ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್, ಕೊರೊನಾ: ಸೈಬರ್ ವಂಚಕರ ಜಾಲಕ್ಕೆ ಬೀಳದಿರಿ

ಇಮೇಲ್, ಲಿಂಕ್ ಕ್ಲಿಕ್ ಮಾಡುವಾಗ ಎಚ್ಚರಿಕೆಯಿರಲಿ
Last Updated 6 ಏಪ್ರಿಲ್ 2020, 6:48 IST
ಅಕ್ಷರ ಗಾತ್ರ

ಚೀನಾದಿಂದ ಉದ್ಭವವಾಗಿ ವಿಶ್ವದಾದ್ಯಂತ 'ಕೊರೊನಾ ವೈರಸ್' ಮೂಲಕ ಹರಡುವ ಕೋವಿಡ್-19 ಕಾಯಿಲೆ ಕುರಿತ ಭಯಾತಂಕಗಳನ್ನು ಸೈಬರ್ ಕ್ರಿಮಿನಲ್‌ಗಳು ಕೂಡ ಭರ್ಜರಿಯಾಗಿಯೇ ಬಳಸುತ್ತಿದ್ದಾರೆ. ಈ ರೋಗ ಮತ್ತು ವೈರಸ್ ಹೆಸರಿನಲ್ಲಿ ಸಾಕಷ್ಟು ವೆಬ್ ಸೈಟ್‌ಗಳನ್ನು ಸೃಷ್ಟಿಸಿ, ಖಾಸಗಿ ಮಾಹಿತಿ ಕದಿಯುವ, ಈ ಮೂಲಕ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಸಾರ್ವಜನಿಕರನ್ನು ದೋಚುವ ಕೆಲಸ ಮಾಡುತ್ತಿದ್ದಾರೆ.

ಇಷ್ಟಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ ಪಿಎಂ ಕೇರ್ಸ್ ಎಂಬ ವಿಪತ್ತು ಪರಿಹಾರ ನಿಧಿಯನ್ನೇ ಹೋಲುವ ಬ್ಯಾಂಕ್ ಖಾತೆಗಳನ್ನೂ ತೆರೆದು, ಜನರು ಉದಾರವಾಗಿ ನೀಡಿದ ದೇಣಿಗೆಗಳ ದಾರಿ ತಪ್ಪಿಸಿ, ತಮ್ಮ ಖಾತೆಗಳಿಗೆ ಬರುವಂತೆ ಮಾಡುತ್ತಿದ್ದಾರೆ. ಈ ಕುರಿತು ಸರ್ಕಾರ ಈಗಾಗಲೇ ಎಚ್ಚರಿಕೆಯನ್ನೂ ನೀಡಿದೆ.

ರಾಷ್ಟ್ರೀಯ ಸೈಬರ್ ಸುರಕ್ಷತಾ ಏಜೆನ್ಸಿಯಾಗಿರುವ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (CERT.IN) ಈ ರೀತಿಯ ಫೀಶಿಂಗ್ (ಜನರನ್ನು ಕ್ಲಿಕ್ ಮಾಡುವಂತೆ ಪ್ರೇರೇಪಿಸಿ ಖಾಸಗಿ ಮಾಹಿತಿ ಕದಿಯುವ) ವಂಚನೆಯಿರುವ ಹಲವಾರು ಜಾಲ ತಾಣಗಳನ್ನು ಪಟ್ಟಿ ಮಾಡಿ, ಅವುಗಳಿಂದ ಬರಬಹುದಾದ ಇಮೇಲ್ ಕುರಿತು ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ.

ಈ ಜಾಲತಾಣಗಳ ಹೆಸರಿನಲ್ಲಿ ಬರುವ ಇಮೇಲ್ ಅಥವಾ ವಾಟ್ಸ್ಆ್ಯಪ್ ಮೂಲಕ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಿದಲ್ಲಿ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ಗೆ ಯಾವುದೇ ಕುತಂತ್ರಾಂಶಗಳು (ಮಾಲ್‌ವೇರ್) ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಆಗಬಲ್ಲವು, ಇಲ್ಲವೇ ಈ ಲಿಂಕ್‌ಗಳೇ ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯಬಲ್ಲವು. ಇದಕ್ಕಾಗಿ ಸೂಕ್ತವಾದ ಆ್ಯಂಟಿ-ಮಾಲ್‌ವೇರ್ ತಂತ್ರಾಂಶಗಳನ್ನು ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳಲ್ಲಿ ಅಳವಡಿಸಿಕೊಳ್ಳುವಂತೆ ಸೈಬರ್ ಭದ್ರತಾ ಏಜೆನ್ಸಿ ಸಲಹೆ ನೀಡಿದೆ.

ಡೊಮೇನ್ ಹೆಸರುಗಳಲ್ಲಿ 'ಇಂಡಿಯಾ' ಅಂತ ಇರುವ ಕೆಲವು ಸಂದೇಹಾತ್ಮಕ ಜಾಲತಾಣಗಳು ಈ ಕೆಳಗಿನಂತಿದ್ದು, ಈ ಡೊಮೇನ್ ಹೆಸರುಗಳಿಂದ ಬರುವ ಇಮೇಲ್‌ಗಳಲ್ಲಿರುವ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಲು ಸೂಚಿಸಲಾಗಿತೆ.

  • covid2019india[.]com
  • covid-india[.]com
  • covid19indian[.]org
  • covidindia[.]website
  • indiafightcovid19[.]com
  • covid19india[.]life
  • indiacovidfund[.]com
  • indiacoronavirusnews[.]com
  • covidseeindia[.]com
  • helpcovidindia[.]com
  • coronavirusdiseaseindia[.]xyz
  • covidindiainsights[.]com
  • covid9india[.]org
  • corona-virusindia[.]com
  • livecoronanewsindia[.]com
  • covid29india[.]org
  • covid2019india[.]org
  • covid1india[.]org
  • indiacoronavirus[.]online
  • indiafightscorona[.]life
  • indiaincovid19[.]com
  • indiacovid[.]online
  • coronavirusindia[.]xyz
  • indiacovid19[.]org
  • cocid19india[.]org
  • indiancovid19[.]com
  • coronaindianews[.]com
  • covid19-india[.]online
  • covid19indialive[.]org
  • covid19inindia[.]life
  • covidindia[.]me
  • indiavscovid19[.]com
  • covid19indiana[.]com
  • indiacurecovid19[.]com
  • covid-19india[.]org
  • indiacovid19[.]live
  • covid19-india[.]live
  • coronacleanindiana[.]com
  • indiafightscovid19[.]org
  • coronavirusindiana[.]com
  • indiacovid[.]site
  • nocoronaindia[.]com
  • indiafightscovid[.]com
  • covid19india[.]tech
  • covid-19-india[.]com
  • covid-india[.]live
  • coronaindialiveupdates[.]site
  • covid19india[.]cc
  • coronaindia[.]xyz
  • covid19india[.]today
  • indiafightscovid[.]net
  • covid18india[.]org
  • coronvirusindia[.]com
  • wwwcovid19india[.]org
  • covidindiaupdate[.]com
  • covidindiainitiative[.]com
  • indiafightsbackcorona[.]com
  • covid19india[.]shop
  • coronavirus-india-travel[.]com
  • coronavirusindia[.]shop
  • indiafightscovid19[.]live
  • covidindiainitiave[.]com
  • indiafightscorona[.]net
  • coronavirusinindia[.]today
  • indiagainstcorona[.]com
  • covidindia[.]today
  • fightagainstcorona2020india[.]club
  • coronainindia[.]net
  • covid19india[.]co
  • covid19-india[.]com
  • indiafightscorona[.]org
  • indianacovidtesting[.]com
  • coronatrackerindia[.]com
  • covid-19-india[.]ml
  • indianacorona[.]com
  • covidindia[.]live
  • caronavirusindia[.]com
  • covid19inindia[.]com
  • covidindia[.]online
  • coronaindiahelpline[.]com
  • corona-india[.]com
  • coronaindia[.]online
  • indianacoronavirusdebtrelief[.]com
  • indiancoronavirus[.]com
  • covid19india[.]online
  • indianacoronadebtrelief[.]com
  • india-map-coronavirus[.]ga
  • coronafreeindia[.]com
  • covid19india[.]net
  • covid19india[.]live
  • indiacovid19[.]com
  • indiacoronavirusupdates[.]com
  • indiafightscorona[.]com
  • coronavirus-india-map[.]com
  • indiaagainstcorona[.]com
  • coronavirusindiaclub[.]com
  • coronavirus-india[.]net
  • covid19indianapolis[.]com
  • coronavirus-india[.]co
  • covidindiasupport[.]com
  • covid-19india[.]com
  • indianacovid19[.]com
  • coronavirusnewsindia[.]site
  • indiacovid-19[.]com
  • coronainindia[.]com
  • indianacoronavirus[.]org
  • coronavirusindia[.]live
  • indianacoronavirus[.]com
  • indiacorona[.]com
  • coronavirusindia[.]life
  • coronavirusmaskindia[.]com
  • indianapoliscoronavirus[.]com
  • coronavirusindianapolis[.]com
  • coronaindianews[.]site
  • coronavirusinindia[.]com
  • coronavirus-india[.]com
  • corona-virus-india[.]online
  • covid19india[.]com
  • coronavirusindia[.]net
  • coronavirusupdatesindia[.]com
  • indiacovid[.]com
  • indiacoronavirus[.]com
  • coronavirusindia[.]com
  • coronaindiasupport[.]org
  • covit19india[.]org
  • coronaindia[.]news
  • covidindia19[.]org
  • india-covid[.]com
  • coronanewsinindia[.]com
  • indiaagainstcorona[.]live
  • coronavirusindia[.]org
  • india-vs-corona[.]com
  • indiafightcorona[.]com
  • coronanewsindia[.]com
  • indiafightscovid[.]org
  • coronavisindia[.]com
  • indiafightscorona[.]co
  • coronaindia[.]site
  • quarantineindia[.]com
  • corona-india[.]live
  • covidindiainitiative[.]org
  • coronafreeindia[.]org
  • coronavirusindia[.]io
  • indianaanesthesiacovid[.]com
  • coronaindiatimes[.]com
  • covidindia[.]page
  • indiavscorona[.]org
  • coronaindia[.]net
  • indiancorona[.]com
  • coronaindia[.]org
  • indianofcorona[.]com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT