ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಮೈಕ್ರೊಸಾಫ್ಟ್‌ಗಿಲ್ಲ ಟಿಕ್‌ಟಾಕ್ ಮಾರಾಟ; ಒರಾಕಲ್ ಜೊತೆ ಪಾಲುದಾರಿಕೆ

Last Updated 14 ಸೆಪ್ಟೆಂಬರ್ 2020, 9:21 IST
ಅಕ್ಷರ ಗಾತ್ರ

ರಾಯಿಟರ್ಸ್: ಒರಾಕಲ್ ಕಾರ್ಪೊರೇಷನ್‌ ಜೊತೆಗೆ ಪಾಲುದಾರಿಕೆ ಹಂಚಿಕೊಳ್ಳುವ ಮೂಲಕ ಅಮೆರಿಕದಲ್ಲಿ ಟಿಕ್‌ಟಾಕ್ ಉದ್ಯಮವನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಬೈಟ್‌ಡ್ಯಾನ್ಸ್‌ ಭಾನುವಾರ ರದ್ದುಪಡಿಸಿದೆ.

ಸೆಪ್ಟೆಂಬರ್‌ 15ರೊಳಗೆ ಬೀಜಿಂಗ್‌ ಮೂಲದ ಟಿಕ್‌ಟಾಕ್‌ ಅಮೆರಿಕದಲ್ಲಿನ ಉದ್ಯಮವನ್ನು ಮಾರಾಟ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಆಗಸ್ಟ್‌ನಲ್ಲಿ ಎಚ್ಚರಿಕೆ ನೀಡಿದ್ದರು. ಇಲ್ಲವಾದಲ್ಲಿ ಅಮೆರಿಕದಲ್ಲಿ ವಿಡಿಯೊ ಮೇಕಿಂಗ್‌ ಆ್ಯಪ್‌ ಟಿಕ್‌ಟಾಕ್‌ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರು.

ಒರಾಕಲ್‌ ಅಥವಾ ಮೈಕ್ರೊಸಾಫ್ಟ್‌ಗೆ ಅಮೆರಿಕದಲ್ಲಿ ಟಿಕ್‌ಟಾಕ್‌ ಉದ್ಯಮ ಮಾರಾಟ ಮಾಡಲು ಬೈಟ್‌ಡ್ಯಾನ್ಸ್‌ ಮಾತುಕತೆ ನಡೆಸಿತ್ತು. ಹೆಚ್ಚಾಗಿ ಹದಿಹರೆಯದವರ ಡ್ಯಾನ್ಸ್‌ ಸೇರಿದಂತೆ ಇತರೆ ವಿಡಿಯೊಗಳು ಟಿಕ್‌ಟಾಕ್‌ ಮೂಲಕ ಬಹುಬೇಗ ವೈರಲ್‌ ಆಗುತ್ತಿದ್ದು, ಬಳಕೆದಾರರ ಮಾಹಿತಿಗಳು ಚೀನಾದ ಕಮ್ಯುನಿಸ್ಟ್ ಸರ್ಕಾರದೊಂದಿಗೆ ಹಂಚಿಕೆಯಾಗಬಹುದೆಂದು ಅಮೆರಿಕದ ಅಧಿಕಾರಿಗಳು ಕಳಕಳಿ ವ್ಯಕ್ತಪಡಿಸಿದ್ದರು.

ಪ್ರಸ್ತುತ ಒಪ್ಪಂದದ ಪ್ರಕಾರ, ಒರಾಕಲ್‌ ಕಾರ್ಪೊರೇಷನ್‌ ಬೈಟ್‌ಡ್ಯಾನ್ಸ್‌ ಟೆಕ್ನಾಲಜಿಯ ಪಾಲುದಾರಿಕೆ ಹೊಂದಲಿದೆ. ಅಮೆರಿಕದಲ್ಲಿ ಟಿಕ್‌ಟಾಕ್‌ನ ನಿರ್ವಹಣೆ, ಬಳಕೆದಾರರ ಮಾಹಿತಿಯನ್ನು ಒರಾಕಲ್‌ ನಿರ್ವಹಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ. ಅಮೆರಿಕದಲ್ಲಿರುವ ಟಿಕ್‌ಟಾಕ್‌ನ ಆಸ್ತಿಗಳಲ್ಲಿಯೂ ಪಾಲುದಾರಿಕೆ ಪಡೆಯಲು ಒರಾಕಲ್‌ ಮಾತುಕತೆ ನಡೆಸಿದೆ.

ಅಮೆರಿಕದ ತಂತ್ರಜ್ಞಾನ ಕಂಪನಿಯು ದೇಶದಲ್ಲಿ ಟಿಕ್‌ಟಾಕ್‌ನ ಪಾಲುದಾರಿಕೆ ಪಡೆಯುವ ಬಗ್ಗೆ ಡೊನಾಲ್ಡ್‌ ಟ್ರಂಪ್‌ ಅವರಿಂದ ಅನುಮೋದನೆ ಸಿಗಲಿದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಅಮೆರಿಕದಲ್ಲಿ ವಿದೇಶಿ ಹೂಡಿಕೆಗಳನ್ನು ನಿರ್ವಹಿಸುವ ಸಮಿತಿ (ಸಿಎಫ್‌ಐಯುಎಸ್‌) ಒಪ್ಪಂದಿಂದ ರಾಷ್ಟ್ರೀಯ ಭದ್ರತೆಗೆ ಎದುರಾಗಲಿರುವ ತೊಡಕುಗಳ ಪರಿಶೀಲನೆ ನಡೆಸಲಿದೆ.

ಒರಾಕಲ್‌ ಮುಖ್ಯಸ್ಥ ಲ್ಯಾರಿ ಎಲಿಸನ್‌ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಕೆಲವೇ ತಂತ್ರಜ್ಞಾನ ಕಂಪನಿಗಳ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ಅಮೆರಿಕದ ಟಿಕ್‌ಟಾಕ್ ಉದ್ಯಮವನ್ನು ಮಾರಾಟ ಮಾಡುತ್ತಿಲ್ಲ ಎಂದು ಬೈಟ್‌ಡ್ಯಾನ್ಸ್‌ ತಿಳಿಸಿರುವುದಾಗಿ ಮೈಕ್ರೊಸಾಫ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT