ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಹ್ಯಾಕ್‌: ರಕ್ಷಣೆ ಹೇಗೆ?

Last Updated 2 ಜನವರಿ 2019, 19:30 IST
ಅಕ್ಷರ ಗಾತ್ರ

ಮೊಬೈಲ್‌ಫೋನ್‌ ಈ ಕಾಲದ ಸಂಪತ್ತು ಎಂದರೆ ತಪ್ಪಾಗಲಾರದೇನೊ. ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಮಾಹಿತಿ, ಇ–ಮೇಲ್‌, ಆನ್‌ಲೈನ್‌ ಬ್ಯಾಂಕಿಂಗ್‌... ಹೀಗೆ ಖಾಸಗಿ ಮತ್ತು ಹಣಕಾಸಿಗೆ ಸಂಬಂಧಿಸಿದ ಮಾಹಿತಿಗಳೆಲ್ಲವೂ ಇದರಲ್ಲಿಯೇ ಇಟ್ಟುಕೊಳ್ಳುತ್ತೇವೆ. ಹೀಗಿರುವಾಗ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವೂ ಇದೆಯಲ್ಲವೇ?

ಸಿಮ್ ಸ್ವ್ಯಾಪ್‌

ಅಪರಿಚಿತ ವ್ಯಕ್ತಿಗಳು ನಿಮ್ಮ ಮೊಬೈಲ್‌ಗೆ ಕರೆ ಮಾಡಿ ಸಿಮ್ ಕುರಿತ ಮಾಹಿತಿ ಕೇಳಬಹುದು. ಅಥವಾ ಕಾಲ್‌ಸೆಂಟರ್‌ನಿಂದ ಎಂದು ಹೇಳಿಕೊಂಡು ಕರೆ ಮಾಡಿ, ಉತ್ತಮ ನೆಟ್‌ವರ್ಕ್ ಪಡೆಯಲು ಮೊಬೈಲ್‌ನಲ್ಲಿ ಸೂಚಿಸುವ ಸೆಟ್ಟಿಂಗ್ಸ್ ಮಾಡುವಂತೆ ಹೇಳಬಹುದು. ಹಾಗೆ ಮಾಡಿದರೆ, ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಖಾಸಗಿ ಮಾಹಿತಿ ಕಳುವಾಗುತ್ತದೆ.

ಅಷ್ಟೇ ಅಲ್ಲ, ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಯಲ್ಲಿರುವ ಹಣವೆಲ್ಲವನ್ನೂ ದೋಚಲಾಗುತ್ತದೆ. ಇದು ನಿಮ್ಮನ್ನು ವಂಚಲು ಬಳಸುವ ‘ಸಿಮ್ ಸ್ವ್ಯಾಪ್’ ಎನ್ನುವ ವಿಧಾನ. ಹೀಗಾಗಿ, ಯಾವುದೇ ಕಾರಣಕ್ಕೂ ಇಂತಹ ಮಾತುಗಳಿಗೆ ಕಿವಿಗೊಡಬೇಡಿ.

ವೈಫೈ

ಉಚಿತವಾಗಿ ಸಿಗುವ ವೈಫೈ ಬಳಸುವ ಮುನ್ನ ಎಚ್ಚರಿಕೆಯಿಂದಿರಿ. ವೈಫೈ ಮೂಲಕವೂ ವಂಚನೆ ನಡೆಯುತ್ತಿದೆ. ನಿಮ್ಮದೇ ವೈಫೈ ಸಂಪರ್ಕವನ್ನು ಹ್ಯಾಕ್ ಮಾಡಬಹುದು. ಇದರಿಂದ ರಕ್ಷಣೆ ಪಡೆಯುಲು ಕಾಲಕಾಲಕ್ಕೆ ಪಾಸ್‌ವರ್ಡ್ ಬದಲಾಯಿಸಿ. ಯಾರೂ ಬೇಕಾದರೂ ಬಳಸುವಂತೆ ಮುಕ್ತವಾಗಿ ಬಿಡಬೇಡಿ. ಪ್ರತಿ ಬಾರಿಯೂ ಪಾಸ್‌ವರ್ಡ್ ಮೂಲಕವೇ ಸಾಧನಗಳನ್ನು ವೈಫೈಗೆ ಸಂಪರ್ಕಿಸುವ ಆಯ್ಕೆ ಸಕ್ರಿಯಗೊಳಿಸಿ.

ಎರಡು ಹಂತದ ರಕ್ಷಣೆ: ಜಿ–ಮೇಲ್‌, ಫೇಸ್‌ಬುಕ್‌, ಲಿಂಕ್ಡ್‌ಇನ್‌, ವಾಟ್ಸ್ಆ್ಯಪ್‌ ಹೀಗೆ ಪ್ರತಿಯೊಂದಕ್ಕೂ ಎರಡು ಹಂತದ (ಟೂ ಸ್ಟೆಪ್ ವೆರಿಫಿಕೇಷನ್) ಸುರಕ್ಷತೆ ಬಳಸಿ. ಆದರೆ, ಹ್ಯಾಕರ್‌ಗಳು ಬಹಳ ಚಾಣಾಕ್ಷರು, ರಂಗೋಲಿ ಕೆಳಗೆ ನುಸುಳುವ ಕಲೆ ಕರಗತ ಮಾಡಿಕೊಂಡಿರುತ್ತಾರೆ. ಹೊಸ ಸುರಕ್ಷತಾ ವಿಧಾನ ಅಥವಾ ವ್ಯವಸ್ಥೆ ಬಂದರೆ ಅದನ್ನು ಬೇಧಿಸುವುದು ಹೇಗೆ ಎನ್ನುವುದನ್ನು ಬಹುಬೇಗ ಕಲಿತುಬಿಡುತ್ತಾರೆ.

ಹೀಗಾಗಿ ಈ ಎರಡು ಹಂತದ ಸುರಕ್ಷತೆಯನ್ನೂ ಮುರಿಯುವ ಮಾರ್ಗ ಕಂಡುಕೊಂಡಿದ್ದಾರೆ. ನಿಮ್ಮ ಫೋನ್‌ ನಂಬರ್‌ ಹೈಜಾಕ್‌ ಮಾಡಲು ಇರುವ ಕಳ್ಳದಾರಿಯನ್ನು ಕಂಡುಕೊಂಡಿದ್ದಾರೆ.

ಅವರ ದಾಳಿಯಿಂದ ರಕ್ಷಣೆ ಪಡೆಯಲು ಸೆಕೆಂಡರಿ ನಂಬರ್‌ ಸೃಷ್ಟಿಸಬೇಕು. ಪ್ರೈಮರಿ ಸೆಲ್‌ಫೋನ್‌ಗೆ ಕರೆ ಮತ್ತು ಸಂದೇಶ ಬರುವಂತೆ ಅದನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.

ಎರಡು ಹಂತದ ಸೆಟ್ಟಿಂಗ್ಸ್‌ ಮಾಡುವಾಗ ಸೆಕೆಂಡರಿ ನಂಬರ್‌ ನಿಮ್ಮ ಪ್ರೈಮರಿ ನಂಬರ್‌ ಅನ್ನು ಸುರಕ್ಷಿತವಾಗಿರಿಸುತ್ತದೆ. ನೀವು ಫೋನ್‌ ಕಳೆದುಕೊಂಡರೆ, ನಿಮ್ಮ ಸೆಕೆಂಡರಿ ನಂಬರ್‌ ಸುರಕ್ಷಿತವಾಗಿರುತ್ತದೆ. ಬೇರೆ ಫೋನ್‌ ಅಥವಾ ಜಾಲತಾಣದಲ್ಲಿ ಎರಡು ಹಂತದ ಸುರಕ್ಷತೆ ಬಳಸಬಹುದು.

ಗೂಗಲ್‌ ಖಾತೆ ಸಕ್ರಿಯಗೊಳಿಸಿದರೆ, ವಾಯ್ಸ್‌ಕಾಲ್‌, ಟೆಕ್ಸ್ಟ್‌ ಮತ್ತು ವಾಯ್ಸ್‌ ಮೇಲ್‌ ಕಳುಹಿಸಲು ಗೂಗಲ್‌ ವಾಯ್ಸ್‌ ನಿಮಗೊಂದು ಉಚಿತ ಫೋನ್‌ ನಂಬರ್‌ ನೀಡುತ್ತದೆ.

ಗೂಗಲ್‌ ವಾಯ್ಸ್‌ ನಂಬರ್‌ ಬಳಕೆ ಹೇಗೆ?

ಐಒಎಸ್‌ ಮತ್ತು ಆಂಡ್ರಾಯ್ಡ್‌ಗೆ ಲಭ್ಯವಿರುವ ಗೂಗಲ್‌ ವಾಯ್ಸ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡಿ. ಗೂಗಲ್‌ ಅಕೌಂಟ್‌ ಅನ್ನು ಅದಕ್ಕೆ ಲಿಂಕ್‌ಮಾಡಿ. ಬಳಿಕ, ಗೂಗಲ್‌ ವಾಯ್ಸ್‌ ನಂಬರ್‌ ಆಯ್ಕೆ ಮಾಡಲು ಅವಕಾಶ ಸಿಗುತ್ತದೆ. ಜಿಪ್‌ಕೋಡ್‌ ಅಥವಾ ನಗರದ ಹೆಸರಿನ ಮೂಲಕ ಲಭ್ಯವಿರುವ ನಂಬರ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ನಿಖರವಾದ ಸ್ಥಳದ ನಂಬರ್‌ ಪಡೆಯದೇ ಸ್ವಲ್ಪ ದೂರ ಇರುವ ನಂಬರ್ ಪಡೆಯುವುದು ಹೆಚ್ಚು ಸೂಕ್ತ.

ನಂಬರ್‌ ಆಯ್ಕೆ ಮಾಡಿಕೊಂಡ ಬಳಿಕ, ಸಕ್ರಿಯವಾಗಿರುವ ಫೋನ್‌ ನಂಬರ್‌ಗೆ ಆ ನಂಬರ್‌ ಅನ್ನು ಲಿಂಕ್‌ ಮಾಡಿ ವೆರಿಫೈ ಮಾಡಬೇಕು. ನಿಮ್ಮೆಲ್ಲಾ ಗೂಗಲ್‌ ವಾಯ್ಸ್‌ ಕಾಲ್‌, ಟೆಕ್ಸ್ಟ್‌ ಮೆಸೇಜ್‌ಗಳು ಈ ನಂಬರ್‌ಗೆ ಫಾರ್ವರ್ಡ್ ಆಗುತ್ತವೆ. ಒಂದೊಮ್ಮೆ ಎರಡು ಹಂತದ ಸುರಕ್ಷತೆಗೆ ಗೂಗಲ್‌ ವಾಯ್ಸ್ ನಂಬರ್‌ ಬಳಸುವುದಾದರೆ, ಕಾಲ್‌ ಫಾರ್ವರ್ಡಿಂಗ್ ಆಯ್ಕೆ ಡಿಸೆಬಲ್ ಮಾಡಬೇಕು.

ಗೂಗಲ್‌ ವಾಯ್ಸ್‌ ಖಾತೆ ದೃಢೀಕರಿಸಲು ನಿಮ್ಮ ಮೊಬೈಲ್‌ ನಂಬರ್‌ಗೆ ಆರು ಅಂಕಿಗಳ ಕೋಡ್‌ಬರುತ್ತದೆ. ಅದನ್ನು ನೀಡಿದರೆ ಗೂಗಲ್‌ ವಾಯ್ಸ್‌ ಫೋನ್‌ ನಂಬರ್‌ ಬಳಕೆ ಮಾಡಬಹುದು.

ಇಲ್ಲೂ ಒಂದು ಸಮಸ್ಯೆ ಇದೆ. ಒಂದೊಮ್ಮೆ ಹ್ಯಾಕರ್‌ಗಳು ನಿಮ್ಮ ಗೂಗಲ್‌ ಖಾತೆಯನ್ನೇ ಹ್ಯಾಕ್‌ ಮಾಡಿದರೆ, ಆಗ ಸುಲಭವಾಗಿ ಮಾಹಿತಿಗೆ ಕನ್ನ ಹಾಕಬಹುದು.

ಅಧಿಕೃತ ಆ್ಯಪ್‌ಬಳಕೆ

ಟೆಕ್ಸ್ಟ್ ಮೆಸೇಜ್‌ಗೆಂದೇ ಇರುವ Duo, Authy, Microsoft, LastPass or FreeOTP ಆ್ಯಪ್‌ ಬಳಕೆ ಹೆಚ್ಚು ಸೂಕ್ತ ಎನ್ನುವುದು ತಜ್ಞರ ಸಲಹೆ. ಇವುಗಳನ್ನು ಬಳಸುವುದರಿಂದ ಲಾಗಿನ್ ಸುರಕ್ಷತೆ ಇರುವುದರ ಜತೆಗೆ ಹ್ಯಾಕಿಂಗ್ ದಾಳಿಗೆ ಸುಲಭವಾಗಿ ತುತ್ತಾಗುವ ಅಪಾಯವೂ ಕಡಿಮೆ ಇರುತ್ತದೆ ಎನ್ನುತ್ತಾರೆ ಅವರು.

ಫೋನ್‌ ಹ್ಯಾಕ್‌ ಆಗಲು ಕಾರಣಗಳೇನು?

ಪ್ಲೆಸ್ಟೋರ್‌ನಿಂದಲೇ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವುದು ಒಳಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ, ಪ್ಲೇಸ್ಟೋರ್ ಗಳಿಗೂ ಹ್ಯಾಕರ್ ದಾಳಿ ನಡೆಸಿ ವಂಚನೆ ನಡೆಸಿದ ಪ್ರಕರಣಗಳಿವೆ. ಹೀಗಾಗಿ ಆ್ಯಪ್‌ಗಳನ್ನು ಡೌನ್ ಲೋಡ್ ಮಾಡುವಾಗ ಕೇಳುವ ಪರ್ಮಿಷನ್‌ಗಳನ್ನು ಗಮನಿಸಿ, ಆಫ್‌ಲೈನ್ ಗೇಮಿಂಗ್ ಆ್ಯಪ್‌ಗೆ ಕಾಂಟ್ಯಾಕ್ಟ್, ಗ್ಯಾಲರಿ, ಲೊಕೇಷನ್ ಪರ್ಮಿಷನ್ ಅನಗತ್ಯ. ಹೀಗೆ ಪ್ರತಿಯೊಂದು ಆ್ಯಪ್‌ ಡೌನ್‌ಲೋಡ್ ಮಾಡುವಾಗಲೂ ಪರ್ಮಿಷನ್ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ. ಅನಿವಾರ್ಯ ಅಲ್ಲದೇ ಇದ್ದರೆ ಥರ್ಡ್‌ಪಾರ್ಟಿ ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡದೇ ಇರುವುದೇ ಒಳಿತು.

ಮೊಬೈಲ್‌ಗೆ ಬರುವ ಅಪರಿಚಿತ ಸಂದೇಶಗಳ ಲಿಂಕ್‌ ಕ್ಲಿಕ್‌ ಮಾಡುವುದರಿಂದ ಹ್ಯಾಕ್‌ ಆಗುತ್ತದೆ. ಇಂತಹ ಲಿಂಕ್‌ಗಳು ಯಾವುದಾದರೂ ಹೊಸ ಉತ್ಪನ್ನ ಅಥವಾ ರಿಯಾಯಿತಿ ಮಾರಾಟದ ಆಮಿಷಗಳಿಂದ ಕೂಡಿರುತ್ತವೆ. ಅದನ್ನು ಕ್ಲಿಕ್ ಮಾಡುವಂತೆ ಸೆಳೆಯುತ್ತವೆ. ಅದನ್ನು ಕ್ಲಿಕ್ ಮಾಡಿದಾಕ್ಷಣ ನಮ್ಮ ಫೋನ್‌ನಲ್ಲಿರುವ ಮಾಹಿತಿ ಪಡೆಯುವ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಇದರಿಂದ ಹ್ಯಾಕರ್‌ಗಳು ನಿಮ್ಮ ಫೋನ್‌ಗೆ ಮಾಲಿಷಿಯಸ್ ಕೋಡ್ ಇನ್ ಸ್ಟಾಲ್ ಮಾಡಿ ಮೆಸೇಜ್, ಫೋಟೊ ಮತ್ತು ಮೈಕ್ರೊಫೋನ್ ಮೇಲೂ ನಿಯಂತ್ರಣ ಸಾಧಿಸುತ್ತಾರೆ. ಖಾಸಗಿ ಮತ್ತು ಕಾರ್ಪೊರೇಟ್ ಮಾಹಿತಿಗಳಾದ ಬ್ಯಾಂಕ್ ಖಾತೆ ಸಂಖ್ಯೆ, ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಫೋನ್ ಮೇಲೆ ನಿಯಂತ್ರಣ ಸಾಧಿಸುವುದರಿಂದ ಹ್ಯಾಕರ್‌ಗಳು ಜಿಪಿಎಸ್ ಸಹಾಯದಿಂದ ನಿಮ್ಮ ಸ್ಥಳದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಕಾಲಕಾಲಕ್ಕೆ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದರಿಂದಲೂ ಹ್ಯಾಕಿಂಗ್ ದಾಳಿಯಿಂದ ರಕ್ಷಣೆ ಪಡೆಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT