ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವಾದ ಫೋನ್‌ಗಳ ಐಎಂಇಐ ಬ್ಲಾಕ್: ದೆಹಲಿ ಪೊಲೀಸ್ ಹೊಸ ತಂತ್ರ

Last Updated 18 ಜುಲೈ 2021, 12:57 IST
ಅಕ್ಷರ ಗಾತ್ರ

ನವದೆಹಲಿ: ಕಳವಾದ ಇಲ್ಲವೆ ಕಳೆದುಹೋದ ಮೊಬೈಲ್ ಫೋನ್‌ಗಳ ಐಎಂಇಐ ಸಂಖ್ಯೆಯನ್ನು ರಿಪೋರ್ಟ್ ಮಾಡುವ, ಬ್ಲಾಕ್ ಹಾಗೂ ಪತ್ತೆ ಹಚ್ಚುವ ತಂತ್ರಜ್ಞಾನವನ್ನು ದೆಹಲಿ ಪೊಲೀಸರು ಬಳಕೆಗೆ ತರುತ್ತಿದ್ದಾರೆ.

‘ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್’ ಯೋಜನೆಯನ್ನು ‘ದೂರ ಸಂಪರ್ಕ ಸಚಿವಾಲಯ’ ಅಭಿವೃದ್ಧಿಪಡಿಸುತ್ತಿದ್ದು, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಬಳಕೆಗೆ ತರಲಾಗಿದೆ.

ಇದರಿಂದಾಗಿ ಫೋನ್ ಕಳೆದುಹೋದರೆ, ಕಳವಾದರೆ ಅದನ್ನು ಪತ್ತೆಹಚ್ಚಲು, ದುರುಪಯೋಗ ತಡೆಯಲು ಮತ್ತು ಮಾರಾಟ ಮಾಡುವುದನ್ನು ನಿರ್ಬಂಧಿಸಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫೋನ್ ಕಳೆದುಹೋದರೆ ಇಲ್ಲವೆ ಕಳವಾದರೆ, ಬಳಕೆದಾರರು ದೂರು ಸಲ್ಲಿಸಬೇಕಾಗುತ್ತದೆ. ದೂರನ್ನು ಪರಿಶೀಲಿಸಿ, ಬಳಿಕ ಆ ಫೋನ್ ಐಎಂಇಐ ಸಂಖ್ಯೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ನಿರ್ಬಂಧಿಸಲಾಗುತ್ತದೆ.

ಅಲ್ಲದೆ, ಕಪ್ಪು ಪಟ್ಟಿಯಲ್ಲಿರುವ ಫೋನ್‌ಗಳ ವಿವರವನ್ನು ಟೆಲಿಫೋನ್ ಸೇವಾದಾರ ಸಂಸ್ಥೆಗಳ ಜತೆಗೆ ಹಂಚಿಕೊಳ್ಳಲಾಗುತ್ತದೆ.

ಕಪ್ಪು ಪಟ್ಟಿಗೆ ಸೇರ್ಪಡೆಯಾದ ಬಳಿಕ, ಅವುಗಳಲ್ಲಿ ಇತರ ಸಿಮ್, ನೆಟ್‌ವರ್ಕ್ ಬಳಕೆ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಪೊಲೀಸರು, ಫೋನ್ ಅನ್ನು ಪತ್ತೆ ಹಚ್ಚಿ, ಮರಳಿ ಪಡೆಯಲು ಪ್ರಕ್ರಿಯೆ ಕೈಗೊಳ್ಳುತ್ತಾರೆ. ಇದರಿಂದಾಗಿ, ಫೋನ್ ಮತ್ತೊಬ್ಬರ ಕೈಗೆ ಸಿಕ್ಕಿದ್ದರೂ, ಅದನ್ನು ದುರುಪಯೋಗ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT