ಮಂಗಳವಾರ, ಜೂನ್ 28, 2022
26 °C

ಗೂಗಲ್‌ಗೆ ₹ 1948 ಕೋಟಿ ದಂಡ ವಿಧಿಸಿದ ಫ್ರಾನ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ಗೂಗಲ್, ಆನ್‌ಲೈನ್ ಜಾಹೀರಾತುಗಳನ್ನು ಪ್ರಕಟಿಸುವುದಕ್ಕಾಗಿ ತನ್ನ ಪ್ರಬಲ ಮಾರುಕಟ್ಟೆ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದನ್ನು ಪತ್ತೆ ಮಾಡಿರುವ ಫ್ರಾನ್ಸ್‌ನ ಸ್ಪರ್ಧಾ ನಿಯಂತ್ರಕವು ಗೂಗಲ್‌ಗೆ 220 ಮಿಲಿಯನ್ ಯೂರೊ (ಸುಮಾರು ₹ 1948 ಕೋಟಿ) ದಂಡ ವಿಧಿಸಿದೆ.

ಈ ಮೂಲಕ ಅಮೆರಿಕ ಮೂಲದ ಟೆಕ್ ದೈತ್ಯ ಸಂಸ್ಥೆ ಗೂಗಲ್ ವಿರುದ್ಧ ಯೂರೋಪ್ ಒಕ್ಕೂಟವು ಕಠಿಣ ನಿಲುವು ತಳೆದಿದೆ.

ಆನ್‌ಲೈನ್ ಜಾಹೀರಾತು ಮಾರಾಟದಲ್ಲಿ ಗೂಗಲ್ ಏಕಸ್ವಾಮ್ಯವನ್ನು ಹೊಂದಿದೆ ಎಂದು ನ್ಯೂಸ್ ಕಾರ್ಪ್, ಫ್ರೆಂಚ್ ಡೈಲಿ ಲೆ ಫಿಗರೊ ಮತ್ತು ಬೆಲ್ಜಿಯಂನ ಗ್ರೂಪ್ ರೊಸೆಲ್ ಎಂಬ ಮೂರು ಮಾಧ್ಯಮ ಗುಂಪುಗಳು ತಲುಪಿದ ಒಮ್ಮತದ ಭಾಗವಾಗಿ ಈ ದಂಡ ವಿಧಿಸಲಾಗಿದೆ.

ಗೂಗಲ್ ವಿರುದ್ಧ ಫ್ರಾನ್ಸ್ ವಿಧಿಸಿರುವ ದಂಡವು ಈ ರೀತಿಯ ಆ್ಯಂಟಿಟ್ರಸ್ಟ್ ಪ್ರಕರಣದಲ್ಲಿ ಹಿಂದಿನ ಅತಿದೊಡ್ಡ ದಂಡಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಪಾಶ್ಚಿಮಾತ್ಯ ದೇಶಗಳ ಡಿಜಿಟಲ್ ಸೇವೆಗಳ ಅತ್ಯಂತ ಸಕ್ರಿಯ ನಿಯಂತ್ರಕ ಎಂದು ಹೇಳಲಾಗುವ ಯುರೋಪಿಯನ್ ಯೂನಿಯನ್ ಆಂಟಿಟ್ರಸ್ಟ್ ಸಂಸ್ಥೆ ಮುಖ್ಯಸ್ಥೆ ಮಾರ್ಗರೇಟ್ ವೆಸ್ಟಾಗರ್ ಹೇಳಿದ್ದಾರೆ.

‘ಯುರೋಪ್‌ನಲ್ಲಿ, ಕಂಪನಿಗಳು ಯುರೋಪಿಯನ್ ಆಗಿರಲಿ ಅಥವಾ ಇಲ್ಲದಿರಲಿ ಅರ್ಹತೆಗಳ ಮೇಲೆ ಸ್ಪರ್ಧಿಸಬೇಕು’ ಎಂದು ಅವರು ಹೇಳಿದ್ಧಾರೆ.

‘ಗೂಗಲ್ ಸಂಸ್ಥೆ ಮಾಡಿರುವ ಕೃತ್ಯ ಯೂರೋಪಿಯನ್ ಯೂನಿಯನ್ ಆ್ಯಂಟಿ ಟ್ರಸ್ಟ್ ವಿರೋಧಿ ನಿಯಮಗಳಡಿಯಲ್ಲಿ ಕಾನೂನುಬಾಹಿರವಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು