ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್ ಸಿಇಓ ಹುದ್ದೆಗೇರುತ್ತಿರುವ ಆ್ಯಂಡಿ ಜಾಸ್ಸಿ ಯಾರು? ಇಲ್ಲಿದೆ ಮಾಹಿತಿ

Last Updated 3 ಫೆಬ್ರುವರಿ 2021, 5:18 IST
ಅಕ್ಷರ ಗಾತ್ರ

ನವದೆಹಲಿ: ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯೂಎಸ್) ಮುಖ್ಯಸ್ಥ ಆ್ಯಂಡಿ ಜಾಸ್ಸಿ ಅವರು ಬಿಲಿಯನೇರ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬಳಿಕ ಅಮೆಜಾನ್ ಡಾಟ್ ಕಾಂನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕವಾಗಲಿದ್ದಾರೆ.

ಹಾಗಾದರೆ, ಜಗತ್ತಿನ ಜನಪ್ರಿಯ ಟೆಕ್ ದೈತ್ಯ ಅಮೆಜಾನ್ ಸಂಸ್ಥೆಯ ಉನ್ನತ ಹುದ್ದೇಗೇರುತ್ತಿರುವ ಆ್ಯಂಡಿ ಜಾಸ್ಸಿ ಯಾರು? ಅವರ ಹಿನ್ನೆಲೆ ಏನೂ? ಎಂಬ ಮಾಹಿತಿ ಇಲ್ಲಿದೆ.

1997 ರಲ್ಲಿ ಅಮೆಜಾನ್ ಸಂಸ್ಥೆ ಸೇರಿದ ಜಾಸ್ಸಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಮುಗಿಸಿದ್ದಾರೆ.

"ನಾನು 1997 ರಲ್ಲಿ ಮೇ ಮೊದಲ ಶುಕ್ರವಾರದಂದು ಎಚ್‌ಬಿಎಸ್‌(ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌)ನಲ್ಲಿ ನನ್ನ ಅಂತಿಮ ಪರೀಕ್ಷೆಯನ್ನು ಬರೆದ. ಅದಾದ ಮುಂದಿನ ಸೋಮವಾರ ನಾನು ಅಮೆಜಾನ್ ಸಂಸ್ಥೆಯಲ್ಲಿ ಕೆಲಸ ಆರಂಭಿಸಿದೆ" ಎಂದು ಸೆಪ್ಟೆಂಬರ್‌ನಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಪಾಡ್‌ಕ್ಯಾಸ್ಟ್‌ನಲ್ಲಿ ಜಾಸ್ಸಿ ಹೇಳಿದ್ದರು. "ನನ್ನ ಕೆಲಸ ಏನಿರಲಿದೆ ಅಥವಾ ನನ್ನ ಹುದ್ದೆ ಏನು ಎಂಬ ಬಗ್ಗೆ ನನಗೆ ತಿಳಿದಿರಲಿಲ್ಲ. ಅಮೆಜಾನ್ ಸಂಸ್ಥೆಗೆ ನಾನು ಆ ಸೋಮವಾರ ಹೋಗುವುದು ಬಹಳ ಮುಖ್ಯವಾಗಿತ್ತು." ಎಂದು ಅವರು ಹೇಳಿದ್ದಾರೆ.

ಜಾಸ್ಸಿ ಎಲಾನಾ ರೋಚೆಲ್ ಕ್ಯಾಪ್ಲಾನ್ ಅವರನ್ನು ವಿವಾಹವಾಗಿರುವ ಜಾಸ್ಸಿ ಇಬ್ಬರು ಮಕ್ಕಳ ತಂದೆ. ಅವರೇ ಹೇಳಿಕೊಳ್ಳುವಂತೆ ಜಾಸ್ಸಿ ಕ್ರೀಡೆ ಮತ್ತು ಸಂಗೀತದ ಅಭಿಮಾನಿಯೂ ಹೌದು.

2006 ರಲ್ಲಿ, ಜಾಸ್ಸಿ ಅಮೆಜಾನ್ ವೆಬ್ ಸರ್ವೀಸಸ್ ( AWS)ಅನ್ನು ಸ್ಥಾಪಿಸಿದರು, ಇದು ಅಮೆಜಾನ್‌ನ ಕ್ಲೌಡ್ ಸರ್ವಿಸ್ ವೇದಿಕೆಯಾಗಿದ್ದು, ವಿಶ್ವದಾದ್ಯಂತ ಲಕ್ಷಾಂತರ ವ್ಯವಹಾರಗಳಿಗೆ ಬಳಸಲಾಗುತ್ತಿದೆ. ಈ ಸೇವೆಯು ಮೈಕ್ರೋಸಾಫ್ಟ್ ಕಾರ್ಪ್‌ನ ಅಜುರ್ ( Azure) ಮತ್ತು ಆಲ್ಫಾಬೆಟ್ ಇಂಕ್‌ನ ಗೂಗಲ್ ಕ್ಲೌಡ್ ಗೆ ಸಮನಾದುದಾಗಿದೆ.

ಆಗಾಗ್ಗೆ ಸಾಮಾಜಿಕ ಕಳಕಳಿ ಕುರಿತಾದ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಜಾಸ್ಸಿ, ಬ್ರೋನಾ ಟೇಲರ್ ಎಂಬ ಕಪ್ಪು ಮಹಿಳೆ ತನ್ನ ಮನೆಯಲ್ಲೇ ಬಿಳಿ ಪೊಲೀಸರಿಂದ ಹಲ್ಲೆಗೊಳಗಾದ ನಂತರ ಎಲ್‌ಜಿಬಿಟಿಕ್ಯು ಹಕ್ಕುಗಳ ಪರವಾಗಿ ಪೋಲಿಸ್ ಹೊಣೆಗಾರಿಕೆಯ ಅಗತ್ಯತೆಯ ಬಗ್ಗೆ ಟ್ವೀಟ್ ಮಾಡಿದ್ದರು.


ವಾರ ತನ್ನ ಸತತ ಮೂರನೇ ದಾಖಲೆಯ ಲಾಭ ಮತ್ತು ತ್ರೈಮಾಸಿಕ ಮಾರಾಟದಲ್ಲಿ ಮೊದಲ ಬಾರಿಗೆ 100 ಶತಕೋಟಿಗಿಂತ ಹೆಚ್ಚಿನ ವಹಿವಾಟು ನಡೆಸಿರುವ ಬಗ್ಗೆ ವರದಿ ಮಾಡಿದೆ. ಇದೇ ಸಂದರ್ಭ ಜಾಸ್ಸಿ ಅವರನ್ನು ಬೆಜೋಸ್‌ ಬಳಿಕ ಸಿಇಒ ಆಗಿ ನೇಮಕ ಮಾಡುವ ಬಗ್ಗೆ ತಿಳಿಸಿದೆ.

ಅಮೆಜಾನ್ ಮಂಗಳವಾರ ತನ್ನ ಸತತ ಮೂರನೇ ದಾಖಲೆಯ ಲಾಭ ಮತ್ತು ತ್ರೈಮಾಸಿಕ ಮಾರಾಟದಲ್ಲಿ ಮೊದಲ ಬಾರಿಗೆ 100 ಶತಕೋಟಿಗಿಂತ ಹೆಚ್ಚಿನ ವಹಿವಾಟು ನಡೆಸಿರುವ ಬಗ್ಗೆ ವರದಿ ಮಾಡಿದೆ. ಇದೇ ಸಂದರ್ಭ ಜಾಸ್ಸಿ ಅವರನ್ನು ಬೆಜೋಸ್‌ ಬಳಿಕ ಸಿಇಒ ಆಗಿ ನೇಮಕ ಮಾಡುವ ಬಗ್ಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT