ಖಾಸಗಿತನವನ್ನು ಬಯಸುವವರಿಗೆ ನೆರವಾಗುವ ಹೊಸ ವೈಶಿಷ್ಟ್ಯವಿದು. ಯಾರಿಗಾದರೂ ಸಂದೇಶ ಕಳುಹಿಸಿ, ಅದು ಅವರಿಗಷ್ಟೇ ತಲುಪಬೇಕು, ಬೇರೆಯವರು ನೋಡಬಾರದು ಅಂತ ಅಂದುಕೊಂಡಿದ್ದರೆ, ಸಂದೇಶ ಕಳುಹಿಸಿದ ನಿಗದಿತ ಸಮಯದ ಬಳಿಕ ಅದು ತಾನಾಗಿ ಡಿಲೀಟ್ ಆಗುವ ಹೊಸ ವೈಶಿಷ್ಟ್ಯ ಬರುತ್ತಿದೆ. ಈಗಾಗಲೇ ನಾವು ಕಳುಹಿಸಿದ ಸಂದೇಶವನ್ನು ಒಂದು ಗಂಟೆಯೊಳಗೆ ಅಳಿಸಿಹಾಕಬಹುದು.

ಸಂದೇಶ ವಿನಿಮಯ ಆ್ಯಪ್ ಆಗಿರುವ ವಾಟ್ಸ್ಆ್ಯಪ್ ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಳ್ಳುತ್ತಿದೆ. ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕಿದ್ದರೆ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಕಿರುತಂತ್ರಾಂಶವನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಐಒಎಸ್ ಫೋನ್ಗಳಿಗೆ ಈಗಾಗಲೇ ಕೆಲವು ವೈಶಿಷ್ಟ್ಯಗಳು ದೊರೆತಿವೆ. ಶೀಘ್ರವೇ ಆಂಡ್ರಾಯ್ಡ್ ಫೋನ್ಗಳಿಗೂ ಈ ಪರಿಷ್ಕೃತ ಆ್ಯಪ್ ಲಭ್ಯವಾಗಲಿದೆ. ಪರಿಷ್ಕೃತ ಆವೃತ್ತಿಯಲ್ಲಿರುವ ಹೊಸ ಸೌಕರ್ಯಗಳು ಹೀಗಿವೆ.

ಸ್ವಯಂ-ಡಿಲೀಟ್

ಖಾಸಗಿತನವನ್ನು ಬಯಸುವವರಿಗೆ ನೆರವಾಗುವ ಹೊಸ ವೈಶಿಷ್ಟ್ಯವಿದು. ಯಾರಿಗಾದರೂ ಸಂದೇಶ ಕಳುಹಿಸಿ, ಅದು ಅವರಿಗಷ್ಟೇ ತಲುಪಬೇಕು, ಬೇರೆಯವರು ನೋಡಬಾರದು ಅಂತ ಅಂದುಕೊಂಡಿದ್ದರೆ, ಸಂದೇಶ ಕಳುಹಿಸಿದ ನಿಗದಿತ ಸಮಯದ ಬಳಿಕ ಅದು ತಾನಾಗಿ ಡಿಲೀಟ್ ಆಗುವ ಹೊಸ ವೈಶಿಷ್ಟ್ಯ ಬರುತ್ತಿದೆ. ಈಗಾಗಲೇ ನಾವು ಕಳುಹಿಸಿದ ಸಂದೇಶವನ್ನು ಒಂದು ಗಂಟೆಯೊಳಗೆ ಅಳಿಸಿಹಾಕಬಹುದು. ಆ ಸಮಯ ಮೀರಿದರೆ ಡಿಲೀಟ್ ಆಗುವುದಿಲ್ಲ. ಹೊಸ ವೈಶಿಷ್ಟ್ಯದಲ್ಲಿ ಇಂತಿಷ್ಟು ಸಮಯದ ಬಳಿಕ ಅದು ಅಳಿಸಿಹೋಗುವಂತೆ (ವೈಯಕ್ತಿಕವಾಗಿ ಮತ್ತು ಗ್ರೂಪಿನಲ್ಲಿರುವ ಎಲ್ಲರ ಫೋನ್ಗಳಿಂದಲೂ) ಹೊಂದಿಸಬಹುದು. ಸದ್ಯ ಇದು ಬೀಟಾ ಆವೃತ್ತಿಯ ಬಳಕೆದಾರರಿಗೆ ದೊರೆತಿದ್ದು, ಕೆಲವೇ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ.

ಕರೆ ಕಾಯುವಿಕೆ

ಬಳಕೆದಾರರು ಈಗಾಗಲೇ ಫೋನ್ ಕರೆಯಲ್ಲಿ ನಿರತರಾಗಿದ್ದಾಗ, ವಾಟ್ಸ್ಆ್ಯಪ್ ಕರೆ ಬಂದಲ್ಲಿ ಕರೆಯನ್ನು ಕಾಯ್ದಿರಿಸುವ ವ್ಯವಸ್ಥೆ ಇರುತ್ತದೆ. ಹಿಂದೆ, ಕರೆ ಬಂದಾಗ ಬಳಕೆದಾರರಿಗೆ ಯಾವುದೇ ಸೂಚನೆ ದೊರೆಯದೆ, ಅದು ಮಿಸ್ಡ್ ಕಾಲ್ ರೂಪದಲ್ಲಿ ತಿಳಿಯುತ್ತಿತ್ತು. ಈಗ, ಕರೆ ಸ್ವೀಕರಿಸುವವರು ಬೇರೊಂದು ಕರೆಯಲ್ಲಿ ನಿರತರಾಗಿದ್ದಾರೆ ಎಂಬುದು ಕರೆ ಮಾಡಿದವರಿಗೂ ತಿಳಿಯುತ್ತದೆ.

ಫೇಸ್ಬುಕ್ ಪ್ರಾಯೋಜಿತ

ಈ ಫೇಸ್ಬುಕ್ ಒಡೆತನದ ಆ್ಯಪ್ ತೆರೆದಾಗ ಕೆಲ ಕ್ಷಣಗಳ ಕಾಲ ಧುತ್ತನೇ ಕಾಣಿಸಿಕೊಳ್ಳುವ ಸ್ಕ್ರೀನ್ನಲ್ಲಿ ಇನ್ನು ವಾಟ್ಸ್ಆ್ಯಪ್ ಲೋಗೊ ಜತೆಗೆ, ಕೆಳಭಾಗದಲ್ಲಿ ‘ಫೇಸ್ಬುಕ್ ಪ್ರಾಯೋಜಿತ’ ಎಂಬ ವಾಕ್ಯ ಕಾಣಿಸಿಕೊಳ್ಳಲಿದೆ.

ಬ್ರೈಲ್ ಲಿಪಿಯವರಿಗೆ

ಬ್ರೈಲ್ ಲಿಪಿ ಬಳಸುವವರು ಧ್ವನಿಯ ಮೂಲಕ ಸಂದೇಶ ಕಳುಹಿಸುವುದನ್ನು ಮತ್ತಷ್ಟು ಸುಲಭವಾಗಿಸಲು ಬ್ರೈಲ್ ಕೀಬೋರ್ಡ್ನಿಂದ ಕ್ಷಿಪ್ರವಾಗಿ ಸಂದೇಶ ಕಳುಹಿಸುವುದು ಸಾಧ್ಯ.

ಗ್ರೂಪ್ ಸೇರಿಸಲು ನಿರ್ಬಂಧ

ಇತ್ತೀಚೆಗಷ್ಟೇ ಸೇರಿಸಲಾದ ವೈಶಿಷ್ಟ್ಯದ ಅನುಸಾರ ತಮ್ಮನ್ನು ಯಾರಾದರೂ ಗ್ರೂಪ್ಗಳಿಗೆ ಸೇರಿಸದಂತೆ ಬಳಕೆದಾರರೇ ನಿರ್ಬಂಧಿಸಬಹುದು. ಪ್ರೈವೆಸಿ ವಿಭಾಗದಲ್ಲಿ ಈ ರೀತಿ ಹೊಂದಿಸಬಹುದು.

ಇದನ್ನೂ ಓದಿ:ಡಿಜಿಟಲ್ ವ್ಯಸನ: ಮಕ್ಕಳಿಗೆಷ್ಟು ಹೊತ್ತು ಸ್ಕ್ರೀನ್ ಸಮಯ ನೀಡಬೇಕು?

ಡಾರ್ಕ್ ಮೋಡ್

ಕಣ್ಣಿನ ಸುರಕ್ಷತೆಗಾಗಿ ಈಗ ಹೆಚ್ಚಿನ ಆ್ಯಪ್ಗಳಲ್ಲಿ ಸಾಮಾನ್ಯವಾಗಿರುವ ಡಾರ್ಕ್ ಮೋಡ್ ಕೂಡ ಶೀಘ್ರದಲ್ಲೇ ವಾಟ್ಸ್ಆ್ಯಪ್ಗೆ ದೊರೆಯಲಿದೆ.

ಮಾಹಿತಿ: ಪ್ರಜಾವಾಣಿ ವೆಬ್ಡೆಸ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.