ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Google Chrome: ಬ್ರೌಸರ್ ಅಪ್‌ಡೇಟ್ ಮಾಡಲು ಸರ್ಟ್‌–ಇನ್ ಸೂಚನೆ

ಗೂಗಲ್ ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡುವಂತೆ ಸೂಚನೆ
Last Updated 3 ನವೆಂಬರ್ 2022, 6:59 IST
ಅಕ್ಷರ ಗಾತ್ರ

ಬೆಂಗಳೂರು: ಬಹುತೇಕ ಜನರು ಬಳಸುವ ಗೂಗಲ್ ಕ್ರೋಮ್ ವೆಬ್ ಬ್ರೌಸರ್‌ನಲ್ಲಿ ಕೆಲವೊಂದು ಭದ್ರತಾ ಲೋಪ ಕಂಡುಬಂದಿದ್ದು, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳಿ ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಸ್ಪಂದನಾ ತಂಡ (ಸರ್ಟ್‌–ಇನ್) ಎಚ್ಚರಿಸಿದೆ.

ಕ್ರೋಮ್ ಬ್ರೌಸರ್‌ನಲ್ಲಿರುವ ಲೋಪದಿಂದಾಗಿ ಸುಲಭದಲ್ಲಿ ಸೈಬರ್‌ ದಾಳಿಗೆ ಒಳಗಾಗುವ ಸಾಧ್ಯತೆಯಿದೆ. ಹೀಗಾಗಿ, ಗೂಗಲ್ ಬಿಡುಗಡೆ ಮಾಡಿರುವ ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಸರ್ಟ್‌–ಇನ್ ಸೂಚಿಸಿದೆ.

ಕ್ರೋಮ್ ಬ್ರೌಸರ್‌ನಲ್ಲಿ ಲೋಪ ಕಂಡುಬಂದಿರುವುದನ್ನು ಗೂಗಲ್ ಪರಿಶೀಲಿಸಿದ್ದು, ಹೊಸ ಅಪ್‌ಡೇಟ್ ಬಿಡುಗಡೆ ಮಾಡಿದೆ.

ಜತೆಗೆ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಬಳಕೆದಾರರು ಗೂಗಲ್ ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚಿಸಿದೆ.

ಮ್ಯಾಕ್ ಸಿಸ್ಟಂಗಳಲ್ಲಿ ಗೂಗಲ್ ಕ್ರೋಮ್ v107.0.5304.62, ಲಿನಕ್ಸ್‌ನಲ್ಲಿ v107.0.5304.68 ಮತ್ತು ವಿಂಡೋಸ್ ಬಳಕೆದಾರರಿಗೆ v107.0.5304.62/63 ಭದ್ರತಾ ಅಪ್‌ಡೇಟ್ ಬಿಡುಗಡೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT