ಗುರುವಾರ , ಫೆಬ್ರವರಿ 20, 2020
23 °C

ಬರ್ಲಿನ್: 99 ಮೊಬೈಲ್ ಬಳಸಿ ಗೂಗಲ್‌ ಮ್ಯಾಪ್‌ನಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬರ್ಲಿನ್: ಬಳಕೆಯಲ್ಲಿರುವ 99 ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಫೋನ್‌ಗಳನ್ನು ಟ್ರಾಲಿ ಅಥವಾ ಪುಟ್ಟ ಕೈಗಾಡಿಯಲ್ಲಿ ತುಂಬಿಕೊಂಡು ನಗರದ ಮುಖ್ಯ ಸೇತುವೆ, ಪ್ರಮುಖ ರಸ್ತೆಗಳಲ್ಲಿ ಎಳೆದು ಹೋಗುವ ಮೂಲಕ ಗೂಗಲ್ ಮ್ಯಾಪ್‌ನಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಸಿಲಾಗಿದೆ.

ಜರ್ಮನ್‌ ಕಲಾವಿದ ಸಿಮೊನ್‌ ವೆಕರ್ಟ್ಸ್ ಬರ್ಲಿನ್‌ ನಗರದ ಪ್ರಮುಖ ಸ್ಥಳಗಳಲ್ಲಿ ಕೆಂಪು ಬಣ್ಣದ ಕೈಗಾಡಿ ಮೂಲಕ 99 ಮೊಬೈಲ್ ಪೋನ್‌ಗಳನ್ನು ತೆಗೆದುಕೊಂಡು ಹೋಗಿ ಕೃತಕ ವಾಹನ ದಟ್ಟಣೆ ಸೃಷ್ಟಿಸಿದ್ದಾರೆ. 99 ಮೊಬೈಲ್‌ ನೆಟ್‌ವರ್ಕ್‌ಗಳು ನಿಧಾನಗತಿಯಲ್ಲಿ ಚಲಿಸುತ್ತಿರುವುದನ್ನು ಗಮನಿಸಿದ ಗೂಗಲ್ ಸರ್ವರ್ ಗೂಗಲ್ ಮ್ಯಾಪ್‌ನಲ್ಲಿ ಈ ಪ್ರದೇಶದಲ್ಲಿ ವಾಹನ ದಟ್ಟಣೆಯಿರುವುದಾಗಿ ತೋರಿಸಿದೆ.

'ಗೂಗಲ್‌ ಮ್ಯಾಪ್‌ ಹ್ಯಾಕ್ಸ್‌' ವಿಡಿಯೊ ಫೆಬ್ರುವರಿ 1ರಂದು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಈವರೆಗೆ 16.68 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ವಿಡಿಯೊ ಗೂಗಲ್‌ ಗಮನವನ್ನೂ ಸೆಳೆದಿದ್ದು, 'ಕಾರು, ಗಾಡಿ ಅಥವಾ ಒಂಟೆ ಯಾವುದೇ ಆಗಲಿ, ಗೂಗಲ್‌ ಮ್ಯಾಪ್‌ನ ಕ್ರಿಯಾಶೀಲ ಬಳಕೆಯು ನಮಗೆ ಮ್ಯಾಪ್‌ ಮತ್ತಷ್ಟು ಉತ್ತಮಗೊಳಿಸಲು ಸಹಕಾರಿಯಾಗುತ್ತದೆ' ಎಂದು ಗೂಗಲ್‌ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. 

ಬರ್ಲಿನ ಗೂಗಲ್‌ನ ಕಚೇರಿಯ ಮಂದೆ ಹಾದು ಹೋಗುವ ವಿಡಿಯೊವನ್ನು ಸಿಮೊನ್‌ ಯುಟ್ಯೂಬ್‌ಬಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕಚೇರಿಯ ಮುಂದಿರುವ ರಸ್ತೆಯಲ್ಲಿ ವಾಹನ ದಟ್ಟಣೆ ಇರದಿದ್ದರೂ, ಗೂಗಲ್‌ ಮ್ಯಾಪ್‌ನಲ್ಲಿ ಆ ಹಾದಿ ಕೆಂಪು ಬಣ್ಣದಲ್ಲಿ ತೋರುತ್ತಿತ್ತು. 

ಗೂಗಲ್‌ ಮ್ಯಾಪ್‌ 15 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲೇ ಈ ವಿಡಿಯೊ ಕೃತಿ ಬಿಡುಗಡೆಯಾಗಿದೆ. ಗೂಗಲ್‌ ಡೇಟಾ ಸಂಗ್ರಹವನ್ನು ಕುಚೇಷ್ಟೆ ಮಾಡಲು ಬಳಸಿಕೊಳ್ಳುವುದು ಹಿಂದಿನಿಂದಲೂ ನಡೆದಿದೆ. 2015ರಲ್ಲಿ ಗೂಗಲ್‌, 'ಮ್ಯಾಪ್‌ ಮೇಕರ್‌' ಸೇವೆಯನ್ನೇ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿತು. ಹಿಂದೆ ಮ್ಯಾಪ್‌ ಮೇಕರ್‌ ಸೇವೆ ಬಳಸಿಕೊಂಡು ಕೃತಕ ಪಾರ್ಕ್‌ ಸೃಷ್ಟಿಸಿ ಆ್ಯಂಡ್ರಾಯ್ಡ್‌ ಕಂಪನಿಯ ಲೋಗೊ ಆ್ಯಪಲ್‌ ಟ್ರೇಡ್‌ ಮಾರ್ಕ್‌ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವಂತೆ ಎಡಿಟ್‌ ಮಾಡಲಾಗಿತ್ತು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು