ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ಜಿ ಕೇಸ್ ‘ಪಬ್ಲಿಸಿಟಿ ಸ್ಟಂಟ್’ಎಂದವರಿಗೆ ವಿಡಿಯೊ ಮೂಲಕ ಜೂಹಿ ಚಾವ್ಲಾ ಉತ್ತರ

Last Updated 9 ಆಗಸ್ಟ್ 2021, 13:18 IST
ಅಕ್ಷರ ಗಾತ್ರ

ನವದೆಹಲಿ: 5ಜಿ ವೈರ್‌ಲೆಸ್ ತಂತ್ರಜ್ಞಾನದ ವಿರುದ್ಧ ತಾವು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ‘ಪಬ್ಲಿಸಿಟಿ ಸ್ಟಂಟ್’ ಎಂದು ಟೀಕಿಸಿದ್ದವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 14 ನಿಮಿಷದ ವಿಡಿಯೊ ಪೋಸ್ಟ್ ಮಾಡುವ ಮೂಲಕ ನಟಿ ಜೂಹಿ ಚಾವ್ಲಾ ತಿರುಗೇಟು ನೀಡಿದ್ದಾರೆ.

5ಜಿ ತಂತ್ರಜ್ಞಾನ ಮತ್ತು ಅದರ ಆರೋಗ್ಯದ ಪ್ರಭಾವದ ಬಗ್ಗೆ ತನ್ನ ಆಕ್ಷೇಪಣೆಗಳನ್ನು 14 ನಿಮಿಷಗಳ ವಿಡಿಯೊದಲ್ಲಿ ವಿವರಿಸಿರುವ ಜೂಹಿ ಚಾವ್ಲಾ ಅವರು, ‘ಇದು ಪ್ರಚಾರದ ತಂತ್ರವಾಗಿದೆಯೇ ಎಂದು ನಿರ್ಧಾರ ಕೈಗೊಳ್ಳಲು ನಾನು ನಿಮಗೇ ಬಿಡುತ್ತೇನೆ’ ಎಂದುಶೀರ್ಷಿಕೆ ನೀಡಿದ್ದಾರೆ.

‘ಪುರುಷರು, ಮಹಿಳೆಯರು, ವಯಸ್ಕರು, ಸಣ್ಣ ಮಕ್ಕಳು, ಪ್ರಾಣಿಗಳು ಮತ್ತು ಎಲ್ಲಾ ರೀತಿಯ ಜೀವಿಗಳಿಗೆ’ 5 ಜಿ ಸುರಕ್ಷಿತವಾಗಿದೆಯೇ ಎಂದು ಸಾರ್ವಜನಿಕರಿಗೆ ಖಾತರಿ ನೀಡಲು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ ಎಂದು ನಟಿ ಹೇಳಿದ್ದಾರೆ. 11 ವರ್ಷಗಳ ಹಿಂದೆ ಮುಂಬೈನಲ್ಲಿ ನನ್ನ ಮನೆಯ ಬಳಿ 14 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದಾಗ ಇದು ನನ್ನ ಗಮನಕ್ಕೆ ಬಂದಿತು ಎಂದು ಹೇಳಿದ್ದಾರೆ.

ನಟಿಯು ತನ್ನ ಮನೆಯ ಸುತ್ತ ವಿಕಿರಣದ ಪ್ರಮಾಣದ ಬಗ್ಗೆ ಖಾಸಗಿ ಸಂಸ್ಥೆಯಿಂದ ಪರೀಕ್ಷೆ ನಡೆಸಿದ್ದು, ಅದರಲ್ಲಿವಿಕಿರಣ ಆತಂಕಕಾರಿ ಮತ್ತು ಹಾನಿಕಾರಕ ಮಟ್ಟದಲ್ಲಿದೆ ಎಂದು ತಿಳಿದುಬಂದಿರುವುದಾಗಿ ಅವರು ಹೇಳಿದ್ದಾರೆ.

ಜೂನ್ ತಿಂಗಳಲ್ಲಿ ದೆಹಲಿ ಹೈಕೋರ್ಟ್, ಜೂಹಿ ಚಾವ್ಲಾ ಅವರ ಅರ್ಜಿಯನ್ನು ವಜಾಗೊಳಿಸಿ ₹ 20 ಲಕ್ಷ ದಂಡ ವಿಧಿಸಿತ್ತು. ಈ ಮೊಕದ್ದಮೆ ‘ಪ್ರಚಾರಕ್ಕಾಗಿ’ ದಾಖಲಿಸಿದಂತೆ ಕಾಣುತ್ತಿದೆ ಎಂದು ಕೋರ್ಟ್ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT