ಮೃಗಾಲಯದ ಮೂಲೆಯಲ್ಲಿ ಗೊಂಬೆಯ ಮೇಲೆ ಕುಳಿತು ಕೈಬೆರಳು ಚೀಪುತ್ತಾ ಬಂದವರ ಕಡೆ ಪಿಳಿ ಪಿಳಿ ನೋಡುವ ಕೋತಿ ಮರಿಯ ಕಥೆಯೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ತಾಯಿಯ ಪ್ರೀತಿ ಸಿಗದೇ ಗೊಂಬೆಯನ್ನೇ ತಾಯಿ ಎಂದುಕೊಂಡ ಕೋತಿ ಮರಿಯ ಕಂಡು ಮರುಗದ ಹೃದಯವೇ ಇಲ್ಲ...

ಜಪಾನ್ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಕೋತಿಯ ಹೆಸರು ಪಂಚ್. ಹುಟ್ಟಿದ ಸ್ವಲ್ಪ ಸಮಯದಲ್ಲೇ ತಾಯಿಯಿಂದ ತಿರಸ್ಕೃತವಾಗುವ ಪಂಚ್ನನ್ನು ಅಲ್ಲಿರುವ ಇತರ ಕೋತಿಗಳು ದೂರ ಮಾಡುತ್ತವೆ. ಯಾರ ಪ್ರೀತಿ ಸಿಗದ ಪಂಚ್ಗೆ ಕೊನೆಗೇ ಗೊಂಬೆಯೇ ತಾಯಿಯಾಗುತ್ತದೆ.

ಪಂಚ್ಗೆ ಏಳು ತಿಂಗಳಾದರೂ ತಾಯಿ ಮನಸ್ಸು ಮಾತ್ರ ಕರಗಲಿಲ್ಲ. ಪ್ರೀತಿ ಬಯಸಿ ತಾಯಿ ಬಳಿಗೆ ಹೋದರೆ, ಕಾಲಿನಿಂದ ಒದ್ದು ಕಳುಹಿಸುತ್ತದೆ. ಇದರಿಂದ ನೊಂದ ಮರಿ ಮತ್ತೆ ಗೊಂಬೆಯನ್ನು ಎಳೆದುಕೊಂಡು ಮೃಗಾಲಯದ ಸುತ್ತ ತಿರುಗುತ್ತದೆ. ನಿಜಕ್ಕೂ ಈ ದೃಶ್ಯ ಎಂತಹ ಕಲ್ಲು ಮನಸ್ಸನ್ನು ಕರಗಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಪಂಚ್ ತಾನು ಹೋಗುವ ಕಡೆಯಲೆಲ್ಲಾ ಗೊಂಬೆಯನ್ನು ತೆಗೆದುಕೊಂಡು ಹೋಗುತ್ತದೆ. ಮಲಗುವ ವೇಳೆಯೂ ಗೊಂಬೆ ಇರಬೇಕು. ತನ್ನ ಪುಟ್ಟ ಕೈಯಲ್ಲಿ ಗೊಂಬೆಯನ್ನು ಹಿಡಿದು ಎಳೆದುಕೊಂಡು ಹೋಗುವ ದೃಶ್ಯ ಕಣ್ಣಂಚಲ್ಲಿ ನೀರು ತರಿಸುವುದಂತು ಸತ್ಯ.

ಹೆತ್ತ ಮರಿಯನ್ನು ದೂರಮಾಡುವ ಪ್ರವೃತ್ತಿ ಪ್ರಾಣಿಗಳಲ್ಲಿ ಸಾಮಾನ್ಯ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಮೊದಲ ಬಾರಿ ತಾಯಿಯಾಗುವ ಪ್ರಾಣಿಗಳಲ್ಲಿ ಈ ಪ್ರವೃತ್ತಿ ಕಾಣಬಹುದು. ಪಂಚ್ ತಾಯಿಗೂ ಇದು ಮೊದಲ ಹೆರಿಗೆ. ಆದ್ದರಿಂದ ಅದು ಮರಿಯನ್ನು ತಿರಸ್ಕರಿಸಿದೆ ಎನ್ನುತ್ತಾರೆ ಪಂಚ್ನ ಪಾಲಕರಾದ ಕೊಸುಕೆ ಶಿಕಾನೊ.

‘ತಾಯಿ ದೂರ ಮಾಡಿದ ಮರಿಯನ್ನು ಇತರ ಕೋತಿಗಳು ಆರೈಕೆ ಮಾಡುತ್ತವೆ. ಆದರೆ, ಪಂಚ್ ವಿಷಯದಲ್ಲಿ ಹಾಗಾಗಲಿಲ್ಲ. ನಾವು ತುಂಬಾ ಸಮಯದಿಂದ ಗಮನಿಸಿದೆವು. ಯಾವ ಕೋತಿ ಕೂಡ ಪಂಚ್ನನ್ನು ಸೇರಿಸಿಕೊಂಡಿಲ್ಲ. ಆದ್ದರಿಂದ ನಾವೇ ಆರೈಕೆ ಮಾಡಬೇಕಾಯಿತು. ಒಂಟಿತನ ಕಾಡಬಾರದೆಂದು ಗೊಂಬೆಯನ್ನು ನೀಡಿದೆವು’ ಎಂದು ಅವರು ಹೇಳಿದ್ದಾರೆ.

ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಂಚ್ನನ್ನು ನೋಡುವುದಕ್ಕಾಗಿಯೇ ಮೃಗಾಲಯಕ್ಕೆ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.