ಶನಿವಾರ, ಸೆಪ್ಟೆಂಬರ್ 26, 2020
27 °C

ಟಿಕ್‌ಟಾಕ್ ಖರೀದಿಗೆ ಮೈಕ್ರೋಸಾಫ್ಟ್ ಚಿಂತನೆ: ಮಾತುಕತೆಗೆ 45 ದಿನ ಕಾಲಾವಕಾಶ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Tik Tok

ವಾಷಿಂಗ್ಟನ್: ಟಿಕ್‌ಟಾಕ್‌ ಆ್ಯಪ್‌ ಅನ್ನು ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡುವ ಬಗ್ಗೆ ಮಾತುಕತೆ ಪೂರ್ಣಗೊಳಿಸಲು ಚೀನಾದ ಬೈಟ್‌ಡ್ಯಾನ್ಸ್‌ ಕಂಪನಿಗೆ ಅಮೆರಿಕ 45 ದಿನಗಳ ಕಾಲಾವಕಾಶ ನೀಡಿದೆ. ಇದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ವಿದೇಶಿ ಹೂಡಿಕೆ ಸಮಿತಿಯ ಮೇಲುಸ್ತುವಾರಿಯಲ್ಲಿ ಬೈಟ್‌ಡ್ಯಾನ್ಸ್ ಮತ್ತು ಮೈಕ್ರೋಸಾಫ್ಟ್ ನಡುವಣ ಮಾತುಕತೆ ನಡೆಯಲಿದೆ. ಈ ವಿಚಾರವಾಗಿ ಬೈಟ್‌ಡ್ಯಾನ್ಸ್, ಮೈಕ್ರೋಸಾಫ್ಟ್ ಹಾಗೂ ಶ್ವೇತಭವನ ಪ್ರತಿಕ್ರಿಯಿಸಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.

ಟಿಕ್‌ಟಾಕ್‌ನ ಅಮೆರಿಕ ಘಟಕವನ್ನು ಖರೀದಿಸುವ ಬಗ್ಗೆ ಬೈಟ್‌ಡ್ಯಾನ್ಸ್ ಜತೆ ಮಾತುಕತೆ ಪ್ರಗತಿಯಲ್ಲಿದೆ. ಈ ಕುರಿತು ಟ್ರಂಪ್  ಜತೆಗೂ ಮಾತುಕತೆ ನಡೆಸಲಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿದ್ದಾಗಿ ಭಾನುವಾರ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಟಿಕ್‌ಟಾಕ್‌ ಸೇರಿದಂತೆ ಚೀನಾದ ಹಲವು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ನಿಷೇಧಿಸಲು ಚಿಂತನೆ ನಡೆದಿ‌‌ಸಿರುವುದಾಗಿ ಅಮೆರಿಕ ಕಳೆದ ತಿಂಗಳು ಹೇಳಿತ್ತು. ಟಿಕ್‌ಟಾಕ್ ಬಳಕೆದಾರರ ಮಾಹಿತಿಯನ್ನು ನಿರ್ವಹಿಸುವ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಕಳವಳ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು