ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ಸೇವೆಗಳಲ್ಲಿ ವ್ಯತ್ಯಯ: ಮರಳಿದ ಜಿಮೇಲ್‌, ಯುಟ್ಯೂಬ್‌

Last Updated 14 ಡಿಸೆಂಬರ್ 2020, 17:11 IST
ಅಕ್ಷರ ಗಾತ್ರ

ಬೆಂಗಳೂರು: ಜಗತ್ತಿನಾದ್ಯಂತ ಗೂಗಲ್‌ನ ಬಹುತೇಕ ಸೇವೆಗಳಲ್ಲಿ ಅಡಚಣೆ ಎದುರಾಗಿತ್ತು. ಜಿಮೇಲ್‌, ಯುಟ್ಯೂಬ್‌, ಮ್ಯಾಪ್ಸ್‌ ಹಾಗೂ ಡ್ರೈವ್‌ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು.

ಸೋಮವಾರ ಸಂಜೆ 5ರಿಂದ ಗೂಗಲ್‌ನ ಸೇವೆಗಳಲ್ಲಿ ವ್ಯತ್ಯವಾಗಿ, ಬಹುತೇಕ ಬಳಕೆದಾರರಿಗೆ ಜಿಮೇಲ್‌ ಮತ್ತು ಯುಟ್ಯೂಬ್‌ ತೆರೆಯಲು ಸಾಧ್ಯವಾಗಿರಲಿಲ್ಲ. ಯುಟ್ಯೂಬ್‌ ತೆರೆಯಲು ಪ್ರಯತ್ನಿಸಿದರೆ, 'ಏನೋ ಸಮಸ್ಯೆಯಾಗಿದೆ' (Something went wrong) ಎಂಬ ಸಂದೇಶ ತೋರುತ್ತಿದೆ. ಜಿಮೇಲ್‌ ತಾತ್ಕಾಲಿಕವಾಗಿ ವ್ಯತ್ಯಯವೆಂದು (Temporary Error) ತೋರುತ್ತಿತ್ತು.

ಭಾರತ, ಜಪಾನ್‌, ಯುರೋಪ್‌ ಹಾಗೂ ಅಮೆರಿಕದ ಕೆಲವು ಭಾಗಗಳಲ್ಲಿ ಗೂಗಲ್‌ ಸೇವೆಗಳಿಗೆ ಅಡಚಣೆಯಾಗಿತ್ತು.

ಸೇವೆಗಳಲ್ಲಿ ವ್ಯತ್ಯವಾಗಿದ್ದರೂ ಗೂಗಲ್‌ ಕ್ರೋಮ್‌ನ ಇನ್‌ಕಾಗ್ನಿಟೊ ಮೋಡ್‌ನಲ್ಲಿ ( INCOGNITO) ಯುಟ್ಯೂಬ್‌ ಬಳಸಬಹುದಾಗಿದೆ ಎಂದು ಹಲವು ಬಳಕೆದಾರರು ಟ್ವೀಟ್‌ ಮಾಡಿದ್ದರು.

ಸಂಜೆ 6:15ರ ಬಳಿಕ ಜಿಮೇಲ್‌ ಮತ್ತು ಯುಟ್ಯೂಬ್ ಬಳಕೆಗೆ ತೆರೆದಿಕೊಂಡಿವೆ. ಆದರೆ, ಯುಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಣೆಗೆ ಸಾಧ್ಯವಾಗಿದ್ದು, ಅಪ್‌ಲೋಡ್‌ ಮಾಡುವುದು ತಡವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT