಳಸಿ ಸುಲಭವಾಗಿ ಮೊಬೈಲ್ ಮಾದರಿಯಲ್ಲಿ ಯುಟ್ಯೂಬ್ ಅಥವಾ ಅದೇ ಮಾದರಿಯ ಇತರೆ ಮನರಂಜನಾ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ. ಆದರೆ, ಈಗಲೇ ಟಿವಿ ಖರೀದಿಸಿದ ಹಲವರು ಟಿವಿ ತಂತ್ರಜ್ಞಾನದಲ್ಲಿನ ಬೆಳವಣಿಗೆ ಕಂಡು ಬೇಸರ ಪಡುವಂತಾಗಿದೆ.

ಯೋಚನೆ ಮಾಡಬೇಡಿ. ನಿಮ್ಮ ಹಳೆಯ ಟಿವಿಗೂ ನಿಮ್ಮ ಮೊಬೈಲ್ ಕನೆಕ್ಟ್ ಮಾಡಿಕೊಂಡು ಯುಟ್ಯೂಬ್, ಹಾಟ್‌ಸ್ಪಾಟ್, ವೂಟ್ ಮತ್ತು ಇತರೆ ಮನೋರಂಜನಾ ಅಪ್ಲಿಕೇಶನ್‌ಗಳನ್ನು ಬಳಸಿ ಮನೆಮಂದಿಯೊಡನೆ ಕುಳಿತು ಸಿನಿಮಾ ಅಥವಾ ಬೇರೆ ಬೇರೆ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ಹೀಗೆ ಮಾಡಿ..

ಎನಿಕಾಸ್ಟ್ (AnyCast) ಎಚ್‌ಡಿಎಂಐ ವೈಫೈ ಡಾಂಗಲ್ ಬಳಸಿದರೆ, ಹೀಗೆ ಟಿವಿಯನ್ನು ಈ ಉತ್ಪನ್ನವು ನಿಮಗೆ ಆನ್‌ಲೈನ್ ಮತ್ತು ಕೆಲವೊಂದು ಎಲೆಕ್ಟ್ರಿಕಲ್ ಅಂಗಡಿಗಳಲ್ಲೂ ಲಭ್ಯವಿದೆ. ಈ ಉತ್ಪನ್ನವನ್ನು ಕೇವಲ ಟಿವಿ ಅಷ್ಟೇ ಅಲ್ಲದೆ ಎಕ್ಸ್‌ಟರ್ನಲ್ ಡಿಸ್ ಪ್ಲೇ ಸಾಧನವಾದ ಪ್ರೊಜೆಕ್ಟರ್, ಮಾನಿಟರ್‌ಗಳಿಗೂ ಕನೆಕ್ಟ್ ಮಾಡಬಹುದು.

ಹೇಗೆ ಸಂಪರ್ಕಿಸುವುದು?

ಎನಿಕಾಸ್ಟ್ ಖರೀದಿಸಿದಾಗ ಅದರಲ್ಲಿ ಯುಎಸ್‌ಬಿ ಮತ್ತು ಮೊಬೈಲ್ ಚಾರ್ಜರ್ ಪಿನ್ ಇರುವ ವೈಫೈ ಡಾಂಗಲ್ ಮತ್ತು ಎಚ್‌ಡಿಎಂಐ ಕನೆಕ್ಟರ್ ನೀಡಿರುತ್ತಾರೆ. ಮೊದಲಿಗೆ ವೈಫೈ ಡಾಂಗಲ್‌ನಿಂದ ನೀಡಲಾಗಿರುವ ಯುಎಸ್‌ಬಿ ಕೇಬಲ್ ಅನ್ನು ಟಿವಿಯಲ್ಲಿ ಕೊಟ್ಟಿರುವ ಯುಎಸ್‌ಬಿ ಪೋರ್ಟ್‌ಗೆ ಅಥವಾ ಮೊಬೈಲ್ ಚಾರ್ಜರ್ ಅಡಾಪ್ಟರಿಗೆ ಕನೆಕ್ಟ್ ಮಾಡಿ (ವೈಫೈ ಡಾಂಗಲ್‌ಗೆ ಪವರ್ ಅವಶ್ಯಕತೆ ಇರುವ ಕಾರಣಕ್ಕೆ) ಮತ್ತು ಡಾಂಗಲ್‌ನಿಂದ ನೀಡಲಾಗಿರುವ ಮೊಬೈಲ್ ಚಾರ್ಜರ್ ಪಿನ್ನನು ಎಚ್‌ಡಿಎಂಐ ಕನೆಕ್ಟರಿನ ಹಿಂಭಾಗಕ್ಕೆ ಕನೆಕ್ಟ್ ಮಾಡಿ. ನಂತರ ಟಿವಿಯ ಎಚ್‌ಡಿಎಂಐ ಇನ್‌ಪುಟ್‌ಗೆ ಕನೆಕ್ಟ್ ಮಾಡಿ. ಈಗ ನಿಮ್ಮ ಟಿವಿ ಪರದೆಯಲ್ಲಿ ಎನಿಕಾಸ್ಟ್ ಸ್ವಾಗತ ಪರದೆ ಕಾಣಿಸುತ್ತದೆ ಮತ್ತು ಮೊಬೈಲ್‌ಗೆ ಕನೆಕ್ಟ್ ಮಾಡಲು ಪಾಸ್‌ವರ್ಡ್ ಕೂಡ ಪರದೆಯ ಮೇಲೆ ನೀಡಲಾಗಿರುತ್ತದೆ.

ನಂತರ ನಿಮ್ಮ ಮೊಬೈಲಿನಲ್ಲಿ ಸೆಟ್ಟಿಂಗೆ ಹೋಗಿ ವೈರ್‌ಲೆಸ್ ಮತ್ತು ನೆಟ್‌ವರ್ಕಿಂಗ್ ಆಯ್ಕೆಗಳ ಗುಂಪಿನಲ್ಲಿ ಲಭ್ಯವಿರುವ ವೈರ್‌ಲೆಸ್ ಡಿಸ್‌ಪ್ಲೇ ಆಯ್ಕೆ ಮಾಡಿಕೊಂಡಾಗ ಅದರಲ್ಲಿ ಎನಿಕಾಸ್ಟ್ ಡಿವೈಸ್ ಹೆಸರು ಲಭ್ಯವಿದ್ದು ಅದನ್ನು ಆಯ್ಕೆ ಮಾಡಿದಾಗ ಕನೆಕ್ಟ್ ಆಗಲು ಪಾಸ್ವರ್ಡ್ ಕೇಳುತ್ತದೆ. ಈ ಹಿಂದೆ ತಿಳಿಸಿದ್ದಂತೆ ಟಿವಿ ಪರದೆಯಲ್ಲಿ ನೀಡಲಾಗಿರುವ ಪಾಸ್‌ವರ್ಡ್ ಬಳಸಿ ಕನೆಕ್ಟ್ ಮಾಡಿ. ಈಗ ಆಂಡ್ರಾಯ್ಡ್ ಟಿವಿ ಮಾದರಿಯಲ್ಲೆ ನಿಮ್ಮ ಟಿವಿಯಲ್ಲೂ ಯುಟ್ಯೂಬ್ ಮತ್ತು ಇತರೆ ಅಪ್ಲಿಕೇಶನ್‌ಗಳನ್ನು ಬಳಸಿ.

Tags: 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !