ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 19 ಲಸಿಕೆ ಕೇಂದ್ರದ ಬಗ್ಗೆ ಆ್ಯಪಲ್ ಮ್ಯಾಪ್‌ನಲ್ಲಿ ಮಾಹಿತಿ

Last Updated 17 ಮಾರ್ಚ್ 2021, 16:03 IST
ಅಕ್ಷರ ಗಾತ್ರ

ಕೋವಿಡ್ 19 ಸೋಂಕು ಹಾವಳಿ ತಡೆಯಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದಕ್ಕೆ ಪೂರಕವಾಗಿ ತಂತ್ರಜ್ಞಾನ ಕಂಪನಿಗಳು ಕೂಡ ಕೈಜೋಡಿಸಿವೆ.

ಟೆಕ್‌ಲೋಕದ ದಿಗ್ಗಜ ಸಂಸ್ಥೆಗಳಾದ ಆ್ಯಪಲ್ ಮತ್ತು ಗೂಗಲ್ ಕೂಡ ಜನರಿಗೆ ಕೋವಿಡ್ 19 ವೈರಸ್ ಬಗ್ಗೆ ಮಾಹಿತಿ ಮತ್ತು ಸೋಂಕು ಹರಡಿರುವ ಪ್ರದೇಶಗಳ ಬಗ್ಗೆ ವಿವರವನ್ನು ಕೂಡ ಸ್ಮಾರ್ಟ್‌ಫೋನ್ ಮೂಲಕ ಒದಗಿಸಿವೆ.

ಜತೆಗೆ ಜನರಿಗೆ ಸಮೀಪದ ಅಧಿಕೃತ ಕೋವಿಡ್ ಟೆಸ್ಟಿಂಗ್ ಕೇಂದ್ರದ ಮಾಹಿತಿಯನ್ನು ಕೂಡ ಒದಗಿಸುತ್ತಿವೆ.

ಈಗ ಆ್ಯಪಲ್, ಐಫೋನ್ ಬಳಕೆದಾರರಿಗೆ ಕೋವಿಡ್ 19 ಲಸಿಕೆ ಕೇಂದ್ರಗಳ ಕುರಿತ ಮಾಹಿತಿಯನ್ನು ನೀಡುತ್ತಿದೆ. ಆ್ಯಪಲ್ ಮ್ಯಾಪ್‌ನಲ್ಲಿ ಈ ಅಂಶ ಸೇರ್ಪಡೆ ಮಾಡಲಾಗಿದೆ, ಅದರ ಮೂಲಕ ನಿಮ್ಮ ಸಮೀಪದ ಅಧಿಕೃತ ಕೋವಿಡ್ ಲಸಿಕೆ ಕೇಂದ್ರದ ಕುರಿತ ಮಾಹಿತಿಯನ್ನು ಪಡೆಯಬಹುದು. ಈ ಯೋಜನೆ ಆರಂಭಿಕ ಹಂತದಲ್ಲಿದ್ದು, ಪ್ರಸ್ತುತ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ.

ಬೋಸ್ಟನ್ ಚಿಲ್ಡ್ರನ್ಸ್ ಹಾಸ್ಪಿಟಲ್ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್‌ಫೈಂಡರ್ ಸಹಯೋಗದಲ್ಲಿ ಆ್ಯಪಲ್ ಕೋವಿಡ್ ಲಸಿಕೆ ಕೇಂದ್ರಗಳ ಕುರಿತು ಮಾಹಿತಿಯನ್ನು ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT