ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಆಹಾರಗಳ ಜಾಗತಿಕ ವೇದಿಕೆ ’ಕುಕ್‌ಪ್ಯಾಡ್‘

Last Updated 29 ಜೂನ್ 2020, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಅಪರೂಪವೆನಿಸುವ, ಅಳಿವಿನಂಚಿನಲ್ಲಿರುವ ಸ್ಥಳೀಯ ಖಾದ್ಯಗಳನ್ನು ಜನಪ್ರಿಯಗೊಳಿಸುತ್ತಾ, ಅವುಗಳಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ನೀಡುತ್ತಿದೆ ಜಪಾನ್‌ ಮೂಲದ ‘ಕುಕ್‌ಪ್ಯಾಡ್‌‘ ಆ್ಯಪ್.

ಈ ಆ್ಯಪ್‌ನಲ್ಲಿ ನೀವು ಬೇರೆ ಬೇರೆ ದೇಶಗಳ ಅಡುಗೆಯ ರೆಸಿಪಿ ನೋಡಬಹುದು. ನಮಗೆ ಗೊತ್ತಿರುವ ಅಡುಗೆ ತಯಾರಿಸಿ, ಅದನ್ನು ವಿಡಿಯೊ ಮಾಡಿ ಅಥವಾ ಫೋಟೊ ತೆಗೆದು, ಖಾದ್ಯದ ರೆಸಿಪಿಯ ವಿವರದೊಂದಿಗೆ ಅಪ್‌ಲೋಡ್‌ ಮಾಡಬಹುದು.

2009ರಲ್ಲಿ ಈ ‘ಅಡುಗೆ ಅಪ್ಲಿಕೇಷನ್‌‘ ಆರಂಭವಾಯಿತು. ಈಗ ವಿಶ್ವದಾದ್ಯಂತ ಈ ಆ್ಯಪ್‌ ಬಳಸುವವರ ಸಂಖ್ಯೆ 40 ದಶಲಕ್ಷ ಮುಟ್ಟಿದೆ. ಭಾರತ ಸೇರಿದಂತೆ, ಇಂಗ್ಲೆಂಡ್, ಇಂಡೊನೇಷ್ಯಾ, ಬ್ರೆಜಿಲ್, ತೈವಾನ್, ಹಂಗೇರಿಯಾ, ರಷ್ಯಾ, ಸ್ಪೇನ್, ಅಮೆರಿಕ, ಗ್ರೀಸ್‌ನಲ್ಲಿ ಈ ಆ್ಯಪ್‌ ಬಳಕೆದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈವರೆಗೆ ವಿಶ್ವದಾದ್ಯಂತ ಅವಸಾನದ ಅಂಚಿನಲ್ಲಿದ್ದಐದು ದಶಲಕ್ಷ ಪಾರಂಪರಿಕ ಖಾದ್ಯಗಳ ರೆಸಿಪಿಗಳು ಈ ಆ್ಯಪ್‌ನಲ್ಲಿ ದಾಖಲಾಗಿವೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮಾದರಿಯಲ್ಲೇ ಈ ಕುಕ್‌ ಪ್ಯಾಡ್ ಆ್ಯಪ್‌ ಬಳಸಬಹುದು. ಈ ಆ್ಯಪ್ ಬಳಸುವವರು ಮೊದಲು ಖಾತೆ ತೆರೆಯಬೇಕು. ಆನಂತರ, ನೀವು ಮಾಡುವ ಅಡುಗೆಗಳನ್ನು ಪೋಸ್ಟ್ ಹಾಕಬಹುದು. ಹೆಚ್ಚು ಹೆಚ್ಚು ಖಾದ್ಯಗಳ ಪೋಸ್ಟ್‌ ಹಾಕಿದಂತೆ, ಆ್ಯಪ್‌ನಲ್ಲಿ ನಿಮ್ಮನ್ನು ಹಿಂಬಾಲಿಸುವವರ ಸಂಖ್ಯೆಯೂ ಹೆಚ್ಚಾಗುತ್ತದೆ.

ಆನ್‌ಲೈನ್ ಸ್ಪರ್ಧೆಗಳು

ಈ ಆ್ಯಪ್‌ನಲ್ಲಿ ಪ್ರತಿವಾರ ಆನ್‌ಲೈನ್ ಅಡುಗೆಸ್ಪರ್ಧೆಗಳು ಇರುತ್ತವೆ. ಅಡುಗೆ ಸ್ಪರ್ಧೆಯ ವಿಷಯವನ್ನು ಅವರೇ ಕೊಡುತ್ತಾರೆ. ಅಡುಗೆ ಮಾಡುವ ವಿಧಾನ ಹಾಗೂ ಅಡುಗೆಗೆ ಸ್ಥಳೀಯವಾಗಿ ಯಾವ ರೀತಿ ಪ್ರಾಮುಖ್ಯವಿದೆ ಎಂಬ ಮಾನದಂಡದ ಮೇಲೆ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಇತ್ತೀಚೆಗೆ ಸ್ಥಳೀಯ’ಸ್ಟ್ರೀಟ್‌ ಫುಡ್‌‘ ತಯಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಮೈಸೂರು ಶೈಲಿ ಮಸಾಲಾಪುರಿ ತಯಾರಿಸಿದ್ದ ಹರ್ಷಿತಾ ಗುರುಕುಮಾರ್ಬಹುಮಾನ ಪಡೆದಿದ್ದರು. ಕೆ.ಆರ್.‌ ನಗರ ಮೂಲದ ಇವರು ಎರಡು ವರ್ಷಗಳಿಂದ ಈ ಆ್ಯಪ್‌ ಬಳಸುತ್ತಿದ್ದಾರೆ. ಈವರೆಗೆ 200ಕ್ಕೂ ಹೆಚ್ಚು ರೆಸಿಪಿಗಳನ್ನು ಈ ಆ್ಯಪ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

’ನಿತ್ಯ ಅಡುಗೆ, ಮನೆ, ಓದು.. ಹೀಗೆ ಏಕತಾನತೆಯ ಬದಕನ್ನು ಕಳೆಯುತ್ತಿರುವಾಗ ಈ ’ಕುಕ್‌ಪ್ಯಾಡ್‌‘ ನಮ್ಮಲ್ಲಿರುವ ಕ್ರೀಯಾಶೀಲತೆಯನ್ನು ಚುರುಕುಗೊಳಿಸುತ್ತಿದೆ. ನಿತ್ಯ ಮಾಡುವ ಅಡುಗೆಯನ್ನೇ ವಿಡಿಯೊ ಮಾಡಿ ಚೆಂದವಾಗಿ ಅಲಂಕರಿಸಿ ಫೋಟೊ ತೆಗೆದು ಈ ಆ್ಯಪ್‌ನಲ್ಲಿ ಹಾಕುತ್ತೇನೆ. ಹೊರದೇಶದವರಿಗೆ ದಕ್ಷಿಣ ಭಾರತದಅಡುಗೆ ರೆಸಿಪಿ ಕಲಿಸುತ್ತಿದ್ದೇನೆ‘ ಎನ್ನುತ್ತಾರೆ ಹರ್ಷಿತಾ.

ಉದ್ಯೋಗ ಅವಕಾಶ

ಈ ಆ್ಯಪ್ ಅಡುಗೆಗಳನ್ನು ಪ್ರಚಾರ ಮಾಡುವ ಜತೆಗೆ, ಆಹಾರ ಪ್ರಿಯರಿಗೆ ಉದ್ಯೋಗ ಅವಕಾಶವನ್ನು ನೀಡುತ್ತಿದೆ. ಪ್ರಾಂತ್ಯವಾರು ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಅವರನ್ನು ಫುಡ್‌ ಟೇಸ್ಟರ್‌ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕಾಗಿ ನೇಮಿಸಿಕೊಳ್ಳುತ್ತಿದೆ.

ಆನ್‌ಲೈನ್ ಮೂಲಕವೇ ಖಾದ್ಯಗಳ ಫೋಟೊ ನೋಡಿ ಅಭಿಪ್ರಾಯ ತಿಳಿಸುವ, ಆಹಾರದ ಮಾಹಿತಿ, ಹಿನ್ನೆಲೆ ಮತ್ತು ಪ್ರಾಮುಖ್ಯದ ಬಗ್ಗೆ ಮಾಹಿತಿ ಬರೆದುಕೊಡುವವರನ್ನೂ ಈ ಆ್ಯಪ್‌ ಪ್ರೋತ್ಸಾಹಿಸುತ್ತಿದೆ. ಅಷ್ಟೇ ಅಲ್ಲ ಖಾದ್ಯಗಳ ಕುರಿತು ವಿಮರ್ಶೆ ಬರೆಯುವವರಿಗೂ ಇಲ್ಲಿ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT