ಕಳವಾದ ಫೋನ್ ಇಂಟರ್‌ನೆಟ್ ಇಲ್ಲದೆಯೇ ಹುಡುಕಿ: ಗೂಗಲ್ ಶೀಘ್ರ ಹೊಸ ಅಪ್‌ಡೇಟ್

ಬೆಂಗಳೂರು: ಕಳ್ಳತನವಾದ ಮತ್ತು ಕಳೆದುಹೋದ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಹುಡುಕಲು ಗೂಗಲ್ ಫೈಂಡ್ ಮೈ ಫೋನ್ ನೆರವಾಗುತ್ತದೆ. ಆದರೆ, ಅದು ಕೆಲಸ ಮಾಡಲು ಫೋನ್ ಆನ್ ಇರಬೇಕು ಮತ್ತು ಇಂಟರ್‌ನೆಟ್ ಸಂಪರ್ಕವೂ ಇರಬೇಕು.
ಆ್ಯಪಲ್ ಐಫೋನ್‌ನಲ್ಲಿ ಇಂಟರ್‌ನೆಟ್ ಇಲ್ಲದಿದ್ದರೂ, ಫೋನ್ ಆಫ್ ಆಗಿದ್ದರೂ, ಲೊಕೇಷನ್ ತಿಳಿಯುವ ವ್ಯವಸ್ಥೆ ಇದೆ ಎಂದು ಕಂಪನಿ ಹೇಳಿದೆ. ಅದೇ ಮಾದರಿಯ ಆಫ್‌ಲೈನ್ ವೈಶಿಷ್ಟ್ಯವನ್ನು ಗೂಗಲ್ ಪರಿಶೀಲಿಸುತ್ತಿದೆ.
ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್‌ನೆಟ್ ಸಂಪರ್ಕ ಇಲ್ಲದಿದ್ದರೂ, ಫೋನ್ ಹುಡುಕಲು ನೆರವಾಗುವ ವೈಶಿಷ್ಟ್ಯವನ್ನು ಗೂಗಲ್ ಅಭಿವೃದ್ಧಿಪಡಿಸುತ್ತಿದೆ.
ಚೀನಾದಿಂದ ಉತ್ಪಾದನಾ ಘಟಕ ಸ್ಥಳಾಂತರ: ಭಾರತ, ವಿಯೆಟ್ನಾಂನತ್ತ ಮುಖ ಮಾಡಿದ ಆ್ಯಪಲ್
ಪರೀಕ್ಷಾರ್ಥ ಬಳಕೆಯ ನಂತರ, ಅರ್ಹ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆಫ್‌ಲೈನ್ ಫೈಂಡ್ ಮೈ ಫೋನ್ ವೈಶಿಷ್ಟ್ಯ ದೊರೆಯಲಿದೆ. ಹೊಸ ಫೀಚರ್ ಅಪ್‌ಡೇಟ್ ಲಭ್ಯವಾದರೆ, ಕಳ್ಳತನವಾದ ಮತ್ತು ಕಳೆದುಹೋದ ಸ್ಮಾರ್ಟ್‌ಫೋನ್ ಹುಡುಕುವುದು ಸುಲಭವಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.