ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌: ಸದಾಕಾಲ ಚಾಟ್‌ ಮ್ಯೂಟ್‌ ಮಾಡಲು 'Always' ಆಯ್ಕೆ

Last Updated 23 ಅಕ್ಟೋಬರ್ 2020, 9:52 IST
ಅಕ್ಷರ ಗಾತ್ರ

ಬೆಂಗಳೂರು: 'ಬೇಡ ಬೇಡವೆಂದರೂ ವಾಟ್ಸ್ಆ್ಯಪ್‌ ಗ್ರೂಪ್‌ಗಳಿಗೆ ಸೇರಿಸ್ತಾರೆ', 'ಗುಡ್‌ ಮಾರ್ನಿಂಗ್‌–ಗುಡ್‌ ನೈಟ್‌ ಮೆಸೇಜ್‌ಗಳಿಂದಲೇ ತುಂಬಿ ಹೋಗುತ್ತೆ', 'ಕೆಲಸದ ನಡುವೆ ಪಟಪಟನೆ ಚಾಟ್‌ಗಳು ತುಂಬಿಕೊಳ್ತವೆ', 'ಬರೀ ಫಾರ್ವಡ್‌ ಮಾಡೋದೆ ಆಗೋಯ್ತು',... ವಾಟ್ಸ್‌ಆ್ಯಪ್‌ ಬಳಸುವ ಬಹುಪಾಲು ಜನರದ್ದು ಇಂಥದ್ದೇ ಅಳಲು. ಇದರಿಂದ ಮುಕ್ತಿ ಪಡೆಯೋಕೆ ವಾಟ್ಸ್‌ಆ್ಯಪ್‌ ಮ್ಯೂಟ್‌ 'ಆಲ್ವೇಸ್‌' ಸೌಲಭ್ಯ ಪರಿಚಯಿಸಿದೆ.

ನಿಮಗೆ ಸಂದೇಶಗಳನ್ನು ನೋಡಲು ಇಷ್ಟ ಇರದ ಗ್ರೂಪ್‌ಗಳು ಅಥವಾ ನಿರ್ದಿಷ್ಟ ಸಂಖ್ಯೆಯಿಂದ ಬರುವ ಚಾಟ್‌ಗಳಿಂದ ನಿತ್ಯದ ಕಾರ್ಯಗಳಲ್ಲಿ ಕಿರಿಕಿರಿ ಉಂಟಾಗುವುದರಿಂದ ತಪ್ಪಿಸಿಕೊಳ್ಳಲು ನೋಟಿಫಿಕೇಷನ್‌ 'ಮ್ಯೂಟ್‌' ಸೌಲಭ್ಯ ಬಳಕೆಯಲ್ಲಿದೆ. ಆದರೆ, 8 ಗಂಟೆಗಳು, 1 ವಾರ ಹಾಗೂ 1 ವರ್ಷದ ವರೆಗೂ ಚಾಟ್‌ ಸದ್ದು ಅಡಗಿಸಬಹುದಾದ ಆಯ್ಕೆ ಮಾತ್ರ ಈವರೆಗೂ ಇತ್ತು. ಇದೀಗ ಆ್ಯಪ್‌ ಬಳಸುವ ಎಲ್ಲ ಕಾಲವೂ ಚಾಟ್‌ ಮ್ಯೂಟ್‌ ಮಾಡಲು 'ಆಲ್ವೇಸ್‌' (Always)ಆಯ್ಕೆ ಸಹಕಾರಿಯಾಗಲಿದೆ.

1 ವರ್ಷ ಆಯ್ಕೆಯ ಬದಲು 'ಆಲ್ವೇಸ್‌' ಸೇರ್ಪಡೆಯಾಗುತ್ತಿದೆ. ಹೊಸ ಆಯ್ಕೆಯ ಬಗ್ಗೆ ವಾಟ್ಸ್‌ಆ್ಯಪ್‌ ಸಂಸ್ಥೆಯು ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿದೆ. ಶುಕ್ರವಾರ ವಾಟ್ಸ್‌ಆ್ಯಪ್‌ ಇದೇ ವಿಚಾರವಾಗಿ ಟ್ವಿಟರ್‌ನಲ್ಲಿ ಟ್ರೆಂಡ್‌ ಸಹ ಆಗಿದೆ. ಐಒಎಸ್‌ ಮತ್ತು ಆ್ಯಂಡ್ರಾಯ್ಡ್‌ ಎರಡೂ ವೇದಿಕೆಗಳಲ್ಲಿಯೂ ಈ ಸೌಲಭ್ಯ ಸಿಗಲಿದೆ.

ಚಾಟ್‌ ಮ್ಯೂಟ್‌ ಮಾಡುವುದು ಹೇಗೆ?

ನೀವು ಮ್ಯಾಟ್‌ ಮಾಡಬೇಕಿರುವ ಗ್ರೂಪ್‌ ಅಥವಾ ನಿರ್ದಿಷ್ಟ ವ್ಯಕ್ತಿಯ ಚಾಟ್‌ಗೆ ಹೋಗಿ, ಬಲ ತುದಿಯಲ್ಲಿ ಸಿಗುವ ಮೆನು ಒತ್ತಿ ಹಾಗೂ ಅದರಲ್ಲಿ ಮ್ಯೂಟ್‌ ನೋಟಿಫೀಕೇಷನ್ಸ್‌ (Mute notifications) ಆಯ್ಕೆ ಮಾಡಿ. ಅದರಲ್ಲಿ ಕಾಣಿಸಿಕೊಳ್ಳುವ 3 ಆಯ್ಕೆಗಳ ಪೈಕಿ ಆಲ್ವೇಸ್‌ ಸಹ ಇರುತ್ತದೆ. ಆಲ್ವೇಸ್‌ ಆಯ್ಕೆಯನ್ನು ಚೆಕ್‌ ಮಾಡಿ (ಒತ್ತಿ) ಒಕೆ ಕೊಡಿ. ಮ್ಯೂಟ್‌ ಮಾಡಿಯೂ ನೋಟಿಫಿಕೇಷನ್‌ ನೋಡಲು ಬಯಸಿದರೆ, ಶೋ ನೋಟಿಫಿಕೇಷನ್‌ ಕ್ಲಿಕ್‌ ಮಾಡಿಕೊಳ್ಳಬಹುದು. ಮ್ಯೂಟ್‌ ಆದ ಮೇಲೆ ಯಾವುದೇ ಸಮಯದಲ್ಲಿಯೂ ಅದನ್ನು ತೆಗೆಯುವ (Unmute) ಆಯ್ಕೆಯು ಗೋಚರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT