ಶುಕ್ರವಾರ, ಮಾರ್ಚ್ 31, 2023
33 °C
ನೂತನ ಅಪ್‌ಡೇಟ್‌ನಲ್ಲಿ ಹೆಚ್ಚಿನ ಭದ್ರತೆ ಮತ್ತು ಸುರಕ್ಷತಾ ವೈಶಿಷ್ಟ್ಯ

Apple Update: ಐಫೋನ್‌ಗೆ ಹೊಸ 16.3 ಐಓಎಸ್ ಅ‍ಪ್‌ಡೇಟ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆ್ಯಪಲ್, ಐಫೋನ್ ಬಳಕೆದಾರರಿಗೆ ಐಓಎಸ್ ಹೊಸ ಅಪ್‌ಡೇಟ್ ಬಿಡುಗಡೆ ಮಾಡಿದೆ. ನೂತನ ಐಓಎಸ್ 16.3ರಲ್ಲಿ ಹೆಚ್ಚಿನ ಭದ್ರತಾ ಮತ್ತು ಸುರಕ್ಷತಾ ವೈಶಿಷ್ಟ್ಯಗಳು ಇವೆ ಎಂದು ಆ್ಯಪಲ್ ಹೇಳಿದೆ.

ವಿಶೇಷವಾಗಿ, ಐಕ್ಲೌಡ್ ಬಳಕೆದಾರರಿಗೆ ಹೆಚ್ಚಿನ ಭದ್ರತೆ ಮತ್ತು ಸುರಕ್ಷತಾ ಫೀಚರ್‌ಗಳು, ಐಕ್ಲೌಡ್ ಸ್ಟೋರೇಜ್‌ಗೆ ಗರಿಷ್ಠ ಮಟ್ಟದ ಎಂಡ್‌ ಟು ಎಂಡ್ ಎನ್‌ಕ್ರಿಪ್ಷನ್ ಸೆಕ್ಯುರಿಟಿ ನೀಡಲಾಗುತ್ತಿದೆ. ಅಲ್ಲಿ ಸ್ಟೋರ್ ಮಾಡಲಾದ ಯಾವುದೇ ಮಾಹಿತಿಯನ್ನು ಸರ್ಕಾರವಾಗಲೀ ಅಥವಾ ಆ್ಯಪಲ್ ಆಗಲಿ ನೋಡಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ.

ಜತೆಗೆ, ಎನ್‌ಎಫ್‌ಸಿಯಂತಹ ಸೆಕ್ಯುರಿಟಿ ಕೀ ಬಳಕೆಗೂ ಆ್ಯಪಲ್ ನೂತನ ಅಪ್‌ಡೇಟ್ ಮೂಲಕ ಅನುವು ಮಾಡಿಕೊಟ್ಟಿದೆ. ಫ್ರೀಫಾರ್ಮ್‌ ಆ್ಯಪ್‌ನಲ್ಲಿರುವ ಸಮಸ್ಯೆ ನಿವಾರಣೆ, ಎಮರ್ಜೆನ್ಸಿ ಎಸ್‌ಒಎಸ್ ಫೀಚರ್, ಹೊಸ ಯುನಿಟಿ ವಾಲ್‌ಪೇಪರ್ ಇದರ ವಿಶೇಷತೆಯಾಗಿದೆ.

ಅರ್ಹ ಐಫೋನ್ ಬಳಕೆದಾರರು, ಸೆಟ್ಟಿಂಗ್ಸ್ ತೆರೆದು, ಅದರಲ್ಲಿ ಜನರಲ್ ಆಯ್ಕೆ ಮಾಡಬೇಕು. ನಂತರ, ಸಾಫ್ಟ್‌ವೇರ್ ಅಪ್‌ಡೇಟ್ ಎಂದಿರುವುದನ್ನು ಕ್ಲಿಕ್ ಮಾಡಿ, ಹೊಸ ಐಓಎಸ್ 16.3 ಅಪ್‌ಡೇಟ್ ಮಾಡಿಕೊಳ್ಳಬೇಕು ಎಂದು ಆ್ಯಪಲ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು